RRR ಮೇಲೆ KGF- 2 ಅಭಿಮಾನಿಗಳ ಕಿಡಿ: KGF ಪ್ರಚಾರದ ವಿಳಂಬಕ್ಕೆ ರಾಜಮೌಳಿ ಕಾರಣ ಎನ್ನುತ್ತಿದ್ದಾರೆ ಅಭಿಮಾನಿಗಳು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್: ಚಾಪ್ಟರ್ 2' ಚಿತ್ರದ ಪ್ರಚಾರ ಕಾರ್ಯ ಆರಂಭವಾಗದ್ದಕ್ಕೆ ರಾಜಮೌಳಿ ಕಾರಣ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. RRR ಬಿಡುಗಡೆ ನಂತರ ಕೆಜಿಎಫ್ 2 ಪ್ರಚಾರ ಆರಂಭವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಲಿವೆ.

ಕೆಜಿಎಫ್-2

ಕೆಜಿಎಫ್-2

  • Share this:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್: ಚಾಪ್ಟರ್ 2' (KGF- 2 )ಸಿನಿಮಾಕ್ಕಾಗಿ ಇಡೀ ಭಾರತವೇ ಎದುರು ನೋಡುತ್ತಿದೆ. ಯಶ್ (Yash) ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ 'ಕೆಜಿಎಫ್: ಚಾಪ್ಟರ್ 1' ಇದೀಗ 'ಕೆಜಿಎಫ್: ಚಾಪ್ಟರ್ 2' ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಕೆಜಿಎಫ್ 2 ಚಿತ್ರವು ಏಪ್ರಿಲ್ 14ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲು ರೆಡಿಯಾಗಿದೆ. ಆದರೆ ಕೆಜಿಎಫ್-2 ಸಿನಿಮಾದ ಪ್ರಚಾರದ ಕೊರತೆ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಕೆಜಿಎಫ್ 2 ಚಿತ್ರವು ಏಪ್ರಿಲ್ 14 ರಂದು ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ, ಅಭಿಮಾನಿಗಳು ರಾಜಮೌಳಿ (Rajamouli) ಅವರಿಗೆ ತುಂಬಾ ಹತ್ತಿರವಿರುವ ನಿರ್ಮಾಪಕರು ಅವರ ಚಿತ್ರವನ್ನು ಪ್ರಚಾರ ಮಾಡಲು ಅವರಿಗೆ ಮತ್ತು ಆರ್​ಆರ್​ಆರ್ (RRR) ಗೆ ಹೆಚ್ಚಿನ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ರಾಜಮೌಳಿ ಮೇಲೆ ಕನ್ನಡ ಸಿನಿ ಅಭಿಮಾನಿಗಳು ಬೇಸರ:

ಹೌದು, ರಾಜಮೌಳಿ ನಿರ್ದೇಶನದ ಬಿಗ್​ ಬಜೆಟ್ ಸಿನಿಮಾ RRR ಚಿತ್ರವು ಇದೇ ಮಾರ್ಚ್ 25 ಬಿಡುಗಡೆಗಾಯುತ್ತಿದೆ. ಈ ಚಿತ್ರ ಬಿಡುಗಡೆ ಆಗುವವರೆಗೂ ಯಶ್ ತಮ್ಮ ಚಿತ್ರದ ಯಾವುದೇ ಪ್ರಚಾರವನ್ನು ಪ್ರಾರಂಭಿಸುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಕನ್ನಡ ಅಭಿಮಾನಿಗಳಿಗೆ ಭಾರಿ ಬೇಸರಕ್ಕೆ ಕಾರಣವಾಗಿದೆ. ರಾಜಮೌಳಿ ಅವರ ಚಿತ್ರವು ಕೆಜಿಎಫ್ ಸ್ಥಾನದಲ್ಲಿರುತ್ತಿದ್ದರೆ ಅದೇ ರೀತಿ ಮಾಡುತ್ತಿದ್ದರೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

ರಾಧೆ ಶ್ಯಾಮ್ ಬಿಡುಗಡೆಗಾಗಿ ಕಾದ ರಾಜಮೌಳಿ:

ಪ್ರಭಾಸ್ ರಾಧೆ ಶ್ಯಾಮ್ ಬಿಡುಗಡೆಯಾಗುವವರೆಗೂ ರಾಜಮೌಳಿ ಕಾದು ನಂತರ ತಮ್ಮ ಪ್ರಚಾರದ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಯಶ್ ಮತ್ತು ಅವರ ಸಿನಿಮಾ ತಂಡವು ಇದೇ ಕ್ರಮ ಅನುಸರಿಸುತ್ತಿದ್ದು, RRR ಬಿಡುಗಡೆಗಾಗಿ ಯಶ್‌ ಸಹ ಕಾಯುತ್ತಿದ್ದಾರೆ ಎಂದು ತೋರುತ್ತಿದೆ. ಆದರೆ ಚಿತ್ರದ ಪ್ರಮೋಷನ್ ವಿಳಂಬಕ್ಕೆ ರಾಜಮೌಳಿ ಕಾರಣ ಎಂದು ಯಶ್ ಅಭಿಮಾನಿಗಳು ದೂರುತ್ತಿದ್ದಾರೆ.

ಇದನ್ನೂ ಓದಿ: Yash: "ಕೆಜಿಎಫ್‌-2 ರಿಲೀಸ್‌ ಯಾವಾಗ?" ಮೋದಿಗೂ ಕಾಡ್ತಿದೆಯಂತೆ ಈ ಪ್ರಶ್ನೆ! ಏನಿದು Letterನ ಅಸಲಿ ಕಥೆ?

ಬಹುನೀರಿಕ್ಷಿತ ಸ್ಟಾರ್ ನಿರ್ದೇಶಕ ಎಸ್‌. ಎಸ್‌. ರಾಜಮೌಳಿ ಚಿತ್ರ RRR ಇದೇ ಮಾರ್ಚ್ 25ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಸಹ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು ಮುಂದಿನ ಚಿತ್ರಗಳಿಗೆ ಪ್ರಬಲ ಸ್ಪರ್ಧಿಯಾಗಲಿದೆ. ಕೆಜಿಎಫ್ 2 ಸಹ ಈ ಎಲ್ಲಾ ವಿಚಾರಗಳನ್ನು ಗಣನೆಯಲ್ಲಿಟ್ಟುಕೊಂಡು ಯಶ್ ಮತ್ತು ಚಿತ್ರತಂಡ ತನ್ನ ಪ್ರಚಾರ ಕಾರ್ಯವನ್ನು ವಿಳಂಬ ಮಾಡುತ್ತಿದೆ.

RRR ಬಿಡುಗಡೆ ನಂತರ ಕೆಜಿಎಫ್ 2 ಪ್ರಚಾರ ಪ್ರಾರಂಭ:

ಈ ಕಾರಣದಿಂದಾಗಿ ರಾಜಮೌಳಿ ಮೇಲೆ ಕನ್ನಡದ ಕೆಜಿಎಫ್ ಅಭಿಮಾನಿಗಳು ಗರಂ ಆಗಿದ್ದಾರೆ. ಕೆಜಿಎಫ್ 2 ಚಿತ್ರವು ಏಪ್ರಿಲ್ 14 ರಂದು ತೆರೆಮೇಲೆ ಅಪ್ಪಳಿಸಲಿದ್ದು, RRR ಸಿನಿಮಾ ಬಿಡುಗಡೆ ನಂತರವೇ ಕೆಜಿಎಫ್-2 ಬಿಡುಗಡೆ ಪ್ರಚಾರ ಕಾರ್ಯ ನಡೆಯಬಹುದು ಎಂದು ಹೇಳಲಾಗುತ್ತಿದೆ. 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತೆರೆಗೆ ಬರಲಿರುವುದರಿಂದ, ಚಿತ್ರತಂಡವು ಭರ್ಜರಿ ಪ್ಲ್ಯಾನಿಂಗ್ ಮಾಡಿಕೊಂಡು ಪ್ರಮೋಷನ್ ಶುರು ಮಾಡಲಿದೆ ಎನ್ನಲಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಚಿತ್ರತಂಡವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಿದೆ. ಕುಂದಾಪುರದ ಆನೆಗುಡ್ಡೆ ಗಣಪತಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮುಂತಾದ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.

ಇದನ್ನೂ ಓದಿ: KGF Chapter 2 ಟ್ರೈಲರ್​ ನೋಡಿದ ಸೆನ್ಸಾರ್​ ಸದಸ್ಯ ಹೇಳಿದ್ದೇನು? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ!

ಬಹು ತಾರಾಬಳಗದ ಚಿತ್ರ ಕೆಜಿಎಫ್ 2:

'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮುಂತಾದವರು ಅಭಿನಯಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ. ಮೊದಲ ಭಾಗದ ಹಲವು ಕಲಾವಿದರು, 2ನೇ ಭಾಗದಲ್ಲಿ ಮುಂದುವರಿಯಲಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ವಿಶ್ವಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ‘ಕೆಜಿಎಫ್ 2’ ಚಿತ್ರ ಬಿಡುಗಡೆಗೆ ಸಿನಿ ರಸಿಕರು ಕಾಯುತ್ತಿದ್ದಾರೆ.
Published by:shrikrishna bhat
First published: