• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Keerthy Suresh ಮೇಲೆ ಹಲ್ಲೆ-ಫೋಟೋಗಳು ವೈರಲ್, ನಟಿಯ ಮುಖ ಕಂಡು ಬೆಚ್ಚಿ ಬಿದ್ದ ಫ್ಯಾನ್ಸ್​! ಅಸಲಿಯತ್ತೇನು?

Keerthy Suresh ಮೇಲೆ ಹಲ್ಲೆ-ಫೋಟೋಗಳು ವೈರಲ್, ನಟಿಯ ಮುಖ ಕಂಡು ಬೆಚ್ಚಿ ಬಿದ್ದ ಫ್ಯಾನ್ಸ್​! ಅಸಲಿಯತ್ತೇನು?

ಕೀರ್ತಿ ಸುರೇಶ್​

ಕೀರ್ತಿ ಸುರೇಶ್​

ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ವೈರಲ್ ಆದ ಕೀರ್ತಿ ಸುರೇಶ್‌ ಫೋಟೊಗಳನ್ನು ನೋಡಿ ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ.

  • Share this:

ಕೀರ್ತಿ ಸುರೇಶ್ (Keerthi Suresh)​ ಟಾಲಿವುಡ್ (Tollywood) ಹಾಗೂ ಕಾಲಿವುಡ್(Kollywood)ನಿಂದ ಬಾಲಿವುಡ್ (Bollywood)ಗೆ ಹಾರಿದ ನಟಿ. ಮಹಾನಟಿ ಸಿನಿಮಾದ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಸಿನಿ ಜಗ್ಗತ್ತಿಗೆ ಸಾರಿದ ಕಲಾವಿದೆ. ಈ ಸಿನಿಮಾದಿಂದಲೇ ಕೀರ್ತಿ ಅವರ ಸಿನಿ ಬದುಕಿಗೆ ತಿರುವು ಸಿಕ್ಕಿದ್ದು. ಪ್ರತಿಭೆ ಇದ್ದರೂ ಕಿರ್ತೀ ಸುರೇಶ್ ಅವರಿಗೆ ಅವಕಾಶಗಳ ಕೊರತೆಯಿಂದಾಗಿ ಸಿನಿಮಾಗಳೇ ಸಿಗುತ್ತಿರಲಿಲ್ಲ. ಆಗೊಂದು ಇಗೊಂದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಆಗಲೇ ಕೀರ್ತಿಗೆ ಸಿಕ್ಕಿದ್ದು ಮಹಾನಟಿ (Mahanati) ಸಿನಿಮಾ. ಈ ಚಿತ್ರದಿಂದ ಕೀರ್ತಿ ಭವಿಷ್ಯವೇ ಬದಲಾಗಿ ಹೋಯಿತು.ಕೀರ್ತಿ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಒಂದರಿಂದ ಒಂದೂವರೆ ಕೋಟಿಯಂತೆ. ಕೀರ್ತಿ ಸುರೇಶ್ ಕೇವಲ ಕಮರ್ಷಿಯಲ್ ಸಿನಿಮಾಗಳ ನಟಿ ಅಷ್ಟೇ ಅಲ್ಲ. ವಿಶಿಷ್ಟ ಕಥೆಯುಳ್ಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಾರೆ.


ಕೀರ್ತಿ ಗಾಯವಾಗಿರುವ ಫೋಟೋಗಳು ವೈರಲ್​!


ಇದೀಗ ಅವರ ಮುಖದ ಮೇಲೆ ಗಾಯಗಳಾಗಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದನ್ನು ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಅಸಲಿಗೆ ಇದು ರೀಲ್​ ಅಥವಾ ರಿಯಲ್​ ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ವೈರಲ್ ಆದ ಕೀರ್ತಿ ಸುರೇಶ್‌ ಫೋಟೊಗಳನ್ನು ನೋಡಿ ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ. ಮಹೇಶ್ ಬಾಬು ಜೊತೆ ನಟಿಸಿದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆನೇ ಕೀರ್ತಿ ಸುರೇಶ್ ಮೇಲೆ ಹಲ್ಲೆ ಮಾಡಿ, ಮುಖಕ್ಕೆ ಯಾರೋ ಹೊಡೆದ ಫೋಟೊಗಳು ವೈರಲ್ ಆಗುತ್ತಿವೆ.


ಇದು ರಿಯಲ್​ ಅಲ್ಲ ರೀಲ್​ ಫೋಟೋ!


ಬಹುಭಾಷಾ ನಟಿ ಕೀರ್ತಿ ಸುರೇಶ್ ಮೇಲೆ ಹಲ್ಲೆ ಆದಂತೆ ಕಾಣುವ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್​ ಆಗಿದ್ದರು. ಆದರೆ, ಇದು ರಿಯಲ್​ ಫೋಟೋಗಳಲ್ಲ, ರೀಲ್​ ಫೋಟೋಗಳು. ಹೊಸ ಸಿನಿಮಾ 'ಸಾನಿ ಕಾಯಿಧಮ್' (Saani Kaayidham) ಸಿನಿಮಾದ ಮೇಕಿಂಗ್ ವೇಳೆ ತೆಗೆದ ಫೋಟೊಗಳು. ಇದೇ ಫೋಟೊ ನೋಡಿ ಕೀರ್ತಿ ಫ್ಯಾನ್ಸ್ ಗಾಬರಿಗೊಂಡಿದ್ದರು. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿದೆ.


ವೈರಲ್​ ಆದ ಫೋಟೋ


ಇದನ್ನೂ ಓದಿ: ರಣವೀರ್​ ಸಿನಿಮಾಗೆ ಬಿಡುಗಡೆ​ಗೂ ಮುನ್ನವೇ ಸಂಕಷ್ಟ! ರಿಲೀಸ್​ ಆಗುತ್ತಾ 'ಜಯೇಶ್‌ಭಾಯ್ ಜೋರ್ದಾರ್'?


ಸಖತ್​ ಸೌಂಡ್​ ಮಾಡುತ್ತಿದೆ ಸಾನಿ ಕಾಯಿಧಮ್​!


ತಮಿಳು ಸಿನಿಮಾ 'ಸಾನಿ ಕಾಯಿಧಮ್' ಈಗಾಗಲೇ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಕೀರ್ತಿ ಸುರೇಶ್ ಹಿಂದೆಂದೂ ಇಂತಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಪೊಲೀಸ್ ಕಾನ್‌ಸ್ಟೇಬಲ್ ಪೊನ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಈಕೆಯ ಮೇಲೆ ಗ್ಯಾಂಗ್ ರೇಪ್ ಆಗುತ್ತೆ. ಅಲ್ಲಿಂದ ಸಿನಿಮಾ ಪೊನ್ನಿ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ? ಎಂಬುದೇ ಈ ಸಿನಿಮಾ ಜೀವಾಳ.ಇಂತಹ ಸಂದರ್ಭವೊಂದರಲ್ಲಿ ತೆಗೆದ ಫೋಟೊಗಳೇ ಈಗ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


ಇದನ್ನೂ ಓದಿ: ಹೊಸ ಮನೆ ಖರೀದಿಸಿದ ಅಗ್ನಿಸಾಕ್ಷಿ ನಟಿ, ವೈಷ್ಣವಿ ಗೌಡ ಮನೆ ಪ್ರವೇಶಕ್ಕೆ ಸಾಕ್ಷಿಯಾದ ದೊಡ್ಮನೆ ಮಂದಿ


ಅಮೆಜಾನ್ ಪ್ರೈಂನಲ್ಲಿ 'ಸಾನಿ ಕಾಯಿಧಮ್' ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಬಳಿಕ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಕೀರ್ತಿ ಸುರೇಶ್​ ಅವರ ಅಭಿನಯಕ್ಕೆ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ. ಸಿನಿಮಾ ಸಖತ್​ ರಿಯಾಲೆಸ್ಟಿಕ್​ ಆಗಿ ಮೂಡಿಬಂದಿದೆ ಎಂದು ಸಿನಿಮಾ ನೋಡಿದವರು ಮಾತನಾಡಿಕೊಳ್ಳುತ್ತಿದ್ದಾರೆ.

Published by:Vasudeva M
First published: