KGF Chapter 2: ಯಶ್ ನಟನೆಯ ಕೆಜಿಎಫ್ ಚಾಪ್ಟರ್​ 2 ಕಣ್ತುಂಬಿಕೊಳ್ಳಲು ಇನ್ನೂ ಒಂದು ವರ್ಷ ಕಾಯಲೇಬೇಕು!

‘ಕೆಜಿಎಫ್​’ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಇದಕ್ಕೆ ಕಾರಣ ಶೂಟಿಂಗ್​ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು. ಈಗ ಕೆಜಿಎಫ್​ 2 ಕೂಡ ಹೀಗೇಯೇ ಆಗಲಿದೆ ಎನ್ನಲಾಗಿದೆ.

Rajesh Duggumane | news18-kannada
Updated:December 24, 2019, 12:03 PM IST
KGF Chapter 2: ಯಶ್ ನಟನೆಯ ಕೆಜಿಎಫ್ ಚಾಪ್ಟರ್​ 2 ಕಣ್ತುಂಬಿಕೊಳ್ಳಲು ಇನ್ನೂ ಒಂದು ವರ್ಷ ಕಾಯಲೇಬೇಕು!
ಕೆಜಿಎಫ್​ ಚಾಪ್ಟರ್​ 2 ಪೋಸ್ಟರ್​
  • Share this:
ಕೆಜಿಎಫ್​ ಸಿನಿಮಾ ತೆರೆಕಂಡು ಡಿಸೆಂಬರ್​ 21ಕ್ಕೆ ಒಂದು ವರ್ಷ ತುಂಬಿದೆ. ಈಗ ಕೆಜಿಎಫ್​ ಚಾಪ್ಟರ್​ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ, ರಿಲೀಸ್​ ವಿಚಾರದಲ್ಲಿ ಈವರೆಗೆ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ. ಮೂಲಗಳ ಪ್ರಕಾರ ‘ಕೆಜಿಎಫ್​ 2’ ರಿಲೀಸ್​ಗೆ ಇನ್ನೂ ಒಂದು ವರ್ಷ ಕಾಯಲೇಬೇಕಂತೆ.

‘ಕೆಜಿಎಫ್​ 2’ ಸಿನಿಮಾ ಸೆಟ್ಟೇರಿ ಹಲವು ತಿಂಗಳೇ ಕಳೆದಿವೆ. ಬಾಲಿವುಡ್​ ನಟ ಸಂಜಯ್​ ದತ್​ ‘ಕೆಜಿಎಫ್​ 2’ ಸೆಟ್ ​ಸೇರಿದ ವಿಚಾರ ಬಿಟ್ಟರೆ ಸಿನಿಮಾ ತಂಡದಿಂದ ಮತ್ತಾವುದೇ ಮಾಹಿತಿ ಹೊರ ಬಿದ್ದಿರಲಿಲ್ಲ.  ಡಿಸೆಂಬರ್​ 21ರಂದು ಚಿತ್ರತಂಡ ಚಾಪ್ಟರ್​ 2ನ ಫಸ್ಟ್​ ಲುಕ್​ ರಿಲೀಸ್​ ಮಾಡಿದ್ದು ಅಭಿಮಾನಿಗಳಿಗೆ ಸ್ವಲ್ಪ ಖುಷಿ ನೀಡಿದೆ. ಈಗ ಅಭಿಮಾನಿಗಳು ಈ ಸಿನಿಮಾದ ರಿಲೀಸ್​ ಡೇಟ್​ ಅನೌಂನ್ಸ್ ಮಾಡಿ ಎಂದು ಕೋರುತ್ತಿದ್ದಾರೆ.

‘ಕೆಜಿಎಫ್​’ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಇದಕ್ಕೆ ಕಾರಣ ಶೂಟಿಂಗ್​ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು. ‘ಕೆಜಿಎಫ್​’ ಸಿನಿಮಾದಲ್ಲಿ ಗ್ರಾಫಿಕ್ಸ್​ ಮತ್ತಿತ್ಯಾದಿ ಕೆಲಸಕ್ಕೆ ಹೆಚ್ಚಿನ ಸಮಯದ ಅಗತ್ಯತೆ ಇತ್ತು. ಹೀಗಾಗಿ ಸಹಜವಾಗಿಯೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು.

ಈಗ 'ಕೆಜಿಎಫ್​ 2' ಕೂಡ ಹೀಗೇಯೇ ಆಗಲಿದೆ ಎನ್ನಲಾಗಿದೆ. ಕೆಜಿಎಫ್​ ಶೂಟಿಂಗ್​ ಆರಂಭಗೊಂಡಿದೆಯಾದರೂ ಇನ್ನೂ ಸಾಕಷ್ಟು ದೃಶ್ಯಗಳನ್ನು ಶೂಟ್​ ಮಾಡುವ ಅಗತ್ಯವಿದೆ. ನಂತರ ಪೋಸ್ಟ್ ಪ್ರೊಡಕ್ಷನ್​, ಪ್ರಚಾರಕ್ಕೆ ಒಂದು ವರ್ಷ ತಗಲುವು ಸಾಧ್ಯತೆ ಇದೆ ಎನ್ನುವುದು ಮೂಲಗಳ ಮಾಹಿತಿ.

ಇದನ್ನೂ ಓದಿ: ಕನ್ನಡದ ಕೆ.ಜಿ.ಎಫ್ ಚಿತ್ರಕ್ಕೆ ರಾಷ್ಟ್ರ ಗೌರವ; ವರ್ಷದ ಸಂಭ್ರಮದ ಮೆರುಗು ಹೆಚ್ಚಿಸಿದ ಪ್ರಶಸ್ತಿ

ಡಿಸೆಂಬರ್ ಸ್ಯಾಂಡಲ್​ವುಡ್​ ಪಾಲಿಗೆ ಲಕ್ಕಿ. ಅದರಲ್ಲೂ ಯಶ್​ಗೆ ಅದೃಷ್ಟದ ತಿಂಗಳು. ಯಶ್​ ಮದುವೆಯಾಗಿದ್ದು, ಯಶ್​ಗೆ ಮೊದಲ ಮಗಳು ಜನಿಸಿದ್ದು, ‘ಕೆಜಿಎಫ್​’ ಸಿನಿಮಾ ತೆರೆಗೆ ಬಂದು ಹಿಟ್​ ಆಗಿದ್ದು ಡಿಸೆಂಬರ್​ನಲ್ಲಿ. ಹೀಗಾಗಿ, ‘ಕೆಜಿಎಫ್​ 2’ ಸಿನಿಮಾ ಕೂಡ ಡಿಸೆಂಬರ್​ನಲ್ಲಿ ತೆರೆಗೆ ಬರಬಹುದು ಎನ್ನುವ ಮಾತು ಕೇಳಿ ಬಂದಿದೆ.

ಕೆಜಿಎಫ್​ ತಂಡ ಯಾವುದೇ ಅಪ್ಡೇಟ್​ ನೀಡುತ್ತಿಲ್ಲ ಎಂದು ಅಭಿಮಾನಿಗಳು ಆರೋಪಿಸಿದ್ದರು. ಈಗ ಚಾಪ್ಟರ್​ 2ಗೆ ಇನ್ನೂ ಒಂದು ವರ್ಷ ಕಾಯಲೇಬೇಕು ಎಂದರೆ ಅಭಿಮಾನಿಗಳು ಬೇಸರಗೊಳ್ಳಬಹುದು ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆಯಂತೆ.
First published:December 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ