ತೂಕ ಹೆಚ್ಚಿಸಿಕೊಳ್ಳುವಂತೆ ನಟಿ ಕೀರ್ತಿ ಸುರೇಶ್​ಗೆ ಅಭಿಮಾನಿಗಳಿಂದ ಸಲಹೆ ..!

ತೂಕ ಇಳಿಸಿಕೊಂಡ ಕೀರ್ತಿ ಸುರೇಶ್​

ತೂಕ ಇಳಿಸಿಕೊಂಡ ಕೀರ್ತಿ ಸುರೇಶ್​

ಸಿನಿ ತಾರೆಯರು ಸಾಮಾನ್ಯವಾಗಿ ಸಿನಿಮಾಗಳಿಗಾಗಿ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ಸಾಮಾನ್ಯ. ಈಗ ಈ ಪಟ್ಟಿಗೆ ನಟಿ ಕೀರ್ತಿ ಸುರೇಶ್​ ಸಹ ಸೇರ್ಪಡೆಯಾಗಿದ್ದು, ಅವರು ಸಪೂರವಾಗಿರುವ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  • News18
  • 4-MIN READ
  • Last Updated :
  • Share this:

ತೆಲುಗಿನ 'ಮಹಾನಟಿ' ಚಿತ್ರದಲ್ಲಿನ ಅಭಿನಯದಿಂದ ಮನೆಮಾತಾದ ನಟಿ ಕೀರ್ತಿ ಸುರೇಶ್. ​ತಮಿಳು ಹಾಗೂ ತೆಲುಗಿನಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ಅಭಿನಯಿಸಿರುವ ಕೀರ್ತಿ ಈಗ ಬಾಲಿವುಡ್​ನಲ್ಲಿ ಖಾತೆ ತೆರೆದಿದರುವ ವಿಷಯ ಸಹ ಗೊತ್ತೇ ಇದೆ.

ಕೀರ್ತಿ ತಮ್ಮ ಬಹು ನಿರೀಕ್ಷಿತ ಸಿನಿಮಾಗಾಗಿ ತೂಕ ಇಳಿಸಿಕೊಳ್ಳುತ್ತಿರುವ ವಿಷಯ ಕಳೆದ ಕೆಲ ತಿಂಗಳಿನಿಂದ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಅವರು ಸಪೂರವಾಗಿ ಕಾಣುತ್ತಿರುವ ಹಾಗೂ ಜಿಮ್​ನಲ್ಲಿ ಬೆವರಿಳಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Keerthi Suresh Instagram
ನಟಿ ಕೀರ್ತಿ ಸುರೇಶ್​


ಆಗಾಗ ಕೀರ್ತಿ ಸಹ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲೂ ಆ ಚಿತ್ರಗಳನ್ನು ಪೋಸ್ಟ್​ ಮಾಡುತ್ತ ಇರುತ್ತಾರೆ. 
View this post on Instagram
 

Trying to teach him the art of ‘posing’ , but I just don’t think he gets it 🤷‍♀️ #nykediaries


A post shared by Keerthy Suresh (@keerthysureshofficial) on

ಈಗಲೂ ಸಹ ಕೀರ್ತಿ ತಮ್ಮ ಹೊಸ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಬಾತ್​ರೂಮಿನ ಉಡುಗೆಯಲ್ಲಿರುವ ಕೀರ್ತಿ ಹೋಟೆಲ್​ ಬಾಲ್ಕನಿಯಲ್ಲಿ ನಿಂತಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 
View this post on Instagram
 

#sunkissedsaturday 🌞 #Malaga


A post shared by Keerthy Suresh (@keerthysureshofficial) on

ಕೆಲವರು ಕೀರ್ತಿ ಸುರೇಶ್​ ಅವರ ನ್ಯೂ ಲುಕ್​ಗೆ ಫಿದಾ ಆದರೆ, ಮತ್ತೆ ಕೆಲವರು ಅವರಿಗೆ ತೂಕ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಚಬ್ಬಿಯಾಗಿರುವ ಕೀತಿಯನ್ನು ನೋಡೋಕೆ ಬಯಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Rashmika Mandanna: ದಿನ ಕಳೆದಂತೆ ಸಿಕ್ಕಾಪಟ್ಟೆ ಹಾಟ್​ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ: ವೈರಲ್​ ಆಗುತ್ತಿವೆ ಕಿರಿಕ್​ ಬೆಡಗಿಯ ಬೋಲ್ಡ್​​​ ಚಿತ್ರಗಳು..!

ಸದ್ಯ ಕೀರ್ತಿ ತಮ್ಮ ಬಹು ನಿರೀಕ್ಷಿತ ಸಿನಿಮಾದ ಚಿತ್ರೀಕರಣದಲ್ಲಿದ್ದು, ಅದರ ಚಿತ್ರೀಕರಣ ಮ್ಯಾಡ್ರಿಡ್​ನಲ್ಲಿ ನಡೆಯುತ್ತಿದೆ.

Photos: ಮದುವೆಯಾಗದೆ ಗರ್ಭಿಣಿಯಾದ ಸ್ಯಾಂಡಲ್​ವುಡ್​​ ನಟಿಯ ಬೇಬಿ ಬಂಪ್​ ಫೋಟೋಸ್​

First published: