HOME » NEWS » Entertainment » KGF 2 MOVIE SALE HUGE AMOUNT FOR TELUGU RIGHTS ROCKY BHAI WRITING A NEW RECORD HTV MAK

KGF-2: ಕೆಜಿಎಫ್ 2 ತೆಲುಗು ರೈಟ್ಸ್​ಗೆ ಭರ್ಜರಿ ಮೊತ್ತ; ಹೊಸ ದಾಖಲೆ ಬರೆದನಾ ರಾಕಿ ಭಾಯ್?

ಮೂಲಗಳ ಪ್ರಕಾರ ಕೆಜಿಎಫ್ 2 ಚಿತ್ರದ ತೆಲುಗು ಹಕ್ಕುಗಳನ್ನು ವಿತರಕರೊಬ್ಬರು ಬರೋಬ್ಬರಿ 90 ಕೋಟಿ ರೂಪಾಯಿ ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಲ್ಲಿನ ಟಾಲಿವುಡ್ ಸೂಪರ್ ಸ್ಟಾರ್​ಗಳ ಸಿನಿಮಾಗಳನ್ನು ರಿಲೀಸ್ ಮಾಡುವಂತೆಯೇ ದೊಡ್ಡ ಮಟ್ಟದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

news18-kannada
Updated:March 3, 2021, 7:29 AM IST
KGF-2: ಕೆಜಿಎಫ್ 2 ತೆಲುಗು ರೈಟ್ಸ್​ಗೆ ಭರ್ಜರಿ ಮೊತ್ತ; ಹೊಸ ದಾಖಲೆ ಬರೆದನಾ ರಾಕಿ ಭಾಯ್?
ಕೆಜಿಎಫ್​ ಚಿತ್ರದಲ್ಲಿ ಯಶ್.
  • Share this:
ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಕರು ನಾ ಮುಂದು ತಾ ಮುಂದು ಅಂತ ಬೆನ್ನು ಬಿದ್ದು ರಾಕಿ ಭಾಯ್ ರಾಕಿಂಗ್ ಸಿನಿಮಾ ಖರೀದಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಕೆಜಿಎಫ್ ಚಾಪ್ಟರ್ 2 ತೆಲುಗು ವಿತರಣೆಗೆ ಸಿಕ್ಕ ಮೊತ್ತವೆಷ್ಟು? ಕೆಜಿಎಫ್. ಬಾಕ್ಸಾಫೀಸಿನಲ್ಲಿ ನೂರು ಕೋಟಿ ರೂಪಾಯಿ ಬಾಚಿಕೊಂಡ ಮಟ್ಟ ಮೊದಲ ಕನ್ನಡ ಸಿನಿಮಾ. 5 ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಿ ಬರೋಬ್ಬರಿ 250 ಕೋಟಿ ರೂಪಾಯಿ ದೋಚಿಕೊಂಡ ಬ್ಲಾಕ್‍ಬಸ್ಟರ್ ಚಿತ್ರ. ಈಗ ಎರಡೂವರೆ ವರ್ಷಗಳ ಬಳಿಕ ಕೆಜಿಎಫ್ ಚಾಪ್ಟರ್ 2 ರಿಲೀಸ್‍ಗೆ ರೆಡಿಯಾಗಿದೆ. ಜೊತೆಗೆ ಸಿನಿಮಾ ಮೇಕಿಂಗ್, ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸೂಪರ್ ಸ್ಟಾರ್ ಅಧೀರಾ ಸಂಜಯ್ ದತ್, ರಮಿಕಾ ಸೇನ್ ಪಾತ್ರದಲ್ಲಿ ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ರಾವ್ ರಮೇಶ್ ಆಕ್ಟಿಂಗ್,  ಸಿನಿಮಾ ಬಜೆಟ್, ಮಾರ್ಕೆಟಿಂಗ್, ರಿಲೀಸ್, ಕಲೆಕ್ಷನ್, ಎಲ್ಲದರ ಬಗ್ಗೆಯೂ ಎಲ್ಲಿಲ್ಲದ ಕುತೂಹಲ ನಿರೀಕ್ಷೆಗಳಿವೆ.

ಸದ್ಯ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಜುಲೈ 16ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಅದರ ಬೆನ್ನಲ್ಲೇ ಚಿತ್ರದ ರಿಲೀಸ್‍ಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಜೊತೆ ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳ ವಿತರಕರು ಕೆಜಿಎಫ್ ಚಾಪ್ಟರ್ 2 ವಿತರಣಾ ಹಕ್ಕುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ಮೂಲಗಳ ಪ್ರಕಾರ ಕೆಜಿಎಫ್ 2 ಚಿತ್ರದ ತೆಲುಗು ಹಕ್ಕುಗಳನ್ನು ವಿತರಕರೊಬ್ಬರು ಬರೋಬ್ಬರಿ 90 ಕೋಟಿ ರೂಪಾಯಿ ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಲ್ಲಿನ ಟಾಲಿವುಡ್ ಸೂಪರ್ ಸ್ಟಾರ್​ಗಳ ಸಿನಿಮಾಗಳನ್ನು ರಿಲೀಸ್ ಮಾಡುವಂತೆಯೇ ದೊಡ್ಡ ಮಟ್ಟದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕೆಜಿಎಫ್ ಮೂಲಕ ನ್ಯಾಶನಲ್ ಸ್ಟಾರ್ ಆಗಿರುವ ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಮೊದಲ ಸಿನಿಮಾ ಪ್ರಚಾರದ ವೇಳೆ ಪಂಚ ಭಾಷೆಗಳ ಪಂಚ ರಾಜ್ಯಗಳಿಗೂ ಭೇಟಿ ಕೊಟ್ಟು ಸಿನಿಮಾ ಪ್ರಮೋಟ್ ಮಾಡಿದ್ದರು. ಈಗ ಕೆಜಿಎಫ್ ಚಾಪ್ಟರ್ 2 ಮೊದಲ ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಪರಿಣಾಮ ಮತ್ತೆ ಪ್ರಮೋಷನ್ಸ್‍ಅನ್ನು ಕಿಕ್‍ಸ್ಟಾರ್ಟ್ ಮಾಡಲಿದ್ದಾರೆ.

ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ-ದಿವ್ಯಾ ನಡುವೆ ನಡೆಯುತ್ತಿರುವುದು ಏನು: ಏನಂತಿದ್ದಾರೆ ನೆಟ್ಟಿಗರು..!

ಮತ್ತೊಂದೆಡೆ ಟಾಲಿವುಡ್ ವಿತರಕರು ಇಷ್ಟು ದೊಡ್ಡ ಮೊತ್ತ ಹೇಗೆ ನೀಡಲು ಒಪ್ಪಿದರು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಅದಕ್ಕೆ ಉತ್ತರ ಸಲಾರ್. ಹೌದು, ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಪ್ರೊಡಕ್ಷನ್ಸ್, ಬಾಹುಬಲಿ ಪ್ರಭಾಸ್ ಅವರ ಸಲಾರ್ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.
ಜೊತೆಗೆ ಕೆಜಿಎಫ್ ಸರಣಿಯ ಮಾಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರೇ ಸಲಾರ್‍ಗೂ ಆಕ್ಷನ್ ಕಟ್ ಹೇಳಲಿದ್ದಾರೆ. ಹೀಗಾಗಿಯೇ ಸಲಾರ್ ಸಿನಿಮಾದ ವಿತರಣಾ ಹಕ್ಕುಗಳನ್ನೂ ನಿಮಗೇ ಕೊಡುತ್ತೇವೆ ಎಂದು ಭರವಸೆ ನೀಡಿ ಆ ಮೂಲಕ ತೆಲುಗು ವಿತರಕರಲ್ಲಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
Published by: MAshok Kumar
First published: March 3, 2021, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories