KGF 2 Trailer: ಎಚ್ಚರ.. ಎಚ್ಚರ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸಲಿದೆ ತೂಫಾನ್​! ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ನೋಡಿ ಯಶ್​ ಫ್ಯಾನ್ಸ್​

. ರಾಕಿಂಗ್​ ಸ್ಟಾರ್ ಯಶ್(Rocking Star Yash)​ ನಟನೆಯ ‘ಕೆಜಿಎಫ್​ 2’ ಚಿತ್ರದ ಟ್ರೇಲರ್(KGF 2 Trailer) ಇಂದು (ಮಾರ್ಚ್​ 27) ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ (KGF 2 Trailer) ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

 • Share this:
  ಸ್ಯಾಂಡಲ್‌ವುಡ್‌(Sandalwood)ನ ಮೋಸ್ಟ್ ಎಕ್ಸ್‌ಪೆಕ್ಟೆಡ್(Most Expected) ಸಿನಿಮಾ 'KGF 2'(KGF 2). ಈ ಸಿನಿಮಾ ಟ್ರೈಲರ್(Trailer) ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ‘ಕೆಜಿಎಫ್ 2’ ಅಖಾಡಕ್ಕಿಳಿದಿದೆ. ಈ ಮಧ್ಯೆ ಟ್ರೈಲರ್ ಹೇಗಿದೆ? ಅಂತ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ರಾಕಿಂಗ್​ ಸ್ಟಾರ್ ಯಶ್(Rocking Star Yash)​ ನಟನೆಯ ‘ಕೆಜಿಎಫ್​ 2’ ಚಿತ್ರದ ಟ್ರೈಲರ್(KGF 2 Trailer) ಇಂದು (ಮಾರ್ಚ್​ 27) ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೈಲರ್(KGF 2 Trailer) ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಜತೆಗೆ ಟ್ರೇಲರ್ ಸ್ವಾಗತಕ್ಕೆ ಫ್ಯಾನ್ಸ್ ಕಡೆಯಿಂದ ದೊಡ್ಡ ಮಟ್ಟದ ಸಿದ್ಧತೆ ನಡೆದಿದೆ. ಅನೇಕ ಪ್ಲ್ಯಾನ್​ಗಳನ್ನು ಅಭಿಮಾನಿಗಳು ರೂಪಿಸಿದ್ದಾರೆ. ಬೆಂಗಳೂರಿ(Bengaluru)ನ ಒರಾಯನ್​ ಮಾಲ್​(Orion Mall)ನಲ್ಲಿರುವ ಪಿವಿಆರ್(PVR)​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

  ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್​​ ಶಿವಣ್ಣ ಗೆಸ್ಟ್​!

  ನಟ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರಣ್ಅ​ ಜೋಹರ್ವಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಚಿತ್ರದ ಹೀರೋ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅವರೇ ಕನ್ನಡ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದರ ಬೆನ್ನಲ್ಲೇ ಅದ್ದೂರಿಯಾಗಿ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

  ಕೆಜಿಎಫ್​ 2 ಟ್ರೈಲರ್​ ಹೇಗಿದೆ ಗೊತ್ತಾ?

  ‘ಕೆಜಿಎಫ್ 2' ಚಿತ್ರದ  ಟ್ರೈಲರ್ ಮಾರ್ಚ್ 27 ರಂದು ಸಂಜೆ 6.40 ಹೊರಬರಲಿದೆ. ಈ ಕಾರಣ ಚಿತ್ರದ ಟ್ರೈಲರ್ ಹೇಗಿರುತ್ತೆ ಎಂಬುದೇ ಎಲ್ಲರ ಕುತೂಹಲ. ಈ ಮಧ್ಯೆ 'ಕೆಜಿಎಫ್ 2' ಚಿತ್ರದ ಮೊಟ್ಟ ಮೊದಲ ಟ್ರೈಲರ್ ನೋಡಿದ ವ್ಯಕ್ತಿ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಹಾಗೂ ಪತ್ರಕರ್ತ ಉಮೈರ್ ಸಂಧು ಈಗಾಗಲೇ ಟ್ರೈಲರ್ ವೀಕ್ಷಣೆ ಮಾಡಿದ್ದು ಮೊದಲ ವಿಮರ್ಶೆ ಮಾಡಿದ್ದಾರೆ.

  ಇದನ್ನೂ ಓದಿ: ಕರ್ನಾಟಕದಲ್ಲಿ RRRಗೆ ತೊಂದ್ರೆ ಕೊಟ್ರೆ, KGF 2 ಬರ್ತಿದೆ ಹುಷಾರ್​! ಕನ್ನಡಿಗರಿಗೆ ಜ್ಯೂ. NTR, ರಾಮ್​ಚರಣ್​ ಫ್ಯಾನ್ಸ್​ ಧಮ್ಕಿ

  ಟೀಸರ್​ ದಾಖಲೆಯನ್ನು ಉಡೀಸ್​ ಮಾಡುತ್ತಾ ಕೆಜಿಎಫ್​ 2?

  ‘ಕೆಜಿಎಫ್ 2‘ ಚಿತ್ರದ ಟೀಸರ್ ಬರೆದ ದಾಖಲೆಯನ್ನು ಇನ್ನೂ ಯಾವುದೇ ಸಿನಿಮಾ ಅಳಿಸಿ ಹಾಕಿಲ್ಲ. ’ಕೆಜಿಎಫ್ 2’ ಚಿತ್ರದ ಟೀಸರ್ 246 ಮಿಲಿಯನ್ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಈ ದಾಖಲೆಯನ್ನು 'ಬೀಸ್ಟ್' ಸಿನಿಮಾದ ಅರೇಬಿಕ್ ಕುತ್ತು ಸಾಂಗ್ ಬೀಟ್ ಮಾಡಬಹುದು ಎಂಬ ನಿರೀಕ್ಷೆಯಿದೆ. ಯಾಕಂದ್ರೆ, ಒಂದು ತಿಂಗಳ ಅಂತರದಲ್ಲಿಯೇ ಈ ಸಾಂಗ್ 232 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇನ್ನು ಇದರ ದಾಖಲೆಯನ್ನು 'ಕೆಜಿಎಫ್ 2' ಟ್ರೈಲರ್ ಮುರಿದು ಹಾಕುತ್ತೆ ಎನ್ನಲಾಗಿದೆ.

  ಇದನ್ನೂ ಓದಿ: ಮಾರ್ಚ್ 27ರಂದು KGF Chapter 2 ಅಭಿಮಾನಿಗಳಿಗೆ ಬಿಗ್ ಗಿಫ್ಟ್! Trailer ರಿಲೀಸ್ ಮಾಡಲಿದ್ದಾರೆ ಶಿವಣ್ಣ

  20 ಎಲ್​ಇಡಿ ಸ್ಕ್ರೀನ್​ಗಳಲ್ಲಿ ಕೆಜಿಎಫ್​ 2 ಟ್ರೈಲರ್​?

  ಕೆಜಿಎಫ್ 2' ಸಿನಿಮಾದ ಟ್ರೈಲರ್ ಅನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತುರತೆಯಲ್ಲಿದ್ದಾರೆ. ಟ್ರೈಲರ್ ರಿಲೀಸ್‌ಗೆ ಚಿತ್ರತಂಡ ದೊಡ್ಡ ತಯಾರಿಯನ್ನು ಮಾಡಿಕೊಂಡಿದ್ದು, ಇತ್ತ ಅಭಿಮಾನಿಗಳು ಕೂಡ ಬಹಳ ಅದ್ಧೂರಿಯಾಗಿ ಟ್ರೈಲರ್ ಅನ್ನು ಸ್ವಾಗತ ಮಾಡಲು ಸಜ್ಜಾಗಿದ್ದಾರೆ. ರಾಜ್ಯದ 20ಕ್ಕೂ ಹೆಚ್ಚು ಕಡೆ ಎಲ್‌ಈಡಿ ಸ್ಕ್ರೀನ್‌ನಲ್ಲಿ ಟ್ರೈಲರ್ ನೋಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

  ಚಾಮುಂಡಿ ಬೆಟ್ಟದಲ್ಲಿ ಅಭಿಮಾನಿಗಳಿಂದ ಪೂಜೆ

  ಟ್ರೈಲರ್​​ ಸ್ವಾಗತಕ್ಕೆ ಫ್ಯಾನ್ಸ್ ಕಡೆಯಿಂದ ದೊಡ್ಡ ಮಟ್ಟದ ಸಿದ್ಧತೆ ನಡೆದಿದೆ. ಅನೇಕ ಪ್ಲ್ಯಾನ್​ಗಳನ್ನು ಅಭಿಮಾನಿಗಳು ರೂಪಿಸಿದ್ದಾರೆ. ಈ ಮಧ್ಯೆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಕೋರಿ ಅಭಿಮಾನಿಗಳು ವಿಶೇಷ ಪೂಜೆ ಮಾಡುತ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಯಶ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ
  Published by:Vasudeva M
  First published: