KGF 2 Release Date: 2022ರ ಏಪ್ರಿಲ್ 14ಕ್ಕೆ ಕೆಜಿಎಫ್​-2 ರಿಲೀಸ್; ಅಭಿಮಾನಿಗಳಿಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ರಾಕಿಭಾಯ್

2019ರಲ್ಲೇ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡುವ ಐಡಿಯಾದೊಂದಿಗೆ ಚಿತ್ರತಂಡ ಸೀಕ್ವಲ್ ಕೆಲಸಗಳನ್ನು ಪ್ರಾರಂಭಿಸಿತಾದರೂ, ಮೊದಲ ಚಾಪ್ಟರ್‍ಗಿಂತ ಅದ್ಧೂರಿಯಾಗಿ ಎರಡನೇ ಚಾಪ್ಟರ್ ತರುವ ಜವಾಬ್ದಾರಿಯಿದ್ದ ಕಾರಣ ಸಿದ್ಧತೆಯೂ ಸಾಕಷ್ಟು ಬೇಕಿತ್ತು. ಹೀಗಾಗಿಯೇ 2020ಕ್ಕೆ ರಿಲೀಸ್ ಎನ್ನಲಾಗಿತ್ತು.

KGF 2

KGF 2

  • Share this:
ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿನಯದ, ಮಾಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್(Prashanth Neel) ನಿರ್ದೇಶನದ, ಹೊಂಬಾಳೆ ಪ್ರೊಡಕ್ಷನ್ಸ್‍(Hombale Production) ನ ವಿಜಯ್ ಕಿರಗಂದೂರ್ ನಿರ್ಮಾಣದ ಮೋಸ್ಟ್ ಎಕ್ಸ್‍ಪೆಕ್ಟೆಡ್ ಭಾರತೀಯ ಸಿನಿಮಾ ಕೆಜಿಎಫ್ ಚಾಪ್ಟರ್ 2(KGF Chapter 2) ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ವರಮಹಾಲಕ್ಷ್ಮಿ ಹಬ್ಬ ಹಾಗೂ ಓಣಂ ಹಬ್ಬಗಳ ಸಂಭ್ರಮದ ಬಳಿಕ ಭಾನುವಾರದ ರಜೆಯ ಮಜಾದಲ್ಲಿದ್ದ ಸಿನಿಪ್ರಿಯರಿಗೆ ರಾಕಿಂಗ್ ಹೊಸ ರಿಲೀಸ್ ಡೇಟ್ ಘೋಷಣೆ ಮಾಡುವ ಮೂಲಕ ರಾಕಿ ಭಾಯ್ ಸರ್‍ಪ್ರೈಸ್ ನೀಡಿದ್ದಾರೆ. ಹೌದು, 2022ರ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ರಿಲೀಸ್ ಆಗಲಿದೆ. 

ಕೆಜಿಎಫ್ ಚಾಪ್ಟರ್ 1, 2018ರ ಡಿಸೆಂಬರ್ 21ರಂದು ರಿಲೀಸ್ ಆದ ಮಾಸ್ಟರ್‍ಪೀಸ್. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕ ಕಾಲದಲ್ಲಿ ತೆರೆಗೆ ಅಪ್ಪಳಿಸಿದ ಬ್ಲಾಕ್‍ಬಸ್ಟರ್ ಸಿನಿಮಾ. ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‍ಗಳಲ್ಲಿ ಒಮ್ಮೆಲೇ ಅಬ್ಬರಿಸಿ ಬೊಬ್ಬಿರಿದ ದೃಶ್ಯವೈಭವ. 100 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ. ಐದೂ ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 1 ಒಟ್ಟು ಗಳಿಕೆ 250 ಕೋಟಿಗೂ ಹೆಚ್ಚು ಅಂದರೆ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್‍ಅನ್ನು ಎಂಥವರೂ ಊಹಿಸಬಹುದು.

ಇದನ್ನೂ ಓದಿ:ಕೊಪ್ಪಳದಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ವಿಫಲ; ಸಕಾಲಕ್ಕೆ ಬರುತ್ತಿಲ್ಲ ಬೆಳೆ ವಿಮೆ

ಅದಾಗುತ್ತಲೇ 2019ರಲ್ಲೇ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡುವ ಐಡಿಯಾದೊಂದಿಗೆ ಚಿತ್ರತಂಡ ಸೀಕ್ವಲ್ ಕೆಲಸಗಳನ್ನು ಪ್ರಾರಂಭಿಸಿತಾದರೂ, ಮೊದಲ ಚಾಪ್ಟರ್‍ಗಿಂತ ಅದ್ಧೂರಿಯಾಗಿ ಎರಡನೇ ಚಾಪ್ಟರ್ ತರುವ ಜವಾಬ್ದಾರಿಯಿದ್ದ ಕಾರಣ ಸಿದ್ಧತೆಯೂ ಸಾಕಷ್ಟು ಬೇಕಿತ್ತು. ಹೀಗಾಗಿಯೇ 2020ಕ್ಕೆ ರಿಲೀಸ್ ಎನ್ನಲಾಗಿತ್ತು.

ಆದರೆ ಟ್ವೆಂಟಿ ಟ್ವಿಂಟಿಯಲ್ಲಿ ಕೊರೊನಾ ಮೊದಲ ಅಲೆ ವಿಶ್ವದೆಲ್ಲೆಡೆ ಜನ-ಜೀವನದ ಜೊತೆ ಟ್ವೆಂಟಿ ಟ್ವೆಂಟಿ ಆಡತೊಡಗಿತು. ಅದರ ಬೆನ್ನಲ್ಲೇ ಲಾಕ್‍ಡೌನ್. ಹೀಗಾಗಿ ಎಲ್ಲ ಕ್ಷೇತ್ರಗಳಂತೆ ಶೂಟಿಂಗ್ ಬಂದ್, ಥಿಯೇಟರ್‍ಗಳೂ ಬಂದ್ ಆದವು. ಆ ಬಳಿಕ ಕಳೆದ ವರ್ಷದ ಕೊನೆಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿ, ಥಿಯೇಟರ್‍ಗಳೂ ಬಾಗಿಲು ತೆರೆದಾಗ ಕೆಜಿಎಫ್‍ನಂತಹ ದೊಡ್ಡ ಸಿನಿಮಾಗಳು ಹೊಸ ರಿಲೀಸ್ ಡೇಟ್ ಘೋಷಿಸಿದವು. ಅದರಂತೆ ಇದೇ ಅಕ್ಟೋಬರ್‍ನಲ್ಲಿ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆ ಕೆಜಿಎಫ್ ಎರಡನೇ ಅಧ್ಯಾಯಕ್ಕೆ ಬ್ರೇಕ್ ಹಾಕಿತ್ತು.

ಇದನ್ನೂ ಓದಿ:Kodagu: ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಶಿವಲಿಂಗ ವಿಸರ್ಜನೆಗೆ ಕುಮ್ಮಕ್ಕು; ಐವರ ವಿರುದ್ಧ ಪ್ರಕರಣ ದಾಖಲು

ಈಗ ಎರಡನೇ ಅಲೆಯನ್ನೂ ದಾಟಿ ಗೆದ್ದಾಗಿದೆ. ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಥಿಯೇಟರ್ ಹಾಗೂ ಓಟಿಟಿಗಳಲ್ಲಿ ರಿಲೀಸ್ ಆಗಿವೆ. ಚಿತ್ರೀಕರಣಕ್ಕೆ ಅವಕಾಶ ಕೊಟ್ಟು, ಥಿಯೇಟರ್‍ಗಳಲ್ಲೂ ಶೇಕಡಾ 50ರಷ್ಟು ಪ್ರದರ್ಶನಕ್ಕೆ ಅನುಮತಿ ನೀಡಿರುವ ಬೆನ್ನಲೇ ಹೊಸ ಸಿನಿಮಾಗಳು ಥಿಯೇಟರ್‍ಗೆ ಬರಲು ಸಿದ್ಧತೆ ನಡೆಸಿವೆ. ಮತ್ತೊಂದೆಡೆ ಭಾರತದಾದ್ಯಂತ ಬರೋಬ್ಬರಿ 55 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇನ್ನು ಆರೇಳು ತಿಂಗಳಲ್ಲಿ ಭಾರತದಾದ್ಯಂತ ಬಹುತೇಕ ಎಲ್ಲ ಜನರಿಗೂ ಕೊರೋನಾ ಲಸಿಕೆ ತಲುಪುವ ನಿರೀಕ್ಷೆಯಿದೆ. ಹೀಗಾಗಿಯೇ ಮತ್ತೆ ಲಾಕ್‍ಡೌನ್ ಮಾಡುವ ಅವಶ್ಯಕತೆಯಿಲ್ಲ ಎಂಬ ಭರವಸೆ ಎಲ್ಲರದು. ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಕೆಜಿಎಫ್ ಚಾಪ್ಟರ್ 2 ತಂಡ 2022ರ ಏಪ್ರಿಲ್ 14ರಂದು ರಿಲೀಸ್ ಮಾಡಲು ಮುಂದಾಗಿದೆ.ಕೆಜಿಎಫ್ ಚಾಪ್ಟರ್ 1 ಅಂತೆಯೇ ಕೆಜಿಎಫ್ ಚಾಪ್ಟರ್ 2 ಸಹ ಹಲವು ವಿಶೇಷತೆಗಳು, ಹೊಸತನಗಳೊಂದಿಗೆ ಕೂಡಿದೆ. ಖಡಕ್ ಖಳನಾಗಿ ಅಧೀರನ ಪಾತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ನಟಿಸಿದ್ದಾರೆ. 70ರ ದಶಕದ ಭಾರತದ ಪ್ರಧಾನಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ನಟಿಸಿದ್ದಾರೆ.

ಪ್ರಕಾಶ್ ರಾಜ್, ತೆಲುಗು ನಟ ರಾವ್ ರಮೇಶ್ ಸೇರಿದಂತೆ ಹಲವಾರು ದಿಗ್ಗಜರು ಪ್ರಮುಖ ತಾರಾಗಣದಲ್ಲಿದ್ದಾರೆ. ಜತೆಗೆ ಮೊದಲ ಚಿತ್ರಕ್ಕಿಂತ ಹತ್ತು ಪಟ್ಟು ದೊಡ್ಡ ಮಟ್ಟದಲ್ಲಿ ಈ ಸೀಕ್ವಲ್ ಇರಲಿದೆ ಅಂತ ಚಿತ್ರತಂಡವೂ ಹೇಳಿಕೊಂಡಿದೆ. ಒಟ್ಟಾರೆ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಮತ್ತೊಮ್ಮೆ ಎಲ್ಲರೂ ಮತ್ತೊಮ್ಮೆ ಸಲಾಮ್ ರಾಕಿ ಭಾಯ್ ಅಂತ ಹಾಡುವುದರಲ್ಲಿ ಡೌಟೇ ಇಲ್ಲ ಎನ್ನಲಾಗುತ್ತಿದೆ.
Published by:Latha CG
First published: