KGF 2 Trailer: ಹೊರಬಿತ್ತು ಕೆಜಿಎಫ್​ 2 ಟ್ರೈಲರ್​ ಮೊದಲ ವಿಮರ್ಶೆ.. ಎಲ್ಲರಿಗಿಂತ ಮುಂಚೆ ನೋಡಿದ ವ್ಯಕ್ತಿ ಹೇಳಿದ್ದೇನು?

ಬೆಂಗಳೂರಿ(Bengaluru)ನ ಒರಾಯನ್​ ಮಾಲ್​(Orion Mall)ನಲ್ಲಿರುವ ಪಿವಿಆರ್(PVR)​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೈಲರ್(KGF 2 Trailer)  ರಿಲೀಸ್ ಆಗಲಿದೆ. ಆದರೆ, ಕೆಜಿಎಫ್​ ಟ್ರೈಲರ್​  ಮೊದಲ ವಿಮರ್ಶೆ ಹೊರ ಬಿದ್ದಿದೆ. ಎಲ್ಲರಿಗಿಂತ ಮೊದಲು ಇವರು ಕೆಜಿಎಫ್​ 2 ಟ್ರೈಲರ್​ ನೋಡಿದ್ದಾರೆ.

ರಾಕಿಂಗ್ ಸ್ಟಾರ್​ ಯಶ್​

ರಾಕಿಂಗ್ ಸ್ಟಾರ್​ ಯಶ್​

  • Share this:
    ಸ್ಯಾಂಡಲ್‌ವುಡ್‌(Sandalwood)ನ ಮೋಸ್ಟ್ ಎಕ್ಸ್‌ಪೆಕ್ಟೆಡ್(Most Expected) ಸಿನಿಮಾ 'KGF 2'(KGF 2). ಈ ಸಿನಿಮಾ ಟ್ರೈಲರ್(Trailer) ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 14ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ‘ಕೆಜಿಎಫ್ 2’ ಅಖಾಡಕ್ಕಿಳಿದಿದೆ. ಈ ಮಧ್ಯೆ ಟ್ರೈಲರ್ ಹೇಗಿದೆ? ಅಂತ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಪಾರ್ಟ್ 1 ರಿಲೀಸ್ ಆಗಿತ್ತು. ಇದೀಗ ಏಪ್ರಿಲ್ 14ರಂದು ಪಾರ್ಟ್ 2 ರಿಲೀಸ್ ಆಗಲಿದೆ. ಕೆಜಿಎಫ್​ ಇಡೀ ವಿಶ್ವವನ್ನೇ ಕನ್ನಡ(Kannada) ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಕೆಜಿಎಫ್​ ಹೆಸರನಲ್ಲೇ ಒಂದು ಖದರ್​ ಇದೆ. ಬೆಂಗಳೂರಿ(Bengaluru)ನ ಒರಾಯನ್​ ಮಾಲ್​(Orion Mall)ನಲ್ಲಿರುವ ಪಿವಿಆರ್(PVR)​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೈಲರ್(KGF 2 Trailer)  ರಿಲೀಸ್ ಆಗಲಿದೆ. ಆದರೆ, ಕೆಜಿಎಫ್​ ಟ್ರೈಲರ್​  ಮೊದಲ ವಿಮರ್ಶೆ ಹೊರ ಬಿದ್ದಿದೆ. ಎಲ್ಲರಿಗಿಂತ ಮೊದಲು ಇವರು ಕೆಜಿಎಫ್​ 2 ಟ್ರೈಲರ್​ ನೋಡಿದ್ದಾರೆ.

    ಕೆಜಿಎಫ್​ 2 ಟ್ರೈಲರ್​ ನೋಡಿದ ಸೆನ್ಸಾರ್​ ಸದಸ್ಯ!

    ಹೌದು, ಹೊರ ದೇಶಗಳಲ್ಲಿಯೂ ಟ್ರೈಲರ್​ ಬಿಡುಗಡೆ ಮಾಡಲು ಟ್ರೇಲರ್‌ನ ಸೆನ್ಸಾರ್ ಮಾಡಲಾಗಿದ್ದು, ‘ಕೆಜಿಎಫ್ 2’ ಸಿನಿಮಾದ ಟ್ರೈಲರ್​​ ನೋಡಿದ ಸೆನ್ಸಾರ್‌ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
    ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್‌ಬೋರ್ಡ್ ಸದಸ್ಯ ತಾವು ‘ಕೆಜಿಎಫ್ 2’ ಸಿನಿಮಾದ ಟ್ರೈಲರ್​ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೈಲರ್​ ಬಗ್ಗೆ ಸಹ ಹೇಳಿದ್ದಾರೆ. ‘ಈ ಟ್ರೈಲರ್​​ ಅದ್ಭುತವಾಗಿದೆ, ಗೂಸ್ಬಂಪ್ಸ್ ಮತ್ತು ಮೈಂಡ್ಬ್ಲೋವಿಂಗ್ ​ಆಗಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.



    ಹಲವು ಸಿನಿಮಾಗಳ ವಿಮರ್ಶೆ ಮಾಡುವ ಉಮೈರ್​!

    ಉಮೈರ್ ಸಾಂಧು ಹೀಗೆ ಸಿನಿಮಾ ಹಾಗೂ ಟ್ರೈಲರ್​​ಗಳ ವಿಮರ್ಶೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ದಕ್ಷಿಣ ಭಾರತದ ಬಹುತೇಕ ಭಾರಿ ನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುವ ಮುನ್ನವೇ ನೋಡಿ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ‘ಕೆಜಿಎಫ್: ಚಾಪ್ಟರ್ 1’ ಬಿಡುಗಡೆ ಆದಾಗಲೂ ಸಿನಿಮಾವನ್ನು ವಿಮರ್ಶೆ ಮಾಡಿದ್ದ ಉಮೈರ್ ಸಾಂಧು ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದರು. ಇದೀಗ ಕೆಜಿಎಫ್​ 2 ಟ್ರೈಲರ್​ ನಿಮಗೆ ಬೇರೆಯದ್ದೇ ಅನುಭವ ನೀಡಲಿದೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸಲಿದೆ ತೂಫಾನ್​! ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ನೋಡಿ ಯಶ್​ ಫ್ಯಾನ್ಸ್​

    ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್​​ ಶಿವಣ್ಣ ಗೆಸ್ಟ್​!

    ನಟ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರಣ್ಅ​ ಜೋಹರ್ವಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಚಿತ್ರದ ಹೀರೋ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅವರೇ ಕನ್ನಡ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದರ ಬೆನ್ನಲ್ಲೇ ಅದ್ದೂರಿಯಾಗಿ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

    ಇದನ್ನೂ ಓದಿ: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

    20 ಎಲ್​ಇಡಿ ಸ್ಕ್ರೀನ್​ಗಳಲ್ಲಿ ಕೆಜಿಎಫ್​ 2 ಟ್ರೈಲರ್​?

    ಕೆಜಿಎಫ್ 2' ಸಿನಿಮಾದ ಟ್ರೈಲರ್ ಅನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತುರತೆಯಲ್ಲಿದ್ದಾರೆ. ಟ್ರೈಲರ್ ರಿಲೀಸ್‌ಗೆ ಚಿತ್ರತಂಡ ದೊಡ್ಡ ತಯಾರಿಯನ್ನು ಮಾಡಿಕೊಂಡಿದ್ದು, ಇತ್ತ ಅಭಿಮಾನಿಗಳು ಕೂಡ ಬಹಳ ಅದ್ಧೂರಿಯಾಗಿ ಟ್ರೈಲರ್ ಅನ್ನು ಸ್ವಾಗತ ಮಾಡಲು ಸಜ್ಜಾಗಿದ್ದಾರೆ. ರಾಜ್ಯದ 20ಕ್ಕೂ ಹೆಚ್ಚು ಕಡೆ ಎಲ್‌ಈಡಿ ಸ್ಕ್ರೀನ್‌ನಲ್ಲಿ ಟ್ರೈಲರ್ ನೋಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
    Published by:Vasudeva M
    First published: