• Home
  • »
  • News
  • »
  • entertainment
  • »
  • KGF Actor Hospitalized: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು, ಐಸಿಯುವಿನಲ್ಲಿ ಚಿಕಿತ್ಸೆ

KGF Actor Hospitalized: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು, ಐಸಿಯುವಿನಲ್ಲಿ ಚಿಕಿತ್ಸೆ

ಕೆಜಿಎಫ್ ತಾತ ಕೃಷ್ಣ ಜಿ ರಾವ್

ಕೆಜಿಎಫ್ ತಾತ ಕೃಷ್ಣ ಜಿ ರಾವ್

ಕೆಜಿಎಫ್ ಸಿನಿಮಾದಲ್ಲಿ ಎಂಥವರ ಮನಸೂ ಕರಗುವಂತೆ ಕಾರ್ಮಿಕನ ಪಾತ್ರದಲ್ಲಿ ನಟಿಸಿದ್ದ ತಾತನ ನೆನಪಿದೆಯಾ? ಫೇಮಸ್ ಕೆಜಿಎಫ್ ತಾತ ಈಗ ಐಸಿಯುವಿನಲ್ಲಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕೆಜಿಎಫ್ (KGF) ಸಿನಿಮಾ ಖ್ಯಾತಿಯ ತಾತ ಎಂದೇ ಫೇಮಸ್ ಆಗಿರುವ ಹಿರಿಯ ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ (Hopitalized) ‌ದಾಖಲಾದ ಕೃಷ್ಣ ಜಿ ರಾವ್ (Krishna G Rao) ಅವರು ಸದ್ಯ ಐಸಿಯುವಿನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜೊತೆ ನಟಿಸಿ ದೊಡ್ಡ ಹೆಸರು ಮಾಡಿದ್ದ ಇವರು ಬೆಂಗಳೂರಿನ (Bengaluru) ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದ ಕೃಷ್ಣ ಜಿ ರಾವ್ ಅವರನ್ನು ಸುಸ್ತಾದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಕೃಷ್ಣ ಜಿ ರಾವ್ ಅವರು ಶೀಘ್ರ ಚೇತರಿಸಲಿ ಎಂದು ಪ್ರಾರ್ಥಿಸಿದ್ದಾರೆ.


ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಸ್ಯಾಂಡಲ್​​ವುಡ್ ನಟ ಕೃಷ್ಣ ಜಿ ರಾವ್ ಅವರು ಕೆಜಿಎಫ್ ಮಾತ್ರವಲ್ಲದೆ ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ಮಾಡಿದ್ದಾರೆ. ಕೆಜಿಎಫ್ ಪಾತ್ರದ ನಂತರ ರಾವ್ ಪ್ರಸಿದ್ಧರಾದರು. ತುಮಕೂರಿನ ಪಾವಗಡ ಮೂಲದ ರಾವ್ ಸುಮಾರು ನಾಲ್ಕು ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.




ರೊಮ್ಯಾಂಟಿಕ್ ಕಾಮಿಡಿಯಲ್ಲಿ ಪ್ರಮುಖ ಪಾತ್ರವನ್ನು ಮಾಡುವ ಮೂಲಕ ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿ ಅವರು ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಿಕೊಂಡಿದ್ದಾರೆ. ನಾನು ನನ್ನ ಗುರು ಎಂದು ಗೌರವಿಸುವ ಶಂಕರ್ ನಾಗ್ ಅವರ ಬಳಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಕನ್ನಡ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಕೆಜಿಎಫ್ ನನಗೆ ಖ್ಯಾತಿ ತಂದುಕೊಟ್ಟಿತು ಎಂದಿದ್ದರು ನಟ.


ಇದನ್ನೂ ಓದಿ: Aniruddha Jatkar: ವಿಷ್ಣುವರ್ಧನ್ ಗೃಹಪ್ರವೇಶ ಹೇಗಿತ್ತು? ವಿಡಿಯೋ ಶೇರ್ ಮಾಡಿದ ನಟ ಅನಿರುದ್ಧ್


ಈ ಸಿನಿಮಾದಲ್ಲಿ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಿರ್ದೇಶಕ ಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ರಾವ್ ಅವರು ಈ ಹಿಂದೆ ಹೇಳಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.


ಕೆಮಿಸ್ಟ್ರಿ ಆಫ್ ಕರಿಯಪ್ಪ ಮತ್ತು ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳಿಗೆ ಮೆಗಾಫೋನ್ ನಿರ್ವಹಿಸಿದ ಕುಮಾರ್ ಕೃಷ್ಣ ಜಿ ರಾವ್ ಅವರ ಸಿನಿಮಾಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ.


ಸ್ಕ್ರಿಪ್ಟ್ ಬರೆಯುವಾಗ ಅದರಲ್ಲಿ ನೈಜತೆ ತರಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ನನ್ನ ಹಿಂದಿನ ಚಿತ್ರಗಳಿಗಿಂತ ಈ ಸಿನಿಮಾ ವಿಭಿನ್ನವಾಗಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರಲ್ಲಿ ಕಾಮಿಡಿ ಮತ್ತು ಎಮೋಷನ್ ಇದೆ ಎಂದು ನಿರ್ದೇಶಕ ಕುಮಾರ್ ಹೇಳಿದರು, ತೆಲುಗು ಆವೃತ್ತಿಯು ಡಬ್ಬಿಂಗ್ ಆವೃತ್ತಿಯಲ್ಲ.

Published by:Divya D
First published: