KGF 2 ಸಿನಿಮಾದ ಶೂಟಿಂಗ್​ ಕಂಪ್ಲೀಟ್​: 2016ರಲ್ಲಿ ಸಹಿ..ಇಂದು ಪ್ಯಾಕಪ್ ಎಂದ ಶ್ರೀನಿಧಿ ಶೆಟ್ಟಿ!

ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೊನೆಯ ದಿನ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರ ಬಗ್ಗೆ ಹಲವು ಪೋಸ್ಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದೆ ಎನ್ನುವುದನ್ನು ಈ ಪೋಸ್ಟ್‌ಗಳ ಮೂಲಕವೇ ಖಚಿತ ಪಡಿಸಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ

ನಟಿ ಶ್ರೀನಿಧಿ ಶೆಟ್ಟಿ

  • Share this:















'ಕೆಜಿಎಫ್' (KGF) ಅಂದರೆ ಕೇವಲ ಸಿನಿಮಾವಲ್ಲ. ಅದೊಂದು ಹೇಳಿಕೊಳ್ಳಲಾಗದ ಎಮೋಷನ್​. ಆ ಸಿನಿಮಾಗಳು ನಿರ್ಮಿಸಿದ ದಾಖಲೆ (Records)ಗಳನ್ನು ಇಂದಿಗೂ ಯಾರಿಗೂ ಅದರ ಸನಿಹ ಹೋಗಲು ಆಗಿಲ್ಲ. ಕೆಜಿಎಫ್​ ಮೊದಲ ಭಾಗವನ್ನು ನೋಡಿದ ಜನ, ಎರಡನೇ ಭಾಗದ ರೀಲಿಸ್​ಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇತ್ತೀಚೆಗೆ ಸಂಜಯ್ ದತ್ (Sanjay Dutt)​ ತಮ್ಮ ಡಬ್ಬಿಂಗ್ ಮುಗಿಸಿ ಪೋಸ್ಟ್​ವೊಂದನ್ನು ಮಾಡಿದ್ದರು. ಇದೀಗ ಕೆಜಿಎಫ್​ ಸಿನಿಮಾದ ಮತ್ತೊಂದು ಸುದ್ದಿ ಹೊರಬಂದಿದೆ.  ಚಿತ್ರದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಕೆಜಿಎಫ್2 ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಚಿತ್ರ ತಂಡ ಇನ್ನೂ ಶೂಟಿಂಗ್‌ ಹಂತದಲ್ಲಿ ಇದೆ. ಈ ವಿಚಾರವನ್ನು ನಟಿ ಶ್ರೀನಿಧಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಕೆಜಿಎಫ್2 ಬಗ್ಗೆ ಇದ್ದ ಗೊಂದಲಗಳು ಕೂಡ ಹೋಗಿದೆ. ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ಮುಗಿದಿದೆ. ಈ ಬಗ್ಗೆ ಹಲವು ಫೋಟೋ (Photo)ಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್​ ಮತ್ತಷ್ಟು ಥ್ರಿಲ್ (Thrill)​ ಆಗಿದ್ದಾರೆ.  ಈ ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿ ಬರೊಬ್ಬರಿ 5 ವರ್ಷ ಮುಡಿಪಾಗಿಟ್ಟಿದ್ದರಂತೆ. ಚಿತ್ರದ ಜೊತೆಗಿನ ನಂಟಿನ ಬಗ್ಗೆ ಬರೆದು ಕೊಳ್ಳುವುದರ ಜೊತೆಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ ಶ್ರೀನಿಧಿ.

ಸಂದೇಶ ಹಂಚಿಕೊಂಡ ಶ್ರೀನಿಧಿ ಶೆಟ್ಟಿ!

ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೊನೆಯ ದಿನ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರ ಬಗ್ಗೆ ಹಲವು ಪೋಸ್ಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದೆ ಎನ್ನುವುದನ್ನು ಈ ಪೋಸ್ಟ್‌ಗಳ ಮೂಲಕವೇ ಖಚಿತ ಪಡಿಸಿದ್ದಾರೆ. ಡಿಸೆಂಬರ್ 22ರಂದು ಶ್ರೀನಿಧಿ ಕೆಜಿಎಫ್‌ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಹಾಗಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗು ಸೆಟ್‌ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೆಜಿಎಫ್​ ಸಿನಿಮಾ ಛಾಯಗ್ರಾಹಕ ಭುವನ್​ ಗೌಡ ಅವರ ಹುಟ್ಟುಹಬ್ಬವನ್ನು ಕೂಡ ಕೆಜಿಎಫ್​ 2 ಸಿನಿಮಾ ಸೆಟ್​ನಲ್ಲಿ ಆಚರಿಸಲಾಗಿದೆ. ಕೇಕ್​ ಕಟ್ಟಿಂಗ್​ ವಿಡಿಯೋವನ್ನು ಶೇರ್​​ ಮಾಡಿಕೊಂಡಿದ್ದಾರೆ.





ಇದನ್ನು ಓದಿ : ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಅಪ್ಪು ಫೋಟೋ ಶೇರ್​ ಮಾಡಿದ `ಶ್ರೀವಲ್ಲಿ’!

2016ರಲ್ಲಿ ಸಹಿ..ಇಂದು ಪ್ಯಾಕಪ್​ ಎಂದ ನಟಿ

ಶ್ರೀನಿಧಿ ಶೆಟ್ಟಿ ಶೂಟಿಂಗ್‌ ಮುಗಿಸಿದ ಕೊನೆಯ ದಿನದಂದು ತಾನು ಕೆಜಿಎಫ್ ಚಿತ್ರಕ್ಕೆ ಸಹಿ ಹಾಕಿದ ಮೊದಲ ದಿನವನ್ನು ನೆನಪಿಸಿಕೊಂಡಿದ್ದಾರೆ. ‘ನನಗೆ ತುಂಬಾನೆ ವಿ‍ಶೇಷವಾದ ಶೂಟಿಂಗ್‌ ಮುಗಿಸಿದ್ದೇನೆ. 2016ರಲ್ಲಿ ನಾನು ಈ ಚಿತ್ರಕ್ಕೆ ಸಹಿ ಹಾಕಿದೆ. ಕೊನೆಗೂ ಇಂದು ಇದು ನನ್ನ ಕಡೆ ದಿನದ ಶೂಟಿಂಗ್ ಮತ್ತು ಪ್ಯಾಕಪ್. ಹಾಗಂತ ಇದು ಅಂತ್ಯವಲ್ಲ, ಬದಲಿಗೆ ಹೊಸದರ ಆರಂಭ‘ ಎಂದು ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಮೂಲಕ ಸತತ 5 ವರ್ಷಗಳಿಂದ ತಮಗೂ ಕೆಜಿಎಫ್‌ಗೂ ಇರುವ ನಂಟನ್ನು ಶ್ರೀನಿಧಿ ಹೇಳಿಕೊಂಡಿದ್ದಾರೆ.



ಇದನ್ನು ಓದಿ : ಸರಿಗಮಪ ವೇದಿಕೆಯಲ್ಲಿ ಅನಿಲ್​ ಕುಂಬ್ಳೆ: ಕನ್ನಡ ಹಾಡು ಹೇಳಿ ರಂಜಿಸಿದ ಮಾಜಿ ಕ್ರಿಕೆಟಿಗ!

ಡಿಸೆಂಬರ್ 20ರಂದು ನಡೆದ ಕ್ಲೈಮ್ಯಾಕ್ಸ್ ಶೂಟ್​!

ಹೌದು, ಡಿಸೆಂಬರ್​ 20ರಂದು ಕೆಜಿಎಫ್ 2​ ಸಿನಿಮಾದ ಕ್ಲೈಮಾಕ್ಸ್​ ಹಂತದ ಚಿತ್ರೀಕರಣ ನಡೆದಿದೆ. ಈ ಬಗ್ಗೆ ಸ್ವತಃ ನಿರ್ದೇಶಕರಾದ ಪ್ರಶಾಂತ್​​ ನೀಲ್​ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಕ್ಲೈಮ್ಯಾಕ್ಸ್​ ಶೂಟ್ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಒಟ್ಟಿನಲ್ಲಿ ಕೆಜಿಎಫ್​ 2 ಸಿನಿಮಾದ ಕೆಲಸಗಳು ವೇಗ ಪಡೆದುಕೊಂಡಿದೆ. ಎಲ್ಲ ಕೆಲಸ ಮುಗಿದ ಬಳಿಕ ಪ್ರಚಾರ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.














Published by:Vasudeva M
First published: