ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಂಬೀನೇಷನ್ ನ ಕೆಜಿಎಫ್ 2 (KGF 2) ಚಿತ್ರವು ಈಗಾಗಲೇ ಬಿಡುಗೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದೆ. 1000 ಕೋಟಿಗೂ ಹೆಚ್ಚಿನ ಕಲೇಕ್ಷನ್ ಮಾಡುವ ಮೂಲಕ ಕೆಜಿಎಫ್ 2 ಚಿತ್ರ ಎಲ್ಲಾ ದಾಖಲೆಗಳನ್ನೂ ಮುರಿದು ಹಾಕಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಅಷ್ಟೇ ಕೆಜಿಎಫ್ 2 ಚಿತ್ರವು ಅಮೇಜಾನ್ ಪ್ರೈಂ (Amazon Prime) ನಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯೂ ರೆಂಟ್ ಮೇಲೆ ನೀವು ಚಿತ್ರವನ್ನು ವೀಕ್ಷಿಸಬಹುದಾಗಿದೆ. ಈಗಾಗಲೇ ಅನೇಕ ದಾಖಲೆಗಳನ್ನು ಬರೆದಿರುವ ಚಿತ್ರ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳೂ ಒಮ್ಮೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ. ಹೀಗೆ ತಿರುಗಿ ನೋಡುವಂತೆ ಮಾಡುವಲ್ಲಿ ಅನೇಕರ ಶ್ರಮವಿದೆ. ನಾವೆಲ್ಲಾ ಚಿತ್ರದ ಅದ್ಧೂರಿ ಮೇಕಿಂಗ್, ಸಾಂಗ್, ಸೆಟ್ ಗಳನ್ನು ನೋಡಿ ಅಬ್ಬಾ ಎಂದು ಹೇಳಿದ್ದೇವೆ.
ಆದರೆ ಇದರ ಹಿಂದಿನ ಕಥೆಯಲ್ಲಿ ಪ್ರತಿಯೊಬ್ಬರ ಕಷ್ಟಗಳು ಕೂಡಿಕೊಂಡಿವೆ ಎಂದು ನಾವು ಮೊದಲು ತಿಳಿದುಕೊಳ್ಳಬೇಕೆಂದರೆ, ಕೆಆರ್ಜಿ ಸ್ಟುಡಿಯೋ ಅವರು ಕೆಜಿಎಫ್ 2 ಚಿತ್ರದ ಮೇಕಿಂಗ್ ವಿಡಿಯೋಗಳನ್ನು ರಿಲೀಸ್ ಮಾಡುತ್ತಿದ್ದಾರೆ. ’ರೂಟ್ ಟು ಎಲ್ ಡೊರಾಡೋ’ ಎಂಬ ಸೀರಿಸ್ ಮೂಲಕ ಚಿತ್ರದ ಮೇಕಿಂಗ್ ಗಳನ್ನು ರಿಲೀಸ್ ಮಾಡುತ್ತಿದ್ದಾರೆ.
ಏನಿದು ರೂಟ್ ಟು ಎಲ್ ಡೊರಾಡೋ?:
ಕೆಜಿಎಫ್ 2 ಚಿತ್ರದ ಯಶಸ್ಸಿನ ಹಿಂದೆ ಅನೇಕ ಕಾಣದ ಕೈಗಳಿವೆ. ಅವುಗಳ ಪರಿಚಯ ಮಾಡಲು ರೂಟ್ ಟು ಎಲ್ ಡೊರಾಡೋ ಎಂಬುದರ ಮೂಲಕ ವೀಕ್ಷಕರಿಗೆ ಕೆಆರ್ಜಿ ಸ್ಟುಡಿಯೋಸ್ ತಿಳಿಸುತ್ತಿದೆ. ಈಗಾಗಲೇ ರೂಟ್ ಟು ಎಲ್ ಡೊರಾಡೋ ಸೀಸರಿಸ್ ನಲ್ಲಿ, ಕಾಸ್ಟಿಂಗ್, ಡೈರೆಕ್ಷನ್, ಆರ್ಟ್ ಎಂಡ್ ಪ್ರೊಡೆಕ್ಷನ್, ವಸ್ತ್ರಾಲಂಕಾರ ಮತ್ತು ಡಿಓಪಿ ಡಿಪಾರ್ಟ್ಮೆಂಟ್ ಗಳ ಕುರಿತಾದ ವಿಡಿಯೋ ಬಿಡುಗಡೆಯಾಗಿದೆ. ಇವುಗಳ ಮೂಲಕ ಕೆಜಿಎಫ್ ಹಿಂದಿನ ಕಾಣದ ಕೈಗಳ ಪರಿಚಯವನ್ನು ಮಾಡಿದ್ದಾರೆ.
ಇದನ್ನೂ ಓದಿ: Karan Johar: ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ಯಶ್ಗೆ ಆಹ್ವಾನ, ಬಾಲಿವುಡ್ನಲ್ಲಿ ಹೆಚ್ಚುತ್ತಿದೆ ರಾಕಿ ಭಾಯ್ ಹವಾ
ರೂಟ್ ಟು ಎಲ್ ಡೊರಾಡೋ ಗೋಲ್ಡನ್ ಕಾಸ್ಟ್:
ಇನ್ನು, ಈಗಾಗಲೇ ಕ್ಯಾಮರಾ ವರ್ಕ್ ಸೇರಿದಂತೆ ಅನೇಕ ವಿಭಾಗಗಳ ಕುರಿತ ವಿಡಿಯೋಗಳು ಬಿಡುಗಡೆಯಾಗಿದೆ. ಇಂದು ಅದರ ಮುಂದುವರೆದ ಭಾಗವಾಗಿ, ರೂಟ್ ಟು ಎಲ್ ಡೊರಾಡೋ ಗೋಲ್ಡನ್ ಕಾಸ್ಟ್ ಎಪಿಸೋಡ್ ಬಿಡುಗಡೆಯಾಗಿದೆ. ಇದರಲ್ಲಿ ಚಿತ್ರದಲ್ಲಿ ನಟಿಸಿರುವಂತಹ ಪ್ರಮುಖ ಪಾತ್ರಧಾರಿಗಳಾದ ಅರ್ಚನಾ ಜೋಶ್, ನಟಿ ಶ್ರೀನಿಧಿ ಶೆಟ್ಟಿ, ತಾರಕ್ ಪೊನ್ನಪ್ಪ, ಅವಿನಾಶ್ ಬಿಎಸ್, ಅಚ್ಯುತ್ ಕುಮಾರ್, ಅಯ್ಯಪ್ಪ, ಹರೀಶ್ ರಾಯ್ ಸೇರಿದಂತೆ ಅನೇಕ ಸ್ಟಾರ್ ಗಳ ಅಭಿಪ್ರಾಯವನ್ನು ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.
ಕೆಜಿಎಫ್ 2ನಲ್ಲಿ ಯಾವ ಸೀನ್ ಫೆವರೇಟ್ ಎಂದ ಶ್ರೀನಿಧಿ:
ಇನ್ನು, ಚಿತ್ರದ ನಟಿ ಶ್ರಿನೀಧಿ ಶೆಟ್ಟಿ ಮಾತನಾಡುತ್ತಾ, ಈ ಚಿತ್ರದ ಶೂಟಿಂಗ್ ಗಾಗಿ ಅದರಲ್ಲಿಯೂ ಕೆಜಿಎಫ್ ಚಾಪ್ಟರ್ ಒಂದರ ನಂತರ 2ನೇ ಭಾಗದ ಶುಟಿಂಗ್ ಗಾಗಿ ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಇದಲ್ಲದೇ, ಚಿತ್ರದಲ್ಲಿ ತಮ್ಮ ಮೆಚ್ಚಿನ ಸೀನ್ ಯಾವುದೆಂದು ಸಹ ಹೇಳಿಕೊಂಡಿದ್ದಾರೆ. ಅದಂತೆ ತಾನು ಎಂದಿಗೂ ಎದುರುಗಡೆ ಫೈಟ್ ನಡೆಯುತ್ತಿರುವುದನ್ನು ನೋಡಿರಲಿಲ್ಲ. ಆದರೆ ಅದನ್ನೂ ಈ ಚಿತ್ರ ಮೂಲಕ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Cannes Film Festival: ಕ್ಯಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಭಾರತೀಯ ತಾರೆಯರು, ಇಲ್ಲಿವೆ ಕಲರ್ಫುಲ್ ಫೋಟೋಗಳು
ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ 2:
ಕೆಜಿಎಫ್ ಚಾಪ್ಟರ್ 2 ದಿನೇ ದಿನೇ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಇದೀಗ ಚಿತ್ರವು ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದ್ದು, ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್ 2 ಅಲಂಕರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ