KGF Chapter 2 ಬಿಡುಗಡೆಗೆ ಅಡ್ಡಗಾಲಾದ ಅಮೀರ್​ ಖಾನ್​ ಅಭಿನಯದ Laal Singh Chaddha..!

ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ ಫೆಬ್ರವರಿ 2022ರ ಬಿಡುಗಡೆಗೆ ಸಿದ್ಧವಾಗಿದ್ದ ಅಮೀರ್ ಖಾನ್ (Aamir Khan)  ಅವರ ಲಾಲ್ ಸಿಂಗ್ ಚಡ್ಡಾ (Laal Singh Chaddha) ಮತ್ತೊಮ್ಮೆ ಪೋಸ್ಟ್ ಪೋನ್ ಆಗಿದೆ. ಈಗ ಈ ಚಿತ್ರ ಏಪ್ರಿಲ್ 2022ಕ್ಕೆ ಬಿಡುಗಡೆಯ ಪ್ಲ್ಯಾನ್ ಹಾಕಿಕೊಂಡಿದೆ.

ನಟ ಅಮೀರ್​ ಖಾನ್​ ಹಾಗೂ ಯಶ್​

ನಟ ಅಮೀರ್​ ಖಾನ್​ ಹಾಗೂ ಯಶ್​

  • Share this:
ಪ್ರಶಾಂತ್ ನೀಲ್ (Prashanth Neel) ಮತ್ತು ಯಶ್  (Yash) ಅಭಿನಯದ ಕೆಜಿಎಫ್ 2 (KGF Chapter 2) ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮೊದಲ ಭಾಗವು ಸೃಷ್ಟಿಸಿದ ಕ್ರೇಜ್‌ನ ನಂತರ, ದೇಶಾದ್ಯಂತ ಆ್ಯಕ್ಷನ್ ಮತ್ತು ಮಾಸ್ ಪ್ರೇಕ್ಷಕರು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ನಂತರ ಕೆಜಿಎಫ್ 2 ಚಿತ್ರ ಈಗ ಕೇವಲ ಕನ್ನಡ ಚಿತ್ರವಾಗಿ ಉಳಿದಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾಗಿ, ಕೇವಲ ಕನ್ನಡಿಗರಷ್ಟೇ ಅಲ್ಲ, ಇಡೀ ಭಾರತ ಚಿತ್ರರಂಗದ ಪ್ರೇಕ್ಷಕರು ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ.

ಕೊರೋನಾ ಲಾಕ್​ಡೌನ್ ಕಾರಣದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಚಿತ್ರಗಳ ಪಟ್ಟಿ ದೊಡ್ಡದಿತ್ತು. ಬಿಡುಗಡೆ ಆಗದೆ ಕಾದು ಕುಳಿತಿರುವ ಚಿತ್ರಗಳಿಂದಾಗಿ ತಮ್ಮ ಚಿತ್ರಕ್ಕೆ ತೊಂದರೆ ಆಗಬಾರದು ಎಂಬ ದೂರಾಲೋಚನೆಯಲ್ಲಿ ಕೆಜಿಎಫ್ 2 ಚಿತ್ರತಂಡ ಇದೆ. ಹಾಗಾಗಿ, ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹವಾ ಕೆಜಿಎಫ್ ನಿರ್ಮಾಪಕರು ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷದವರೆಗೂ ಮುಂದೂಡಿದರು.

KGF Chapter 2 Release Date : Yash's KGF 2 Movie Audio Rights Sold to Lahari Music which Creates New Record.
ಕೆಜಿಎಫ್ ಚಾಪ್ಟರ್ 2


ಚಿತ್ರವನ್ನು ಏಪ್ರಿಲ್ 14ನೇ ತಾರೀಖು, ಏಪ್ರಿಲ್ 2022ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕರು ಅನೌನ್ಸ್ ಮಾಡಿದ್ದರು. ಆದರೆ, ಆ ಎಚ್ಚರಿಕೆಯ ನಡೆಯೂ ಈಗ ಚಿತ್ರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: 100 Review: ಹಲವು ಟ್ವಿಸ್ಟ್ಸ್ ಮತ್ತು ಟರ್ನ್‍ಗಳಿಂದ ಕೂಡಿರುವ 100 ಸಿನಿಮಾ

ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ ಫೆಬ್ರವರಿ 2022ರ ಬಿಡುಗಡೆಗೆ ಸಿದ್ಧವಾಗಿದ್ದ ಅಮೀರ್ ಖಾನ್ (Aamir Khan)  ಅವರ ಲಾಲ್ ಸಿಂಗ್ ಚಡ್ಡಾ (Laal Singh Chaddha) ಮತ್ತೊಮ್ಮೆ ಪೋಸ್ಟ್ ಪೋನ್ ಆಗಿದೆ. ಈಗ ಈ ಚಿತ್ರ ಏಪ್ರಿಲ್ 2022ಕ್ಕೆ ಬಿಡುಗಡೆಯ ಪ್ಲ್ಯಾನ್ ಹಾಕಿಕೊಂಡಿದೆ. ಆದರೆ ಏಪ್ರಿಲ್ ತಿಂಗಳ ಯಾವ ದಿನ ಈ ಚಿತ್ರ ಬಿಡುಗಡೆ ಆಗಲಿದೆ ಎನ್ನುವ ಬಗ್ಗೆ ಚಡ್ಡಾ ಟೀಮ್ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ಆದರೆ, ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ ಈ ಚಿತ್ರ ಬಿಡುಗಡೆ ಆದಾಗ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಪ್ರಮುಖ ಥಿಯೇಟರ್‌ಗಳನ್ನು ಆಕ್ರಮಿಸಲಿದೆ ಎನ್ನುವುದಂತೂ ಸತ್ಯ.

ಕೆಜಿಎಫ್ 2 ಚಿತ್ರ ಮತ್ತು ಲಾಲ್ ಸಿಂಗ್ ಚಡ್ಡಾ ಚಿತ್ರಗಳು ಒಂದೇ ತಿಂಗಳ ಆಸುಪಾಸಿನಲ್ಲಿ ಬಿಡುಗಡೆ ಆದರೆ ಎರಡೂ ಚಿತ್ರಗಳಿಗೆ ತೊಂದರೆ ಆಗುವುದು ಕಟ್ಟಿಟ್ಟ ಬುತ್ತಿ. ದೊಡ್ಡ ಸ್ಟಾರ್ ನಟರ ಚಿತ್ರಗಳು ಒಟ್ಟಿಗೆ ಬಿಡುಗಡೆ ಆಗುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಜೊತೆ ಜೊತೆಯಲ್ಲೇ ಬಿಡುಗಡೆ ಆದ ಎರಡು ದೊಡ್ಡ ಚಿತ್ರಗಳೂ ದೊಡ್ಡ ಹಿಟ್ ಆದ ಉದಾಹರಣೆಗಳೂ ಸಾಕಷ್ಟಿವೆ. ಆದರೆ, ದೊಡ್ಡ ಬಜೆಟ್‌ನ ಕೆಜಿಎಫ್ 2 ಚಿತ್ರ ಆದಷ್ಟೂ ಏಕಾಂಗಿಯಾಗಿಯೇ ತೆರೆಕಂಡು, ಗಲ್ಲಾಪೆಟ್ಟಿಗೆಯನ್ನು ಸಾಧ್ಯವಾದಷ್ಟೂ ದೋಚುವ ಪ್ಲ್ಯಾನ್ ಹಾಕಿಕೊಂಡಿದೆ.

ಇದನ್ನೂ ಓದಿ: ವಿಘ್ನೇಶ್​-ಸಮಂತಾ ಜತೆ ಹುಟ್ಟುಹಬ್ಬ ಆಚರಿಸಿಕೊಂಡ Nayanthara

ಹಾಗಾಗಿ, ಕೆಜಿಎಫ್ 2 ನಿರ್ಮಾಪಕರು ಲಾಲ್ ಸಿಂಗ್ ಚಡ್ಡಾ ಬಿಡುಗಡೆಯ ಅಧಿಕೃತ ದಿನಾಂಕ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಲಾಲ್ ಸಿಂಗ್ ಚಡ್ಡಾ ಕಾರಣಕ್ಕಾಗಿ ಕೆಜಿಎಫ್ ಬಿಡುಗಡೆಯ ದಿನಾಂಕದಲ್ಲಿ ಮತ್ತೆ ಬದಲಾವಣೆ ಆದರೆ ಅಚ್ಚರಿಯಿಲ್ಲ. ಅಂದಹಾಗೆ, ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ತೆಲುಗು ನಟ ನಾಗ ಚೈತನ್ಯ ಅವರ ಚೊಚ್ಚಲ ಬಾಲಿವುಡ್ ಚಿತ್ರವಾಗಿದೆ.
First published: