• Home
  • »
  • News
  • »
  • entertainment
  • »
  • Casting Couch: ಟಾಲಿವುಡ್​ ಮಹಾನಟಿಗೂ ಕಾಸ್ಟಿಂಗ್​ ಕೌಚ್ ಕಾಟ? ಮೊದಲ ಬಾರಿಗೆ ತುಟ್ಟಿ ಬಿಚ್ಚಿದ ಕೀರ್ತಿ ಸುರೇಶ್​!

Casting Couch: ಟಾಲಿವುಡ್​ ಮಹಾನಟಿಗೂ ಕಾಸ್ಟಿಂಗ್​ ಕೌಚ್ ಕಾಟ? ಮೊದಲ ಬಾರಿಗೆ ತುಟ್ಟಿ ಬಿಚ್ಚಿದ ಕೀರ್ತಿ ಸುರೇಶ್​!

ಕೀರ್ತಿ ಸುರೇಶ್​

ಕೀರ್ತಿ ಸುರೇಶ್​

'ಮಹಾನಟಿ' ಚಿತ್ರದ ನಂತರ ವೃತ್ತಿಜೀವನ ಮತ್ತು ಅವರು ಮುಂಚೆ ಚಿತ್ರರಂಗದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಇತ್ತೀಚೆಗೆ ಸಂದರ್ಶನ ನೀಡಿದ ಕೀರ್ತಿ ಸುರೇಶ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದರು

  • Share this:

ಚಲನಚಿತ್ರೋದ್ಯಮ (Film Industry) ದ ಅತ್ಯಂತ ವಿವಾದಾತ್ಮಕ (Controversy) ಅಂಶಗಳಲ್ಲಿ ಒಂದು ಎಂದರೆ ಅದು ಕಾಸ್ಟಿಂಗ್ ಕೌಚ್ (Casting Couch) ಅಂತ ಹೇಳಬಹುದು. ಟಾಲಿವುಡ್ (Tollywood) ನ ಹಲವಾರು ನಟಿಯರು ಉದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ನೊಂದಿಗೆ ತಮ್ಮ ಅನುಭವದ ಬಗ್ಗೆ ಹಿಂದೊಮ್ಮೆ ತೆರೆದಿಟ್ಟಿದ್ದರು. ಈಗ ಮತ್ತೊಬ್ಬ ಜನಪ್ರಿಯ ನಟಿ ಈ ವಿವಾದಾತ್ಮಕ ಅಂಶದ ಬಗ್ಗೆ ಮೊದಲ ಬಾರಿಗೆ ಮಾತಾಡಿದ್ದಾರೆ ನೋಡಿ. ತೆಲುಗು (Tollywood) ‘ಮಹಾನಟಿ’ ಚಿತ್ರದ ಮೂಲಕ ಉತ್ತಮ ಹೆಸರು ಗಳಿಸಿದ ನಟಿ ಕೀರ್ತಿ ಸುರೇಶ್ (Keerthy Suresh), ಮೊದಲ ಬಾರಿಗೆ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತುಟಿ ಬಿಚ್ಚಿದ್ದಾರೆ ನೋಡಿ. ಪ್ರಸ್ತುತ, ಕೀರ್ತಿ ಸುರೇಶ್ ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಅವರೊಂದಿಗೆ 'ದಸರಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ.


ಮಹಾನಟಿಗೂ ಕಾಸ್ಟಿಂಗ್ ಕೌಚ್​?


ಈ ಚಿತ್ರವು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇವರ ವೃತ್ತಿಜೀವನದ ಆರಂಭದಿಂದಲೂ ಗ್ಲಾಮರ್ ಪಾತ್ರಗಳಿಂದ ಸ್ವಲ್ಪ ದೂರವೇ ಉಳಿದಿದ್ದ ಕೀರ್ತಿ ಸುರೇಶ್ ಕಳೆದ ವರ್ಷ ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟಾ' ಚಿತ್ರದಲ್ಲಿ ತಮ್ಮ ಸೌಂದರ್ಯವನ್ನು ತೋರಿಸಿದರು.


ಈ ಚಿತ್ರದ ಯಶಸ್ಸಿನೊಂದಿಗೆ, ಈ ಸುಂದರಿಯ ವೃತ್ತಿಜೀವನವು ಮತ್ತೆ ಪ್ರಾರಂಭವಾಗಿದೆ ಎಂದು ತೋರುತ್ತದೆ. ಕೀರ್ತಿ ಸುರೇಶ್ ಅವರಿಗೆ ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿಯೂ ಹಲವಾರು ಚಿತ್ರಗಳ ಆಫರ್ ಗಳು ಬರುತ್ತಿವೆ.


ಕಾಸ್ಟಿಂಗ್ ಕೌಚ್ ಬಗ್ಗೆ ಏನ್ ಹೇಳಿದ್ರು ನಟಿ ಕೀರ್ತಿ?


'ಮಹಾನಟಿ' ಚಿತ್ರದ ನಂತರ ವೃತ್ತಿಜೀವನ ಮತ್ತು ಅವರು ಮುಂಚೆ ಚಿತ್ರರಂಗದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಇತ್ತೀಚೆಗೆ ಸಂದರ್ಶನ ನೀಡಿದ ಕೀರ್ತಿ ಸುರೇಶ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದರು. 2018 ರಲ್ಲಿ ಬಿಡುಗಡೆಯಾದ ಮಹಾನಟಿ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರ ಅಭಿನಯವು ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಅದರ ನಂತರ ಅವರ ವೃತ್ತಿಜೀವನವು ಕ್ರಮೇಣವಾಗಿ ಹಳಿ ತಪ್ಪಿತು ಎಂದು ಹೇಳಬಹುದು.


ಈಗ ಮಹಾನಟಿ ಕೀರ್ತಿ ಸುರೇಶ್ ಅವರು ಈ ವಿವಾದಾತ್ಮಕ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕೀರ್ತಿ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. "ನನ್ನ ಅನೇಕ ಸಹ-ನಟರು ಕಾಸ್ಟಿಂಗ್ ಕೌಚ್ ನ ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಬಾತ್​ರೂಂ ಫೋಟೋಸ್ ಹಂಚಿಕೊಂಡ ಹೆಡ್​ಬುಷ್ ಸುಂದರಿ


ಆದರೆ ನಾನು ಇಲ್ಲಿಯವರೆಗೆ ಅದನ್ನು ಅನುಭವಿಸಿಲ್ಲ. ನನ್ನ ವೃತ್ತಿಜೀವನದುದ್ದಕ್ಕೂ ನಾನು ತುಂಬಾ ಸಭ್ಯ ಮತ್ತು ನೇರವಾಗಿದ್ದೇನೆ ಮತ್ತು ಬಹುಶಃ ಅದಕ್ಕಾಗಿಯೇ ಯಾರೂ ಅಂತಹ ಉದ್ದೇಶಗಳೊಂದಿಗೆ ನನ್ನನ್ನು ಸಂಪರ್ಕಿಸಲಿಲ್ಲ" ಎಂದು ಅವರು ಹೇಳಿದರು.


ನಾನು ತುಂಬಾ ಸ್ಟ್ರಾಂಗ್​ ಎಂದಿದ್ಯಾಕಿ ಕೀರ್ತಿ?


"ಕೆಲವು ಚಲನಚಿತ್ರ ನಿರ್ಮಾಪಕರು ತಮ್ಮ ಚಿತ್ರದಲ್ಲಿ ಒಂದು ಪಾತ್ರವನ್ನು ನೀಡಲು ನನಗೆ ಇಂತದಕ್ಕೆಲ್ಲಾ ಒಪ್ಪಿಕೊಳ್ಳಲು ಕೇಳಿಕೊಂಡರೆ, ಏನೇ ಆಗಲಿ, ಆ ಪ್ರಸ್ತಾಪವನ್ನು ನಾನು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಅಂತಹ ಪ್ರಸ್ತಾಪಗಳನ್ನು ಸ್ವೀಕರಿಸುವುದಕ್ಕಿಂತ ನಾನು ಚಲನಚಿತ್ರೋದ್ಯಮವನ್ನು ತೊರೆದು ಒಂದು ಕಂಪನಿಯಲ್ಲಿ ಒಂದು ಕೆಲಸವನ್ನು ಮಾಡಲು ಬಯಸುತ್ತೇನೆ. ನಾನು ಆ ರೀತಿಯವಳಲ್ಲ" ಎಂದು ನಟಿ ದಿಟ್ಟವಾಗಿ ಹೇಳಿದ್ದಾರೆ.


ನಟಿ ಕೀರ್ತಿ ಸುರೇಶ್ ನ ಇದುವರೆಗಿನ ಸಿನಿ ಪಯಣ ಹೀಗಿದೆ..


2016 ರಲ್ಲಿ ರಾಮ್ ಪೋತಿನೇನಿ ಅಭಿನಯದ 'ನೇನು ಶೈಲಜಾ' ಚಿತ್ರದ ಮೂಲಕ ತೆಲುಗಿನಲ್ಲಿ ಹಿಟ್ ಪಡೆದರು. ಶೀಘ್ರದಲ್ಲೇ ಬಂದ ನಾನಿ ಅವರ 'ನೇನು ಲೋಕಲ್' ಚಿತ್ರದ ಮೂಲಕ ಸ್ಟಾರ್ಡಮ್ ಗಳಿಸಿದ ಈ ಸುಂದರಿ, 2018 ರಲ್ಲಿ ಮಹಾನಟಿ ಚಿತ್ರದಲ್ಲಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡರು.


ಇದನ್ನೂ ಓದಿ: ಮೆಟ್ರೋದಲ್ಲಿ ರಕ್ಕಮ್ಮ ಸಖತ್ ಪೋಸ್! ಜಾಕ್ಲಿನ್ ಬ್ಯೂಟಿ ಲುಕ್


ನಂತರ ನಟಿ ನಟಿಸಿದ ಚಿತ್ರಗಳ ಪೈಕಿ ಮಿಸ್ ಇಂಡಿಯಾ (2020), ಪೆಂಗ್ವಿನ್ (2020), ರಂಗ್ ದೇ (2021), ಗುಡ್ ಲಕ್ ಸಖಿ (2022) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆದವು. ಆದಾಗ್ಯೂ.. ಅವರು 'ಸರ್ಕಾರು ವಾರಿ ಪಾಟಾ' ಚಿತ್ರದ ಮೂಲಕ ಮತ್ತೆ ಹಿಟ್ ಚಿತ್ರಗಳನ್ನು ನೀಡುವ ಟ್ರ್ಯಾಕ್ ಗೆ ಮರಳಿದರು ಅಂತಾನೆ ಹೇಳಬಹುದು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು