KGF Chapter 2 Release Date: ಹೊಸ ದಾಖಲೆಯತ್ತ ಕೆಜಿಎಫ್​ ಚಾಪ್ಟರ್​ 2: ಪ್ರಶಾಂತ್​ ನೀಲ್​ ಕೊಟ್ರು ಸಿಹಿ ಸುದ್ದಿ..!

KGF Chapter 2 Teaser: ನಿರ್ದೇಶಕ ಪ್ರಾಶಾಂತ್ ನೀಲ್​ ಅವರು ಕೆಜಿಎಫ್​ ಚಾಪ್ಟರ್ 2 ಸಿನಿಮಾಗೆ ಸಂಬಂಧಿಸಿದಂತೆ ಒಂದು ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು, ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬಗ್ಗೆ ನಿರ್ದೇಶಕ ಒಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಕೆಜಿಎಫ್​ ಚಾಪ್ಟರ್ 2

ಕೆಜಿಎಫ್​ ಚಾಪ್ಟರ್ 2

  • Share this:
ಪ್ರಶಾಂತ್ ನೀಲ್​ ನಿರ್ದೇಶನದ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಚಿತ್ರತಂಡ ಈ ಹಿಂದೆ ಹೇಳಿದ ದಿನಾಂಕಕ್ಕೆ ರಿಲೀಸ್​ ಆಗಿದ್ದರೆ ಇಂದು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ರಾಕಿ ಭಾಯ್​ ಹವಾ ಶುರುವಾಗಿರುತ್ತಿತ್ತು. ಜು.16ರಂದು ವಿಶ್ವದಾದ್ಯಂತ ಮಾನ್​ಸ್ಟರ್ ಅಬ್ಬರಿಸುತ್ತಿರುತ್ತಿದ್ದ. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಸಿನಿಮಾದ ರಿಲೀಸ್​ ದಿನಾಂಕ ಇನ್ನೂ ಪ್ರಕಟವಾಗಿಲ್ಲ.  ಕೇವಲ ಕನ್ನಡಿಗರು ಮಾತ್ರವಲ್ಲ ಬೇರೆ ಸಿನಿರಂಗದ ಪ್ರೇಕ್ಷಕರು ಕಾತರದಿಂದ ಎದುರು ನೋಡುತ್ತಿರುವ ಸಿನಿಮಾ ಎಂದರೆ ಅದು ಕೆಜಿಎಫ್​ ಚಾಪ್ಟರ್ 2. ಹೌದು, ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳಿರುವ ಹಾಗೂ ಹೊಂಬಾಳೆ ಫಿಲಂಸ್​ ನಿರ್ಮಾಣದ ಈ ಸಿನಿಮಾಗಾಗಿ ಯಶ್​ ಅಭಿಮಾನಿಗಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್ ನೀಲ್​ ಕೆಜಿಎಫ್​ ಚಿತ್ರದ ಕುರಿತಾಗಿ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಲಾಕ್​ಡೌನ್ ತೆರವುಗೊಳ್ಳುತ್ತಿದ್ದಂತೆಯೇ ದೊಡ್ಡ ದೊಡ್ಡ ಸಿನಿಮಾಗಳ ತಂಡಗಳು ರಿಲೀಸ್​ ದಿನಾಂಕವನ್ನು ಪ್ರಕಟಿಸುವ ತಯಾರಿ ನಡೆಸಿವೆ. ಇದಕ್ಕೆ ಕನ್ನಡದ ಕೆಜಿಎಫ್​ ಚಾಪ್ಟರ್​ 2 ಸಹ ಹೊರತಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕೆಜಿಎಫ್​ 2 ಚಿತ್ರದ ಹೊಸ ರಿಲೀಸ್​ ದಿನಾಂಕ ಪ್ರಕಟವಾಗಲಿದೆ. ಇತ್ತೀಚೆಗಷ್ಟೆ ನಿರ್ದೇಶಕ ಪ್ರಶಾಂತ್ ನೀಲ್ ಈ ಕುರಿತಾಗಿ ಅಪ್ಡೇಟ್ ಕೊಟ್ಟಿದ್ದರು. ​

You Gangsters made our Monster fearless & unstoppable 🔥#KGF2Teaser200MViewshttps://t.co/3xoDtHZ0be@TheNameIsYash @prashanth_neel @VKiragandur @hombalefilms @duttsanjay @TandonRaveena@SrinidhiShetty7 @excelmovies @AAFilmsIndia @VaaraahiCC @PrithvirajProd @DreamWarriorpic pic.twitter.com/D7Wkd7H1teಕೆಜಿಎಫ್​ ಚಾಪ್ಟರ್ 2 ರಿಲೀಸ್​ಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಈ ಚಿತ್ರತಂಡದ ಕಲಾವಿದರು ಡಬ್ಬಿಂಗ್​ ಮುಗಿಸಿದ್ದರು. ಇನ್ನು ಸಿನಿಮಾ ರಿಲೀಸ್ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಪ್ರಶಾಂತ್ ನೀಲ್​ ತಮ್ಮದೇ ಆದ ಸ್ಟೈಲ್​ನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ನವದಾಂಪತ್ಯಕ್ಕೆ ಕಾಲಿಟ್ಟ ಬಿಗ್‌ಬಾಸ್ ಖ್ಯಾತಿಯ‌ ಜೋಡಿ ರಾಹುಲ್‌ - ದಿಶಾ: ಇಲ್ಲಿವೆ ಮದುವೆ ಫೋಟೋಗಳು ..!

ಚಿತ್ರಮಂದಿರಗಳಲ್ಲಿ ಗ್ಯಾಂಗ್​ಸ್ಟರ್​ಗಳು ತುಂಬಿದಾಗ ನಮ್ಮ ಮಾನ್​ಸ್ಟರ್​ ಎಂಟ್ರಿ ಕೊಡುತ್ತಾನೆ ಎಂದು ಸಿನಿಮಾದ ರಿಲೀಸ್​ ದಿನಾಂಕವನ್ನು ಮುಂದೂಡಿರುವ ಸೂಚನೆ ನೀಡಿದ್ದರು ನಿರ್ದೇಶಕ. ಹೊಸ ರಿಲೀಸ್​ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿಯೂ ಪ್ರಶಾಂತ್ ನೀಲ್​ ತಿಳಿಸಿದ್ದರು.

ಈಗ ಇದೇ ನಿರ್ದೇಶಕ ಸಿನಿಮಾಗೆ ಸಂಬಂಧಿಸಿದಂತೆ ಒಂದು ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು, ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬಗ್ಗೆ ನಿರ್ದೇಶಕ ಒಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಯಶ್​ ಹುಟ್ಟುಹಬ್ಬದ ಹಿಂದಿನ ದಿನ ರಿಲೀಸ್​ ಆಗಿದ್ದ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಗಲೇ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಇದೇ ಟೀಸರ್ ಮತ್ತೊಂದು ದಾಖಲೆಯತ್ತ ಸಾಗಿದೆ.

ಇದನ್ನೂ ಓದಿ: Ajay Devgn: ಪೆಪ್ಪರ್​ ಆ್ಯಂಡ್ ಸಾಲ್ಟ್​ ಲುಕ್​ನಲ್ಲಿ ಅಜಯ್ ದೇವಗನ್​: ರಿವೀಲ್​ ಆಯ್ತು ಮೊದಲ ವೆಬ್ ಸರಣಿ ಲುಕ್​..!

ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ ಹತ್ತಿರ ಹತ್ತಿರ 200 ಮಿಲಿಯನ್​ ಅಂದರೆ 20 ಕೋಟಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಜೊತೆಗೆ 8.4 ಮಿಲಿಯನ್​ ಲೈಕ್ಸ್​ ಸಹ ಸಿಗುತ್ತಿದೆ. ಈ ಖುಷಿಯ ವಿಷಯವನ್ನು ಪ್ರಶಾಂತ್ ನೀಲ್​ ಈಗ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.


ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ರಮಿಕಾ ಸೇನ್​ ಪಾತ್ರದಲ್ಲಿ ರವೀನಾ ಟಂಡನ್​, ಅಧೀರನಾಗಿ ಸಂಜಯ್​ ದತ್​ ಕಾಣಿಸಿಕೊಳ್ಳಲಿದ್ದು, ಪ್ರಕಾಶ್​ ರೈ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Published by:Anitha E
First published: