ಅಂಬಿ ಪುಣ್ಯ ತಿಥಿಯಲ್ಲಿ ಭಾಗಿಯಾದ ಯಶ್​: ಕೆ.ಜಿ.ಎಫ್​ ಗೆಲುವಿನ ಜತೆಗೆ ಅಣ್ಣನನ್ನು ನೆನಪಿಸಿಕೊಂಡ ರಾಕಿಂಗ್​ ಸ್ಟಾರ್​..!

Anitha E | news18
Updated:December 21, 2018, 3:35 PM IST
ಅಂಬಿ ಪುಣ್ಯ ತಿಥಿಯಲ್ಲಿ ಭಾಗಿಯಾದ ಯಶ್​: ಕೆ.ಜಿ.ಎಫ್​ ಗೆಲುವಿನ ಜತೆಗೆ ಅಣ್ಣನನ್ನು ನೆನಪಿಸಿಕೊಂಡ ರಾಕಿಂಗ್​ ಸ್ಟಾರ್​..!
  • News18
  • Last Updated: December 21, 2018, 3:35 PM IST
  • Share this:
ಇಂದು ಎಲ್ಲೆಡೆ ಕನ್ನಡದ ಬಹು ನಿರೀಕ್ಷಿತ ಸಿನಿಮಾ 'ಕೆ.ಜಿಎಫ್​'  ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುವುದರೊಂದಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಯಶ್​ ಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಅಭಿಮಾನಿಗಳೊಂದಿಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಕಾಯುತ್ತಿದ್ದರು.

ಇದನ್ನೂ ಓದಿ: ಜನವರಿ 7ರವರೆಗೆ ಕೆ.ಜಿ.ಎಫ್​.ಗೆ ಬಿಡುಗಡೆ ಭಾಗ್ಯವಿಲ್ಲ: ಎಷ್ಟೆಲ್ಲ ತಯಾರಿ ಮಾಡಿಕೊಂಡಿತ್ತು ಚಿತ್ರತಂಡ..!

ಆದರೆ ಯಶ್​ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದರೂ, ತಮ್ಮ ಅಣ್ಣ ಅಂಬಿಯ ನೆನಪಿನಲ್ಲಿದ್ದಾರೆ. ಹೌದು, ಇಂದು ಅಂಬರೀಷ ಅವರ ಪುಣ್ಯ ತಿಥಿ. ಹೀಗಾಗಿ ಸಿನಿಮಾ ನೋಡುವುದಕ್ಕಿಂತ  ಹೆಚ್ಚಾಗಿ ಅಂಬಿ ಅವರ ಮನೆಗೆ ಭೇಟಿ ನೀಡಿದ್ದರು. ಅಲ್ಲದೆ ಅಂಬರೀಷ ಅವರನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ಟ್ವೀಟ್ ಹಾಗೂ ಫೇಸ್​ಬುಕ್ ಪೋಸ್ಟ್​​ ನೋಡಿದರೆ ಅರ್ಥವಾಗುತ್ತದೆ.

 

ಈ ಸಿನಿಮಾದ ಟ್ರೈಲರ್​ ಬಿಡುಗಡೆಯಲ್ಲಿ ಅಂಬಿ ಭಾಗಿಯಾಗಿದ್ದರು. ಅಲ್ಲದೆ ಯಶ್​ ಗಡ್ಡ ಬಿಟ್ಟಿದ್ದನ್ನು ನೋಡಿ, ಯಾವಾಗ ಇದನ್ನು ತೆಗೆಯುತ್ತೀಯಾ ಅಂತ ತಮಾಷೆ ಸಹ ಮಾಡಿದ್ದರು. 'ಕೆ.ಜಿ.ಎಫ್​' ಗೆಲುವಿಗಾಗಿ ಅಂಬಿ ಸಹ ಶುಭಹಾರೈಸಿದ್ದರು. ಆದರೆ ಅಂಬಿಯ ಆರ್ಶೀವಾದ ಫಲ ನೀಡಿದೆ. ಆದರೆ ಅದನ್ನು ನೋಡಲು ಮಾತ್ರ ಅವರೇ ಇಲ್ಲ. 

First published: December 21, 2018, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading