• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • KGF 2: ಹಾಲಿವುಡ್​ ಸಿನಿಮಾಗೂ ಸೆಡ್ಡು ಹೊಡೆದ ಕೆಜಿಎಫ್​ 2​, ಸೂಪರ್​​ ಹೀರೋ ಕೈಯಲ್ಲೂ ರಾಕಿನಾ ಟಚ್​ ಮಾಡೋಕೆ ಆಗ್ಲಿಲ್ಲ

KGF 2: ಹಾಲಿವುಡ್​ ಸಿನಿಮಾಗೂ ಸೆಡ್ಡು ಹೊಡೆದ ಕೆಜಿಎಫ್​ 2​, ಸೂಪರ್​​ ಹೀರೋ ಕೈಯಲ್ಲೂ ರಾಕಿನಾ ಟಚ್​ ಮಾಡೋಕೆ ಆಗ್ಲಿಲ್ಲ

ಡಾಕ್ಟರ್​ ಸ್ಟ್ರೇಂಜ್​, ಕೆಜಿಎಫ್​ 2

ಡಾಕ್ಟರ್​ ಸ್ಟ್ರೇಂಜ್​, ಕೆಜಿಎಫ್​ 2

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ನೋಡ ನೋಡುತ್ತಲೇ ವರ್ಲ್ಡ್​ ಬಾಕ್ಸ್​ ಆಫೀಸ್​​ ಲೂಟಿ ಹೊಡೆಯುತ್ತಿದೆ.

  • Share this:

ಸಲಾಂ ರಾಕಿ ಭಾಯ್ (Rocky Bhai)​.. ಇಡೀ ವಿಶ್ವವೇ ಕಳೆದ ಕೆಲವು ದಿನಗಳಿಂದ ಇದೊಂದು ವಿಷಯದ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕಾರಣ ನಮ್ಮ ಮಾನ್​ಸ್ಟರ್​ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​. ಹೌದು, ಕೆಜಿಎಫ್​ 2 (KGF 2) ಸಿನಿಮಾ ಇಡೀ ವಿಶ್ವದಲ್ಲೇ ತನ್ನ ಆರ್ಭಟವನ್ನು ಮುಂದುವರೆಸಿದ. ವಿಶ್ವದ ಮೂಲೆ ಮೂಲೆಯಲ್ಲೂ ರಾಕಿ ಭಾಯ್​ ವೈಲೆನ್ಸ್ (Violence) ಜೋರಾಗಿದೆ. ಇನ್ನೂ ದಾಖಲೆಗಳೆಲ್ಲ ಯಶ್​ ಅಬ್ಬರದ ಮುಂದೆ ಬ್ರೇಕ್​ ಆಗಿದೆ. ಒಂದೊಂದೆ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿದೆ. ಇಡೀ ವಿಶ್ವವೇ ಕನ್ನಡ ಸಿನೆಮಾದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ಈ ಚಿತ್ರ ಹಲವಾರು ದಾಖಲೆಗಳನ್ನು ಧೂಳಿ ಪಟ ಮಾಡಿದೆ. ಸಿನಿಮಾ ರಿಲೀಸ್​ ಆಗಿ 27 ದಿನ ಕಳೆದರು, ಈ ಸಿನಿಮಾವನ್ನು ಟಚ್​ ಮಾಡೋದಕ್ಕೆ ಯಾವ ಸಿನಿಮಾಗಳಿಂದಲೂ ಸಾಧ್ಯವಾಗಿಲ್ಲ.


ಹಾಲಿವುಡ್​ ಸಿನಿಮಾಗೂ ಜಗ್ಗದ ರಾಕಿ ಭಾಯ್!


ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ನೋಡ ನೋಡುತ್ತಲೇ ವರ್ಲ್ಡ್​ ಬಾಕ್ಸ್​ ಆಫೀಸ್​​ ಲೂಟಿ ಹೊಡೆಯುತ್ತಿದೆ. ಯಾರೂ ಊಹಿಸಿಕೊಂಡಿರದಂತಹ ದಾಖಲೆಗಳನ್ನು ಮಾಡಿ ಮುನ್ನುಗುತ್ತಿದೆ. 25 ದಿನಗಳು ಕಳೆದ ಬಳಿಕ 'ಕೆಜಿಎಫ್ 2' ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಹಾಲಿವುಡ್​ ಸಿನಿಮಾಗೂ ಸೆಡ್ಡು ಹೊಡೆದಿದ್ದಾರೆ ರಾಕಿ ಭಾಯ್.


ಡಾಕ್ಟರ್​ ಸ್ಟ್ರೇಂಜ್​ಗೂ ಶಾಕ್ ಕೊಟ್ಟ ರಾಕಿ ಭಾಯ್​!


ಕಳೆದ ವಾರ 'ಕೆಜಿಎಫ್ 2' ಸಿನಿಮಾಗೆ ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್' ಕಾಂಪಿಟೇಷನ್ ಕೊಟ್ಟಿತ್ತು. ಇಂದು ರಿಲೀಸ್ ಆಗಿರುವ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ರಿಲೀಸ್ ಆಗಿದೆ. ಇದರ ಮಧ್ಯೆಯೂ ಕೆಜಿಎಫ್​ 2 ಅಬ್ಬರಿಸುತ್ತಿದೆ ಎಂದರೆ ಕನ್ನಡಿಗರಿಗೆ ಹೆಮ್ಮೆಯ ವಿಚಾರ ಅಲ್ವಾ? 27ನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ಹಿಂದೆಬಿದ್ದಿಲ್ಲ. ಆದರೆ, 25ನೇ ದಿನ ಹಾಗೂ 26ನೇ ದಿನಕ್ಕೆ ಹೋಲಿಸಿದರೆ, 27ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಇಳಿಕೆ ಕಂಡಿದೆ.


ಇದನ್ನೂ ಓದಿ: ಅವ್ನ್​ ಸಹವಾಸ ಮಾಡಿ ಪೇಚಿಗೆ ಸಿಲುಕಿದ ಜಾಕಲಿನ್! ಎಲ್ಲಿ ಹೋಗಬೇಕಂದ್ರೂ ಬೇಕು ಕೋರ್ಟ್ ಪರ್ಮಿಷನ್​


ಮೊದಲ ದಿನ 30 ಕೋಟಿ ಬಾಚಿಕೊಂಡಿದ್ದ ಡಾಕ್ಟರ್​ ಸ್ಟ್ರೇಂಜ್​!


27ನೇ ದಿನ 8.07 ಕೋಟಿ ಗಳಿಸಿದೆ. ಇನ್ನು ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಸುಮಾರು 1162.87 ಕೋಟಿ ಗಳಿಸಿದೆ ಎಂದಿದ್ದಾರೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ದುರ್ಬಾರ್ ಇನ್ನೂ ಮುಂದುವರೆದಿದ್ದು, ಕಲೆಕ್ಷನ್ ಬೇಟೆ ಇನ್ನೂ ಮುಂದುವರೆದಿದೆ. ಮಾರ್ವಲ್ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಭಾರತದಲ್ಲಿ ಅಭಿಮಾನಿಗಳು ಹೆಚ್ಚಿದ್ದಾರೆ. 'ಡಾಕ್ಟರ್ ಸ್ಟ್ರೇಂಜ್' ಮೊದಲ ದಿನ ಭಾರತದಲ್ಲಿ 30 ಕೋಟಿ ಬಾಚಿಕೊಂಡಿತ್ತು.


ಇದನ್ನೂ ಓದಿ: ಇಂಡಿಯನ್​ ಬಾಕ್ಸ್​ ಆಫೀಸ್​ ಲೂಟಿ ಮಾಡಿದ ದಕ್ಷಿಣ ಭಾರತದ ಟಾಪ್​ 10 ಸಿನಿಮಾಗಳಿವು


ಕೆಜಿಎಫ್​ 2 ಹಿಂದಿಕ್ಕಲು ಸೋತ ಹಾಲಿವಿಡ್​ ಸಿನಿಮಾ!


'ಡಾಕ್ಟರ್ ಸ್ಟ್ರೇಂಜ್' ಇಷ್ಟೊತ್ತಿಗಾಗಲೇ 100 ಕೋಟಿ ದಾಟಬೇಕಿತ್ತು. ಆದರೆ, ವರ್ಕಿಂಗ್ ಡೇಸ್‌ನಲ್ಲಿ ಸಿನಿಮಾ ಮೋಡಿ ಮಾಡುತ್ತಿಲ್ಲ. ಐದನೇ ದಿನ 'ಡಾಕ್ಟರ್ ಸ್ಟ್ರೇಂಜ್' ಗಳಿಸಿದ್ದು, 6.50 to 7.50 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಹಾಲಿವುಡ್ ಸಿನಿಮಾ 'ಕೆಜಿಎಫ್ 2' 27ನೇ ದಿನದ ಗಳಿಕೆಯನ್ನು ಹಿಂದಿಕ್ಕಲು ಸೋತಿದೆ.

First published: