ಥಿಯೇಟರ್ಗೆ (Theater)ಹೋಗಿ ಒಂದು ಸಿನಿಮಾ (Cinema) ನೋಡಿ ಬರೋಣ ಎಂದ ಭಾವಿಸುವ ಚಿಕ್ಕ ಮಕ್ಕಳ ಪೋಷಕರು ಅಲ್ಲಿ ನಡೆಯುವ ಸೀನ್ ಇಮ್ಯಾಜಿನ್ ಮಾಡ್ಕೊಂಡೇ ತಮ್ಮ ಪ್ಲಾನ್ ಡ್ರಾಪ್ ಮಾಡುತ್ತಾರೆ. ಚೆನ್ನಗಿ ರೆಡಿಯಾಗಿ ಜಾಲಿಯಾಗಿ ಸಿನಿಮಾ ನೋಡಿಕೊಂಡು ಬರಲು ಥಿಯೇಟರ್ಗೆ ಹೋಗೋದು. ಅಲ್ಲಿ ಸಿನಿಮಾ ಶುರುವಾಗಿ ಸ್ವಲ್ಪ ಹೊತ್ತಲ್ಲೇ ಮಗು (Baby) ಜೋರಾಗಿ ಅಳೋದು. ಆಗ ಅಕ್ಕಪಕ್ಕ ಇದ್ದವರೆಲ್ಲ ಆಕ್ಷೇಪಾರ್ಹವಾಗಿ ನೋಡುವುದು, ಮಗುವನ್ನು ಸಂಭಾಳಿಸಲೂ ಆಗದೆ, ಸಿನಿಮಾವನ್ನೂ ನೋಡದೆ, ಅಕ್ಕ ಪಕ್ಕ ಕೂತವರ ನೋಟವನ್ನೂ ಮಾತುಗಳನ್ನೂ ಕೇಳಿಸಿಕೊಂಡು ಅರ್ಧಕ್ಕೆ ಮನೆಗೆ ಬರುವ ಕೆಲಸ ಬೇಕಾ? ಯಾರಿಗೆ ಬೇಕು ಥಿಯೇಟರ್, ಮನೆಯಲ್ಲೇ ಇದ್ದು ಬಿಡೋಣ ಎನ್ನುವ ಪೋಷಕರೇ ಹೆಚ್ಚು. ಈಗ ಅಂಥವರಿಗಾಗಿಯೇ ಕೇರಳ ಸರ್ಕಾರ (Kerala Govt) ಸೂಪರ್ ಐಡಿಯಾ ಮಾಡಿದೆ.
ಕೇರಳದಲ್ಲಿ ಸರ್ಕಾರ ನಡೆಸುವ ಚಿತ್ರಮಂದಿರಗಳಲ್ಲಿ ಹೊಸ ಸೌಲಭ್ಯವೊಂದು ಸಿಗಲಿದೆ. ಇದು ವಿಶೇಷವಾಗಿ ಚಿಕ್ಕ ಮಕ್ಕಳಿರುವ ಪೋಷಕರಿಗೆ ವರದಾನ. ಹಾಗೆಯೇ ಪ್ರೇಕ್ಷಕರಿಗೂ ಸಮಾಧಾನ ಕೊಡುವ ಸಂಗತಿ.
ಕ್ರೈಯಿಂಗ್ ರೂಂ ಅಗತ್ಯವೇನು?
ಕೇರಳ ಸರ್ಕಾರ ನಡೆಸುವಂತಹ ಥಿಯೇಟರ್ ಕಾಂಪ್ಲೆಕ್ಸ್ಗಳಲ್ಲಿ ಸೌಂಡ್ ಪ್ರೂಫ್ ಕ್ರೈಯಿಂಗ್ ರೂಂಗಳನ್ನು ಸೆಟಪ್ ಮಾಡಲು ಯೋಜನೆ ಹಾಕಲಾಗಿದೆ. ಚಿಕ್ಕ ಮಕ್ಕಳೊಂದಿಗೆ ಥಿಯೇಟರ್ಗೆ ಬರುವ ಪೋಷಕರಿಗಾಗಿಯೇ ಈ ವಿಶೇಷ ಸೌಲಭ್ಯವನ್ನು ಜಾರಿಮಾಡಲಾಗಿದೆ. ಸಿನಿಮಾ ನೋಡುತ್ತಿರುವಾಗಲೇ ಮಗು ಅಳುತ್ತಿದ್ದರೆ ಪೋಷಕರು ಮಗುವನ್ನು ಕ್ರೈಯಿಂಗ್ ರೂಂಗೆ (Crying Room) ಕರೆದೊಯ್ಯಬಹುದು. ಅಲ್ಲಿರುವ ಗ್ಲಾಸ್ ವಿಂಡೋ ಮೂಲಕ ಪೋಷಕರು ಸಿನಿಮಾ ಕೂಡಾ ನೋಡಬಹುದು. ಇದು ಇದರ ವಿಶೇಷತೆ.
ಫೋಟೋ ಶೇರ್ ಮಾಡಿದ ಸಚಿವರು
ಈ ಕ್ರೈಯಿಂಗ್ ರೂಂನಲ್ಲಿ ಪೋಷಕರಿಗಾಗಿಯೇ ಕೆಲವು ಸೀಟ್ಗಳು ಇರಲಿದ್ದು ಇಲ್ಲಿ ಪೋಷಕರು ಅಥವಾ ಮಕ್ಕಳ ಕೇರ್ ಟೇಕರ್ಗಳು ಕುಳಿತು ಸಿನಿಮಾ ನೋಡಬಹುದು. ಕೇರಳದ ಸಾಂಸ್ಕೃತಿಕ ಸಚಿವರಾದ ವಿ.ಎನ್ ವಾಸವ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಕ್ರೈಯಿಂಗ್ ರೂಂನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದೀಗ ಕೇರಳದ ತಿರುವನಂತಪುರಂನ ಕೈರಲಿ ಶ್ರೀ ನಿಲಾ ಥಿಯೇಟರ್ನಲ್ಲಿ ಈ ಕ್ರೈಯಿಂಗ್ ರೂಂ ನಿರ್ಮಿಸಲಾಗಿದೆ.
ಇದನ್ನೂ ಓದಿ: Actor Udhayanidhi Stalin: ತಂದೆಯ ಕ್ಯಾಬಿನೆಟ್ನಲ್ಲೇ ಮಿನಿಸ್ಟರ್ ಆದ ತಮಿಳು ನಟ
ಮಕ್ಕಳೊಂದಿಗೆ ಥಿಯೇಟರ್ಗೆ ಬರುವ ಪೋಷಕರು ಸಿನಿಮಾವನ್ನು ಎಂಜಾಯ್ ಮಾಡಲು ಸಾಧ್ಯವಾಗುವುದು ತುಂಬಾ ವಿರಳ. ಮಕ್ಕಳು ಥಿಯೇಟರ್ನ ಕತ್ತಲು, ಸೌಂಡ್ ಹಾಗೂ ಬೆಳಕಿಗೆ ಬೇಗನೆ ಅಳುತ್ತಾರೆ. ಹಾಗಾಗಿ ಪೋಷಕರು ಅನಿವಾರ್ಯವಾಗಿ ಸಿನಿಮಾ ನೋಡುವುದನ್ನು ಅರ್ಧಕ್ಕೇ ನಿಲ್ಲಿಸಿ ಹಿಂದಿರುಗಬೇಕಾಗುತ್ತದೆ ಎಂದು ಸಚಿವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಒಂದು ವೇಳೆ ಸಿನಿಮಾ ನೋಡುವಾಗ ಮಕ್ಕಳು ಅತ್ತರೆ ಇನ್ನುಮುಂದೆ ಥಿಯೇಟರ್ನಿಂದ ಎದ್ದು ಹೋಗಬೇಕಾಗಿಲ್ಲ. ಕೆಎಸ್ಎಫ್ಡಿಸಿ ತಿರುವನಂತಪುರಂ ಕೈರಲಿ ಶ್ರೀ ಥಿಯೇಟರ್ ಕಾಂಪ್ಲೆಕ್ಸ್ನಲ್ಲಿ ಈಗ ಕ್ರೈ ರೂಂ ಮಾಡಲಾಗಿದೆ. ಸರ್ಕಾರಿ ಚಿತ್ರಮಂದಿರಗಳನ್ನು ಮಹಿಳೆ ಹಾಗೂ ಮಕ್ಕಳ ಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಭಾಗವಾಗಿ ಈ ಕೆಲಸ ಮಾಡಲಾಗಿದೆ ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಮಂದಿರಗಳಲ್ಲಿ ಕ್ರೈಯಿಂಗ್ ರೂಂ ಅಳವಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಕ್ರೈಯಿಂಗ್ ರೂಂನಲ್ಲಿ ಒಂದು ತೊಟ್ಟಿಲು ಹಾಗೂ ಡೈಪರ್ ಚೇಂಜಿಂಗ್ ವ್ಯವಸ್ಥೆಯೂ ಇದೆ. ಕ್ರೈಯಿಂಗ್ ರೂಂನಲ್ಲಿ ಮಗುವಿನ ಜೊತೆ ಕುಳಿತು ಪೋಷಕರು ಸಿನಿಮಾ ನೋಡಲು ಯಾವುದೇ ಅಡ್ಡಿ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಅಂತೂ ಕೇರಳ ಸರ್ಕಾರದ ಈ ಹೊಸ ಐಡಿಯಾ ಮಕ್ಕಳೊಂದಿಗೆ ಥಿಯೇಟರ್ಗೆ ಬರುವ ಪೋಷಕರಿಗೆ ಸಹಾಯ ಮಾಡುವುದರಲ್ಲಿ ನೋ ಡೌಟ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ