ಬೆಂಗಳೂರು(ಜು.29): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕಾಣಿಸಿಕೊಂಡಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಾಟ್ಟಾಗಿದೆ ಎಂದರೆ ತಪ್ಪಾಗಲ್ಲ. ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಖಳನಾಯಕನಾಗಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ 100 ಕೋಟಿ ಬಜೆಟ್ನಿಂದ ತಯಾರಾಗುತ್ತಿದೆ.
ಇಂದು(ಜು.29) ಬಾಲಿವುಡ್ ನಟ ಸಂಜಯ್ ದತ್ ಹುಟ್ಟುಹಬ್ಬ. ಅವರು ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಇಂದು ಕೆಜಿಎಫ್-2 ಸಿನಿಮಾದಲ್ಲಿನ ಅಧೀರನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಸಂಜಯ್ ದತ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದ್ದು, ಅವರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಧೀರನ ಲುಕ್ ವೈರಲ್ ಆಗ್ತಿದೆ.
ಇದನ್ನೂ ಓದಿ:Gold Price Today: ಕೊಂಚ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಯಥಾಸ್ಥಿತಿ
ನಿರ್ದೇಶಕ ಪ್ರಶಾಂತ್ ನೀಲ್ ಅಧೀರನ ಹೊಸ ಫಸ್ಟ್ ಲುಕ್ ಪೋಸ್ಟರ್ನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್ ಜೊತೆ ಅವರು ಹಂಚಿಕೊಂಡಿರುವ ಶೀರ್ಷಿಕೆ ಗಮನ ಸೆಳೆಯುತ್ತಿದೆ. ‘ಯುದ್ಧ ಇರುವುದು ಪ್ರಗತಿಗಾಗಿ. ನನ್ನ ಈ ಮಾತನ್ನು ರಣಹದ್ದುಗಳು ಕೂಡ ಒಪ್ಪಿಕೊಳ್ಳುತ್ತವೆ’ ಎಂಬ ಡೈಲಾಗ್ ಅನ್ನು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.
"War is meant for progress, even the vultures will agree with me" - #Adheera, Happy Birthday @duttsanjay sir.#KGFChapter2 @TheNameIsYash @VKiragandur @hombalefilms @TandonRaveena @SrinidhiShetty7 @excelmovies @VaaraahiCC @PrithvirajProd @DreamWarriorpic @LahariMusic pic.twitter.com/VqsuMXe6rT
— Prashanth Neel (@prashanth_neel) July 29, 2021
ಕೆಜಿಎಫ್ ಚಿತ್ರದಲ್ಲಿ ಅಧೀರನ ಪಾತ್ರ ಬಹಳ ಪವರ್ಫುಲ್ ಆಗಿದೆ. ಕೆಜಿಎಫ್ ಮೊದಲ ಚಾಪ್ಟರ್ನಲ್ಲಿ ಅಧೀರ ಕೊನೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಕೆಜಿಎಫ್ ಎರಡನೇ ಅಧ್ಯಾಯದಲ್ಲಿ ಸಖತ್ ಸ್ಟ್ರಾಂಗ್ ಗೆಟಪ್ನಲ್ಲಿ ಅಧೀರ ತೆರೆ ಮೇಲೆ ಬರಲಿದ್ದಾರೆ.
ಪಾತ್ರವರ್ಗದಿಂದಲೇ ಈ ಕೆಜಿಎಫ್-2 ಸಿನಿಮಾ ಕುತೂಹಲ ಹುಟ್ಟು ಹಾಕಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಅವರು ರಮಿಕಾ ಸೇನ್ ಎಂಬ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಪ್ರಕಾಶ್ ರೈ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.
ಇದನ್ನೂ ಓದಿ:ಬಿಜೆಪಿ ಹೈಕಮಾಂಡ್ ಮೊದಲ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚಿಸಲ್ಲ; ಸಿಎಂ ಬಸವರಾಜ ಬೊಮ್ಮಾಯಿ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರೊಳಗೆ ‘ಕೆಜಿಎಫ್ 2’ ರಿಲೀಸ್ ಆಗಿರಬೇಕಿತ್ತು. ಆದರೆ ಕೊರೋನಾ ಎರಡನೇ ಅಲೆ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಈಗ ಹೊಸ ರಿಲೀಸ್ ಡೇಟ್ ಘೋಷಣೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ