ಮಲಯಾಳಂ ಚಿತ್ರರಂಗದ (Mollywood) ಯುವ ಚಿತ್ರ ನಿರ್ದೇಶಕ (Young Director) ತನ್ನ ಮೊದಲ ಸಿನಿಮಾ ರಿಲೀಸ್ ನೋಡುವ ಮೊದಲೇ ಮೃತಪಟ್ಟಿರುವ ಘಟನೆ ಕೇರಳದ (Kerala) ಕೊಚ್ಚಿಯಲ್ಲಿ ನಡೆದಿದೆ. ನಿರ್ದೇಶಕ ಜೋಸೆಫ್ ಮನು ಜೇಮ್ಸ್ (Joseph Manu James) ಯುವ ಚಿತ್ರ ನಿರ್ದೇಶಕನಾಗಿ ತನ್ನ ಮೊದಲ ಸಿನಿಮಾ ರಿಲೀಸ್ ಮಾಡುವ ಉತ್ಸಾಹದಲ್ಲಿದ್ದರು. ಜೋಸೆಫ್ ಮನು ಫೆಬ್ರವರಿ 24ರಂದು ಶುಕ್ರವಾರ ಎರ್ನಾಕುಳಂ ಜಿಲ್ಲೆಯ ಆಲುವಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ನಿರ್ದೇಶಕ ಮನು ಅವರಿಗೆ ನ್ಯುಮೋನಿಯಾ ಇತ್ತು ಎಂದು ಹೇಳಲಾಗಿದೆ.
ಮನು ಅವರ ಮೊದಲ ನಿರ್ದೇಶನದ ಸಿನಿಮಾ ನಾನ್ಸಿ ರಾಣಿಯಲ್ಲಿ ನಟಿ ಅಹಾನಾ ಕೃಷ್ಣ ಹಾಗೂ ಅರ್ಜುನ್ ಅಶೋಕನ್ ನಟಿಸಿದ್ದರು. ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುವುದರಲ್ಲಿತ್ತು. ಯುವ ನಿರ್ದೇಶಕನ ಸಾವಿನ ಕುರಿತು ಪೋಸ್ಟ್ ಮಾಡಿದ ನಟಿ ಅಹಾನಾ ಕೃಷ್ಣ ಅವರು, ರೆಸ್ಟ್ ಇನ್ ಪೀಸ್ ಮನು, ಹೀಗಾಗಬಾರದಿತ್ತು ಎಂದು ಬರೆದಿದ್ದಾರೆ. ಮನು ಅವರ ಸಿನಿಮಾದಲ್ಲಿ ಅಹಾನಾ ಅವರು ಟೈಟಲ್ ರೋಲ್ ಮಾಡಿದ್ದಾರೆ.
ನಾನ್ಸಿ ರಾಣಿ ಮೊದಲ ಸಿನಿಮಾ
ಈ ಸಿನಿಮಾದಲ್ಲಿ ನಾನ್ಸಿ ರಾಣಿಯಾಗಿ ಕಾಣಿಸಿಕೊಂಡ ನಟಿ ಮಮ್ಮುಟ್ಟಿ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ದೊಡ್ಡ ಸ್ಟಾರ್ ಆಗುವ ಕನಸು ಕಾಣುತ್ತಿರುತ್ತಾರೆ. ಆದರೆ ಅವಕಾಶ ಬಂದಾಗ ಅದು ಟ್ರಾಜಿಡಿಯಾಗಿ ಬದಲಾಗುತ್ತದೆ ಎನ್ನುವುದನ್ನು ಇದರಲ್ಲಿ ವಿವರಿಸಲಾಗಿದೆ.
ಹಿರಿಯ ನಟರಾದ ಶ್ರೀನಿವಾಸನ್, ಲಾಲ್, ಲೀನಾ, ಇಂದ್ರನ್ಸ್ ಮತ್ತು ಅಜು ವರ್ಗೀಸ್ ಕೂಡ ಚಿತ್ರದ ಭಾಗವಾಗಿದ್ದಾರೆ. ಅಜು ಅವರು ಮನು ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ ತುಂಬಾ ಬೇಗನೆ ಹೋದ ಎಂದು ಬರೆದಿದ್ದಾರೆ.
ಇದನ್ನೂ ಓದಿ: Kasthuri Shankar-Anasuya: ಪುಷ್ಪ ಖ್ಯಾತಿಯ ಅನಸೂಯ ಆಂಟಿ ಎಂದರಾ ಹಿರಿಯ ನಟಿ?
2004 ರಲ್ಲಿ ಸಾಬು ಜೇಮ್ಸ್ ನಿರ್ದೇಶನದ ಐ ಆಮ್ ಕ್ಯೂರಿಯಸ್ ಚಿತ್ರಕ್ಕಾಗಿ ಮನು ಅವರು ಬಾಲ್ಯ ನಟರಾಗಿ ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು. ವರ್ಷಗಳ ನಂತರ ಅವರು ಮಲಯಾಳಂ, ಕನ್ನಡ ಮತ್ತು ಇತರ ಚಲನಚಿತ್ರೋದ್ಯಮಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅವರ ಅಂತಿಮ ವಿಧಿಗಳನ್ನು ಫೆಬ್ರವರಿ 26, ಭಾನುವಾರ ಕೊಟ್ಟಾಯಂನ ಕುರವಿಲಂಗಾಡ್‌ನಲ್ಲಿರುವ ಚರ್ಚ್‌ನಲ್ಲಿ ನಡೆಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ