ಸಹಾಯಕ್ಕಾಗಿ ಟ್ವೀಟ್​ ಮಾಡಿದ ಕೇರಳದ ಅಭಿಮಾನಿ: ಒಂದು ಕೋಟಿ ನೆರವು ನೀಡಿದ ನಟ ಸುಶಾಂತ್​!

news18
Updated:August 22, 2018, 4:04 PM IST
ಸಹಾಯಕ್ಕಾಗಿ ಟ್ವೀಟ್​ ಮಾಡಿದ ಕೇರಳದ ಅಭಿಮಾನಿ: ಒಂದು ಕೋಟಿ ನೆರವು ನೀಡಿದ ನಟ ಸುಶಾಂತ್​!
news18
Updated: August 22, 2018, 4:04 PM IST
ನ್ಯೂಸ್​ 18 ಕನ್ನಡ 

ಪ್ರಕೃತಿಯ ವಿಕೋಪದಿಂದ ತತ್ತರಿಸಿರುವ ಕೇರಳಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೆ ಸಿನಿ ಕಲಾವಿದರೂ ಸಹ ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ನಟ ವಿಜಯ್ 70 ಲಕ್ಷ ನೆರವು ನೀಡಿದ್ದರು. ಈಗ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪೂತ್​ ಸಹ ಕೇರಳದ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ​

ಹೌದು ಕೇರಳ ಮೂಲದ ಅಭಿಮಾನಿಯೊಬ್ಬರು ಸಹಾಯಕ್ಕಾಗಿ ಸುಶಾಂತ್ ಅವರಿಗೆ ಟ್ವೀಟ್​ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಸುಶಾಂತ್​ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದು ಕೋಟಿ ಹಣ ನೀಡಿದ್ದಾರೆ.ಕೇರಳ ಮೂಲದ ಶುಭಂರಂಜನ್​ ಎಂಬುವರು ಸುಶಾಂತ್​ ಅವರಿಗೆ ಟ್ವೀಟ್​ ಮಾಡಿದ್ದು ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ನನ್ನ ಬಳಿ ಹಣವಿಲ್ಲ. ಆದರೆ ಏನನ್ನಾದರೂ ಕೊಡಲು ಬಯಸುತ್ತೇನೆ. ಆದರೆ ಯಾವ ರೂಪದಲ್ಲಿ ನಾನು ಅವರಿಗೆ ಸಹಾಯ ಹಸ್ತ ಚಾಚಬಹುದು' ಎಂದು ಬರೆದಿದ್ದರು.

ಅದಕ್ಕೆ ಪ್ರತ್ರಿಕ್ರಿಯಿಸಿರುವ ಸುಶಾಂತ್​ 'ನಿಮ್ಮ ಹೆಸರಿಲ್ಲಿ ಒಂದು ಒಂದು ಕೋಟಿ ಹಣ ನೀಡುತ್ತೇನೆ. ಆದರೆ ಅದು ಸಂಪೂರ್ಣವಾಗಿ ಅವರಿಗೆ ತಲುಪುವಂತೆ ನೋಡಿಕೊಳ್ಳಿ' ಎಂದು ಬರೆದು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಒಂದು ಕೋಟಿ ಹಣ ಕಳುಹಿಸಿ, ಅದರ ಪ್ರತಿಯನ್ನು ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ.


First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ