Mahesh Babu: 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಪ್ರಿನ್ಸ್​ ಮಹೇಶ್ ಬಾಬುಗೆ ನಾಯಕಿ ಫಿಕ್ಸ್​..!

Sarkaru Vaari Pata: ಈ ಸಿನಿಮಾ ಪ್ರಕಟಿಸಿದಾಗಿನಿಂದ ಮಹೇಶ್​ ಬಾಬು ಜೊತೆ ಈ ಸಲ ಯಾರು ನಾಯಕಿಯಾಗಿ ನಟಿಸಲಿದ್ದಾರೆ ಅನ್ನೋದು ಚರ್ಚೆಯಾಗುತ್ತಿತ್ತು. ಆದರೆ ಆಗ ನಮ್ರತಾ ಭರತ್​ ಅನೆ ನೇನು ಸಿನಿಮಾ ಖ್ಯಾತಿಯ ಕಿಯಾರಾ ಅವರನ್ನೇ ಈ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದರು. 

'ಸರ್ಕಾರು ವಾರಿ ಪಾಟ' ಸಿನಿಮಾದ ಪೋಸ್ಟರ್​

'ಸರ್ಕಾರು ವಾರಿ ಪಾಟ' ಸಿನಿಮಾದ ಪೋಸ್ಟರ್​

  • Share this:
ಮಹೇಶ್​ ಬಾಬು ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ. ತಮ್ಮ ತಂದೆಯ ಹುಟ್ಟುಹಬ್ಬದಂದು ಈ ಸಿನಿಮಾದ ಟೈಟಲ್​ ಹಾಗೂ ಪೋಸ್ಟರ್​ ಬಿಡುಗಡೆ ಮಾಡಿದ್ದರು ಮಹೇಶ್ ಬಾಬು.

'ಸರಿಲೇರು ನೀಕೆವ್ವರು' ಸಿನಿಮಾದ ನಂತರ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಿರುವ ಚಿತ್ರ 'ಸರ್ಕಾರು ವಾರಿ ಪಾಟ'. ಪರಶುರಾಮ್​ ನಿರ್ದೇಶನದ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆಯೇ ವೈರಲ್​ ಆಗಿತ್ತು.

Keerthy Suresh is going to share a screen with Prince Mahesh Babu in Sarkaru Vaari Pata movie
ಮಹೇಶ್​ ಬಾಬು ಹಾಗೂ ಕಿಚ್ಚ ಸುದೀಪ್​


ಈ ಸಿನಿಮಾ ಪ್ರಕಟಿಸಿದಾಗಿನಿಂದ ಮಹೇಶ್​ ಬಾಬು ಜೊತೆ ಈ ಸಲ ಯಾರು ನಾಯಕಿಯಾಗಿ ನಟಿಸಲಿದ್ದಾರೆ ಅನ್ನೋದು ಚರ್ಚೆಯಾಗುತ್ತಿತ್ತು. ಆದರೆ ಆಗ ನಮ್ರತಾ 'ಭರತ್​ ಅನೆ ನೇನು' ಸಿನಿಮಾ ಖ್ಯಾತಿಯ ಕಿಯಾರಾ ಅವರನ್ನೇ ಈ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದರು.

ಇದನ್ನೂ ಓದಿ: ಸುಶಾಂತ್​ರಂತೆಯೇ ಆಗಿತ್ತಾ ಟಾಲಿವುಡ್​ ನಟ ಉದಯ್​ ಕಿರಣ್​ ಪರಿಸ್ಥಿತಿ..?

ಆದರೆ ನಂತರ ಕಿಯಾರಾ ಬಾಲಿವುಡ್​ನಲ್ಲಿ ಈಗಾಗಲೇ ಸಾಕಷ್ಟು ಪ್ರಾಜೆಕ್ಟ್​ಗಳಿಗೆ ಸಹಿ ಮಾಡಿರುವ ಕಾರಣದಿಂದ ಅವರಿಗೆ ಡೇಟ್​ ಸಮಸ್ಯೆಯಾಗುತ್ತಿದೆ ಎನ್ನಲಾಗಿತ್ತು. ಈಗ ಅದೇ ಮಾತು ಸತ್ಯವಾಗಿದೆ. ಪ್ರಿನ್ಸ್​ ಜೊತೆ ಈ ಸಿನಿಮಾದಲ್ಲಿ ತೆಲುಗಿನ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್​ ಅಭಿನಯಿಸಲಿದ್ದಾರಂತೆ.

Keerthy Suresh is going to share a screen with Prince Mahesh Babu in Sarkaru Vaari Pata movie
ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್


ಹೀಗೊಂದು ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈಗಾಗಲೇ ಮಹೇಶ್ ಬಾಬು, ಕೀರ್ತಿ ಸುರೇಶ್ ಜೊತೆ ಮಾತುಕತೆ ನಡೆಸಿದ್ದಾರಂತೆ. ಕೀರ್ತಿ ಸಹ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಚಿತ್ರದಲ್ಲಿ ವಿಲನ್​ ಪಾತ್ರಕ್ಕೆ ಮೊದಲು ಕಿಚ್ಚನ ಹೆಸರು ಕೇಳಿ ಬಂದಿತ್ತಾದರೂ, ಈಗ ಉಪೇಂದ್ರ ಅವರ ಹೆಸರು ಓಡಾಡುತ್ತಿದೆ.

Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್​​ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!ಇದನ್ನೂ ಓದಿ: ಡ್ಯಾನ್ಸ್​ ಮಾಡಲು ಹೋಗಿ ಗಾಳಿಯಲ್ಲಿ ತೇಲುವುದನ್ನು ಕಲಿತ ಡೇವಿಡ್​ ವಾರ್ನರ್​..!
First published: