• Home
 • »
 • News
 • »
 • entertainment
 • »
 • Actor Yash: ಲೈಫಲ್ಲಿ ಈ ತಪ್ಪು ಮಾಡಕ್​ ಹೋಗ್ಬೇಡಿ; ಫ್ಯಾನ್ಸ್​ಗೆ ಸೀರಿಯಸ್ ಆಗೇ ಎಚ್ಚರಿಕೆ ನೀಡಿದ ಯಶ್

Actor Yash: ಲೈಫಲ್ಲಿ ಈ ತಪ್ಪು ಮಾಡಕ್​ ಹೋಗ್ಬೇಡಿ; ಫ್ಯಾನ್ಸ್​ಗೆ ಸೀರಿಯಸ್ ಆಗೇ ಎಚ್ಚರಿಕೆ ನೀಡಿದ ಯಶ್

ಯಶ್​

ಯಶ್​

ಇತ್ತೀಚೆಗೆ ಆಯ್ರಾ ಎಲ್ಲ ಕಡೆ ಹೈಲೈಟ್​ ಆಗುತ್ತಿದ್ದಾಳೆ. ಯಶ್​-ರಾಧಿಕಾಗಿಂತ ಆಯ್ರಾ ವಿಚಾರ ಹೆಚ್ಚು ಸುದ್ದಿಯಾಗುತ್ತಿದೆ. ರಾಧಿಕಾಗೆ ಎರಡನೇ ಮಗು ಹುಟ್ಟಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೆಚ್ಚು ಸದ್ದು ಮಾಡಿದ್ದು ಇದೇ ಆಯ್ರಾ. ಈ ವಿಚಾರಕ್ಕೆ ಫ್ಯಾನ್ಸ್​​ಗೆ ಯಶ್​ ಎಚ್ಚರಿಕೆ ಕೊಟ್ಟಿದ್ದಾರೆ.

ಮುಂದೆ ಓದಿ ...
 • Share this:

  ಫ್ಯಾನ್ಸ್​ಗಳು ಒಳ್ಳೆಯದನ್ನು ಮಾಡಿದಾಗ ಯಶ್ ಬಾಯ್ತುಂಬ ಹೊಗಳಿದ್ದಾರೆ. ಅದೇ ರೀತಿ ತಪ್ಪು ಮಾಡಿದಾಗ ಅವರು ತಿದ್ದಿ ಹೇಳಿದ್ದಿದೆ. ಈಗ ಅಭಿಮಾನಿಗಳು ಮಾಡುತ್ತಿರುವ ತಪ್ಪಿನ ಬಗ್ಗೆ ಯಶ್​ ಕಿವಿ ಮಾತು ಹೇಳಿದ್ದಾರೆ. ಅಷ್ಟಕ್ಕೂ ಏನದು? ಇಲ್ಲಿದೆ ಉತ್ತರ.

  ಇತ್ತೀಚೆಗೆ ಆಯ್ರಾ ಎಲ್ಲ ಕಡೆ ಹೈಲೈಟ್​ ಆಗುತ್ತಿದ್ದಾಳೆ. ಯಶ್​-ರಾಧಿಕಾಗಿಂತ ಆಯ್ರಾ ವಿಚಾರ ಹೆಚ್ಚು ಸುದ್ದಿಯಾಗುತ್ತಿದೆ. ರಾಧಿಕಾಗೆ ಎರಡನೇ ಮಗು ಹುಟ್ಟಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೆಚ್ಚು ಸದ್ದು ಮಾಡಿದ್ದು ಇದೇ ಆಯ್ರಾ.

  ಈ ರೀತಿ ಮಾಡುತ್ತಿರುವುದು ತಪ್ಪು ಎಂದಿದ್ದಾರೆ ಯಶ್. ಹೌದು, ಇತ್ತೀಚೆಗೆ ಕರುನಾಡು ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್​ ಈ ಬಗ್ಗೆ ಹೇಳಿದ್ದಾರೆ. ವೇದಿಕೆಯ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಆಯ್ರಾ ಬಗ್ಗೆ ಕೇಳಿದ್ದಾರೆ. ಈ ವೇಳೆ ಪ್ರೇಕ್ಷಕರಿಂದ ಆಯ್ರಾ ಎನ್ನುವ ಘೊಷಣೆಗಳು ಮೊಳಗಿದವು.
  ಇದಕ್ಕೆ ಅಸಮಾಧಾನಗೊಂಡ ಯಶ್​, “ನಾನು ಎಲ್ಲೇ ಹೋದರೂ ಆಯ್ರಾ ಬಗ್ಗೆ ಕೇಳುತ್ತಾರೆ. ನಮ್ಮ ಮನೆ ಬಳಿಯೂ ಅವಳನ್ನು ನೋಡಲು ಬರುತ್ತಾರೆ. ಆದರೆ, ಇದು ಸರಿಯಲ್ಲ. ಈ ತಪ್ಪನ್ನು ಎಂದಿಗೂ ಮಾಡಲು ಹೋಗಬೇಡಿ. ಅದು ಎಷ್ಟೇ ದೊಡ್ಡ ಸೆಲೆಬ್ರಿಟಿಯ ಮಗಳಾಗಲಿ. ಅವರು ಏನಾದರೂ ಸಾಧನೆ ಮಾಡಿದ ನಂತರವೇ ಅವರನ್ನು ಹೊಗಳಿ. ಅಲ್ಲಿವರೆಗೆ ಅವರು ಸಾಮಾನ್ಯರು,” ಎಂದರು.

  Published by:Rajesh Duggumane
  First published: