KGF 2 ಅಬ್ಬರಕ್ಕೆ ಬಾಕ್ಸ್​ ಆಫೀಸ್ ಧೂಳಿಪಟ, ನಾಲ್ಕೇ ದಿನಕ್ಕೆ 29 ದಾಖಲೆ ಬರೆದ ರಾಕಿ ಬಾಯ್

kಎಜಿಎಫ್ 2 ಮೊದಲ ದಿನವೇ 135.5 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ ಬಿಗ್ಗೇಷ್ಟ್ ಓಪನಿಂಗ್ ಪಡೆದ ರಾಕಿ ಬಾಯ್ ನಾಲ್ಕೇ ದಿನದಲ್ಲಿ ಬಾಕ್ಸ್ ಆಫಿಸ್ ಸುಲ್ತಾನನಾಗಿ ಮೆರೆಯುತ್ತಿದ್ದಾನೆ.

KGF 2

KGF 2

  • Share this:
ಪ್ರಪಂಚದ ಯಾವ ಮೂಲೆಯಲ್ಲಿ ನೋಡಿದರೂ ಸದ್ಯ ಕೆಜಿಎಫ್ 2 (KGF 2) ಸದ್ದೇ ಕೇಳಿಬರುತ್ತಿದೆ. ಬಾಕ್ಸ್​ ಆಫೀಸ್​(Box Office)ನಲ್ಲಿ ರಾಕಿ ಭಾಯ್​ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್​ ಮಾಡುತ್ತಿದೆ. ಮೊದಲ ದಿನವೇ 135.5 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ ಬಿಗ್ಗೇಷ್ಟ್ ಓಪನಿಂಗ್ ಪಡೆದ ರಾಕಿ ಬಾಯ್ ನಾಲ್ಕೇ ದಿನದಲ್ಲಿ ಬಾಕ್ಸ್ ಆಫಿಸ್ ಸುಲ್ತಾನನಾಗಿ ಮೆರೆಯುತ್ತಿದ್ದಾನೆ. ಇದಲ್ಲದೇ ಕಲೆಕ್ಷನ್‌ ಲೆಕ್ಕಾಚಾರದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮುನ್ನುಗ್ಗುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ 4 ದಿನಗಳಲ್ಲಿ ಮಾಡಿದ ಕಲೆಕ್ಷನ್ ನೋಡಿದ ಸಿನಿಪಂಡಿತರು ಈ ದಾಖಲೆಯನ್ನು ಟಚ್​ ಮಾಡುವುದರಲಿ, ಈ ದಾಖಲೆಯತ್ತರ ಬರೋದಕ್ಕೂ ಮತ್ತೆ ರಾಕಿನೇ ಬರಬೇಕು ಅಂತಿದ್ದಾರೆ. ಇದಲ್ಲದೇ ಬಿಡುಗೆಯಾದ 4ನೇ ದಿನಕ್ಕೆ 29 ವಿಭಿನ್ನ ದಾಖಲೆಗಳನ್ನು ಬರೆದಿದೆ.

4ನೇ ದಿನಕ್ಕೆ 546 ಕೋಟಿ ಕಲೆಕ್ಷನ್:

ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿರುವ ಪ್ರಕಾರ, 4 ದಿನಗಳಲ್ಲಿ ಚಿತ್ರ ಪ್ರಪಂಚದಾದ್ಯಂತ ಬರೋಬ್ಬರಿ 546 ಕೋಟಿ ರೂ ಬಾಚಿದೆ ಎಂದು ತಿಳಿಸಿದೆ. ಈ ವಿಚಾರ ಕೇಳಿದ ಯಶ್ ಅಭಿಮಾನಿಗಳು ಹಬ್ಬನ್ನೇ ಆಚರಸುತ್ತಿದ್ದರೆ, ಉಳಿದ ಚಿತ್ರರಂಗಗಳು ರಾಕಿ ಅಬ್ಬರಕ್ಕೆ ಬೆಚ್ಚಿಬಿದ್ದಿವೆ.

ಇನ್ನು ಬಾಲಿವುಡ್‌ನಲ್ಲಂತೂ ‘ಕೆಜಿಎಫ್ 2’ ಸಿನಿಮಾ ಅಕ್ಷರಶಃ ದೂಳೆಬ್ಬಿಸಿದೆ. ಹಿಂದಿ ವರ್ಷನ್ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ ದಾಖಲೆಯ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 2ನೇ ದಿನ 46.79 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ 100.74 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: Sanjay Dutt: ಹುಡುಗಿಯರ ಮುಂದೆ ನಾಚಿಕೆಯಿಂದ ಡ್ರಗ್ಸ್ ಸೇವಿಸುತ್ತಿದ್ದೆ; ರಹಸ್ಯ ಬಿಚ್ಚಿಟ್ಟ ಸಂಜಯ್ ದತ್

4ನೇ ದಿನಕ್ಕೆ 29 ದಾಖಲೆ ರಾಕಿ ಬಾಯ್ ಹೆಸರಲ್ಲಿ:

ಕೆಜಿಎಫ್ 2 ಬಿಡುಗಡೆಯಾಗಿ 4ನೇ ದಿನಕ್ಕೆ ಬರೋಬರಬ್ಇ 500 ಕೋಟಿ ಕ್ಲಬ್ ಸೇರಿದೆ. ರಾಕಿ ಬಾಯ್ ಹೋಗುತ್ತಿರುವ ಸ್ಪೀಡ್ ನೋಡಿದರೆ ಕೆಲವೇ ದಿನಗಳ್ಲಲಿ 1000 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಇದರ ನಡುವೆ ಚಿತ್ರ ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ ಬರೋಬ್ಬರಿ 29 ದಾಖಲೆಗಳನ್ನು ಅಳಿಸಿಹಾಕಿದೆ.

ಹೌದು, ಕೆಜಿಎಫ್ 2 ಹಿಂದಿ ವರ್ಷನ್​ ನಲ್ಲಿ ಹೊಸ ದಾಖಲೆಯನ್ನು ತೆರೆದಿದೆ. ಅದರಂತೆ, ಹಿಂದಿಯಲ್ಲಿ ದಾಖಲೆಯ ವೀಕೆಂಡ್ ಕಲೆಕ್ಷನ್, ಹಿಂದಿ ವರ್ಷನ್​ ನಲ್ಲಿ ಒಂದೇ ದಿನ ಅತಿಹೆಚ್ಚು ಗಳಿಕೆ, ಬಾಲಿವುಡ್​ನಲ್ಲಿ ಚಿತ್ರ ಬಿಡುಗಡೆಯಾಗಿ 2ನೇ ದಿನದ ಅತಿಹೆಚ್ಚು ಗಳಿಕೆ ಮಾಡಿದೆ. ಇದಲ್ಲದೇ ಬಾಲಿವುಡ್​ ನಲ್ಲಿ ರವಿವಾರದಂದು ಅತಿ ಹೆಚ್ಚು ಕಲೇಕ್ಷನ್ ಆದ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ 2 ಸೇರ್ಪಡೆಯಾಗಿದೆ.ಇದರೊಂದಿಗೆ 4 ದಿನದಲ್ಲಿ ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಮಾಡಿದ ಸಿನಿಮಾ ಇದಾಗಿದ್ದು, ಅಂದಾಜಿನ ಪ್ರಕಾರ 200 ಕೋಟಿ ಸನಿಹ ಬಂದಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಕರ್ನಾಟದಲ್ಲಿ ದಾಖಲೆಯ ಮಟ್ಟದ ಓಪನಿಂಗ್ ದೊರಕಿದ್ದು, ವೀಕೆಂಡ್ ಅವದಿಯಲ್ಲಿ, ಮತ್ತು, 2, 3, 4ನೇ ದಿನಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಕರ್ನಾಟಕದಲ್ಲಿ ಭಾನುವಾರದಂದು ದಾಖಲೆಯ ಹಣ ಗಳಿಸಿದ ನಂಬರ್ ಒನ್ ಸಿನಿಮಾ ಎಂಬ ದಾಖಲೆ ಕೆಜಿಎಫ್ 2 ಪಾಲಿಗೆ ಒಲಿದಿದೆ.

ಇದನ್ನೂ ಓದಿ: KGF Chapter 2: ಟಚ್​ ಮಾಡೋದಿರ್ಲಿ, ಹತ್ತಿರ ಬರಕ್ಕೂ ಆಗಲ್ಲ! 2ನೇ ದಿನದ ಕಲೆಕ್ಷನ್​ ಕಂಡು ಬೆಚ್ಚಿಬಿದ್ದ ಸಿನಿ ಇಂಡಸ್ಟ್ರಿ

ಇದನ್ನು ಹೊರತು ಪಡಿಸಿ ಕೇರಳದಲ್ಲಿ ಬಿಗ್​ ಫೊನಿಂಗ್ ಜೊತೆಗೆ 2, 3, 4ನೇ ದಿನದಲ್ಲಿ ಹೆಚ್ಚು ಹಣ ಗಳಿಸುವುದಲ್ಲದೇ ವಾರಾತ್ಯಂದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಕೆಜಿಎಫ್ 2 ಕೇರಳದಲ್ಲಿಯೂ ನೂತನ ದಾಖಲೆ ನಿರ್ಮಿಸಿದೆ. ಇನ್ನು, ತೆಲುಗು ಸಿನಿರಂಗದಲ್ಲಿ ರಾಕಿಬಾಯ್ ಅಕ್ಷರಸಹ ದೂಳೆಬ್ಬಿಸಿದ್ದು, ಟಾಲಿವುಡ್​ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಇಲ್ಲಿಯೂ ಸಹ ತೆರೆಕಂಡ ದಿನದಿಂದ ಹಿಡಿದು 4ನೇ ದಿನದ ವರೆಗೆ ದಾಖಲೆಯ ಕಲೆಕ್ಷನ್ ಮಾಡಿದೆ.

ಇದಿಷ್ಟೇ ಅಲ್ಲದೇ ಭಾರತದಲ್ಲಿಯೇ ಕೆಜಿಎಫ್ 2 ಚಿತ್ರ ಐಮ್ಯಾಕ್ಸ್ ಕಲೆಕ್ಷನ್​ ನಲ್ಲಿ ಭರ್ಜರಿ ಗಳಿಕೆ ಮಾಡುವ ಮೂಲಕ ಯಾರು ಮಾಡಿರದ ದಾಖಲೆಗೆ ಮುತ್ತಿಕ್ಕಿದೆ. ಇನ್ನು, ಸ್ಯಾಂಡಲ್​ವುಡ್ ಪಾಲಿಗಂತು ಇದು ಚಿನ್ನದ ಗಣಿಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇತೊಹಾಸದ ಗಳಿಕೆಯನ್ನು ಮಾಡುವ ಮೂಲಕ ಬೆಂಚ್ ಮಾರ್ಕ್ ಸೆಟ್ ಮಾಡಿದೆ.
Published by:shrikrishna bhat
First published: