HBD Prashanth Neel: ಪ್ರಶಾಂತ್​ ನೀಲ್ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಸೆಲೆಬ್ರಿಟಿಗಳು: ವಿಶೇಷ ವಿಡಿಯೋ ಶೇರ್​ ಮಾಡಿದ ಹೊಂಬಾಳೆ ಫಿಲಂಸ್​

ನಿರ್ದೇಶಕ ಪ್ರಶಾಂತ್​ ನೀಲ್ ಅವರಿಗೆ ಜೂನಿಯರ್​ ಎನ್​ಟಿಆರ್, ಪ್ರಭಾಸ್​, ವಿದ್ಯಾ ಶ್ರೀಮುರಳಿ, ವಿಜಯ್ ಕಿರಗಂದೂರು ಅವರು ವಿಶ್ ಮಾಡಿದ್ದಾರೆ. ಇನ್ನು ಹೊಂಬಾಳೆ  ಫಿಲಂಸ್ ಪ್ರಶಾಂತ್​ ನೀಲ್​ ಹುಟ್ಟುಹಬ್ಬಕ್ಕೆಂದು ವಿಶೇಷ ವಿಡಿಯೋ ಒಂದನ್ನು ಮಾಡುವ ಮೂಲಕ ಶುಭ ಕೋರಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಶಾಂತ್​ ನೀಲ್​

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಶಾಂತ್​ ನೀಲ್​

  • Share this:
ಕೆಜಿಎಫ್​ ಎಂಬ ಸಿನಿಮಾ ಮಾಡುವ ಮೂಲಕ ಭಾರತದ ಸಿನಿರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್​. ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಪ್ರಶಾಂತ್​ ನೀಲ್​ ತೆಲುಗು ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಕೆಜಿಎಫ್​ ಸಿನಿಮಾದಿಂದಾಗಿ ತೆಲುಗು ಸಿನಿಮಾಗಳ ನಿದೇಶನಕ್ಕೆ ಪ್ರಶಾಂತ್​ ನೀಲ್​ ಅವರಿಗೆ ಒಂದರ ಹಿಂದೆ ಒಂದರಂತೆ ಅವಕಾಶಗಳು ಅರಸಿ ಬರುತ್ತಿದೆ. ಲಾಖ್​ಡೌನ್​ಗೂ ಮೊದಲು ಹೊಂಬಾಳೆ ಫಿಲಂಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್​ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪ್ರಶಾಂತ್​ ನೀಲ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸ್ಟಾರ್ ನಿರ್ದೇಶಕನ ಹುಟ್ಟುಹಬ್ಬಕ್ಕೆ ಕನ್ನಡ ಹಾಗೂ ಟಾಲಿವುಡ್​ ಸೆಲೆಬ್ರಿಟಿಗಳು ಜತೆಗೆ ಅಭಿಮಾನಿಗಳು  ಶುಭ ಕೋರುತ್ತಿದ್ದಾರೆ. 

ನಿರ್ದೇಶಕ ಪ್ರಶಾಂತ್​ ನೀಲ್ ಅವರಿಗೆ ಜೂನಿಯರ್​ ಎನ್​ಟಿಆರ್, ಪ್ರಭಾಸ್​, ವಿದ್ಯಾ ಶ್ರೀಮುರಳಿ, ವಿಜಯ್ ಕಿರಗಂದೂರು ಅವರು ವಿಶ್ ಮಾಡಿದ್ದಾರೆ. ಇನ್ನು ಹೊಂಬಾಳೆ  ಫಿಲಂಸ್ ಪ್ರಶಾಂತ್​ ನೀಲ್​ ಹುಟ್ಟುಹಬ್ಬಕ್ಕೆಂದು ವಿಶೇಷ ವಿಡಿಯೋ ಒಂದನ್ನು ಮಾಡುವ ಮೂಲಕ ಶುಭ ಕೋರಿದೆ.



ಪ್ರಶಾಂತ್​ ನೀಲ್​ ಹಾಲಿವುಡ್​ ಸಿನಿಮಾ ಮಾಡಬೇಕೆನ್ನುವುದು ನಮ್ಮ ಆಶಯ. ಅವರಿಗೆ ಆ ಸಾಮರ್ಥ್ಯ ಇದೆ. ಕೆಜಿಎಫ್​ ಕೇಲವ ಆರಂಭ ಅಷ್ಟೆ. ಅವರು ಇನ್ನೂ ತಮ್ಮನ್ನ ತಾವು ಪ್ರಯೋಗಳಿಗೆ ಒಡ್ಡಿಕೊಳ್ಳಬೇಕಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.



ಜೂನಿಯರ್ ಎನ್​ ಟಿಆರ್ ಅವರೊಂದಿಗೂ ಪ್ರಶಾಂತ್ ನೀಲ್​ ಸಿನಿಮಾ ಮಾಡಬೇಕಿದೆ. ಮೈತ್ರಿ ಮೂವೀಸ್​ ಅವರೊಂದಿಗೆ ಎನ್​ಟಿಆರ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಶನ್​ನಲ್ಲಿ ಸಿನಿಮಾ ಮೂಡಿ ಬರಲಿದೆ. ಇನ್ನೂ ಜೂನಿಯರ್​ ಎನ್​ಟಿಆರ್​ ನಿರ್ದೇಶಕನಿಗೆ ಬರ್ತ್​ ಡೇ ವಿಶ್​ ಮಾಡುವುದರೊಂದಿಗೆ ನಿಮ್ಮ ಜೊತೆ ಕೆಲಸ ಮಾಡಲು ಕಾತರನಾಗಿರುವುದಾಗಿ ತಿಳಿಸಿದ್ದಾರೆ.



ಶ್ರೀಮುರಳಿ ಅವರ ಮಡದಿ ವಿದ್ಯಾ ಶ್ರೀಮುರಳಿ ಸಹ ಪ್ರಶಾಂತ್​ ನೀಲ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.




ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​ ಸಹ ಪ್ರಶಾಂತ್​ ನೀಲ್ ಅವರ ಬರ್ತ್​ ಡೇಗೆ ವಿಶ್ ಮಾಡಿದ್ದಾರೆ. ಪ್ರಭಾಸ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಶನ್​ನಲ್ಲಿ ಸಲಾರ್ ಸಿನಿಮಾ ಮೂಡಿ ಬರುತ್ತಿದೆ.








View this post on Instagram






A post shared by Prabhas (@actorprabhas)






ಶ್ರುತಿ ಹಾಸನ್​ ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಈ ಹಿಂದೆಯೇ ಆರಂಭವಾಗಿತ್ತು. ಆದರೆ ಚಿತ್ರೀಕರಣದ ಸೆಟ್​ನಲ್ಲಿ ನಡೆದ ಅವಘದಿಂದ ಕೆಲ ಸಮಯ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಈಗ ಲಾಕ್​ಡೌನ್​ನಿಂದಾಗಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ಕೆಜಿಎಫ್​ ಚಾಪ್ಟರ್​ 2 ಹಾಗೂ ಸಲಾರ್ ಮುಗಿಯುತ್ತಿದ್ದಂತೆಯೇ ಪ್ರಶಾಂತ್ ನೀಲ್ ಮೈತ್ರಿ ಮೂವೀಸ್​ ನಿರ್ಮಾಣದ ಹಾಗೂ ಜೂನಿಯರ್​ ಎನ್​ಟಿಆರ್ ನಾಯಕನಾಗಿ ನಟಿಸಲಿರುವ ಚಿತ್ರದ ತಂಡ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ: The Family Man 2 ಖ್ಯಾತಿಯ ನಟಿ ಪ್ರಿಯಾಮಾಣಿ ಈ ಹಿಂದೆ ಬಿಕಿನಿ ತೊಟ್ಟು ವಿವಾದಕ್ಕೀಡಾಗಿದ್ದರು..!

ಕೆಜಿಎಫ್​ ಚಾಪ್ಟರ್​ 2 ಸಿನಿಮಾಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಯಶ್​ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಟೀಸರ್ ರಿಲೀಸ್ ಆಗಿದ್ದು, ಅದಕ್ಕೆ ಸಖತ್​ ಪ್ರತಿಕ್ರಿಯೆ ಸಿಕ್ಕಿತ್ತು.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: