ಸಾಮಾನ್ಯವಾಗಿ ಸೆಲೆಬ್ರಿಟಿಗಳು, ನಟ ನಟಿಯರಿಗೆ ಫ್ಯಾಷನ್ ಸೆನ್ಸ್ (Fashion Sense) ಚೆನ್ನಾಗಿಯೇ ಇರುತ್ತದೆ. ಎಲ್ಲಿ ಹೋದರೂ ಕ್ಯಾಮೆರಾಗಳು (Camera) ಅವರನ್ನು ಹಿಂಬಾಲಿಸುವುದರಿಂದ ವಿಶಿಷ್ಟವಾಗಿ, ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ಕಾಸ್ಟ್ಯೂಮ್‌ಗಳನ್ನು ತೊಟ್ಟಿರುತ್ತಾರೆ. ಕೆಲವೊಮ್ಮೆ ಎಲ್ಲರಿಗಿಂತ ಭಿನ್ನವಾಗಿ ಕಾಣಬೇಕು ಎಂಬ ಕಾರಣಕ್ಕೆ ಹೇಗ್ಹೇಗೋ ಬಟ್ಟೆ ಹಾಕಿಕೊಳ್ಳೋದು ಮೇಕಪ್ (Makeup), ಹೇರ್ ಸ್ಟೈಲ್ ಹಾಗೂ ಎಕ್ಸಸರೀಸ್ ಧರಿಸೋದೂ ಇದೆ.
ಆದ್ರೆ ಇದು ಸೋಷಿಯಲ್ ಮೀಡಿಯಾ ಜಮಾನಾ. ಚೆನ್ನಾಗಿದ್ದರೂ ಚೆನ್ನಾಗಿ ಕಾಣದೇ ಹೋದರೂ ಕಾಮೆಂಟ್‌ಗಳು ಸಾಲು ಸಾಲಾಗಿ ಹರಿದುಬರುತ್ತವೆ. ಇತ್ತೀಚಿಗಷ್ಟೇ ತೆಲುಗು ನಿರ್ದೇಶಕ ವೆಂಕಿ ಅಟ್ಲುರಿ ಮದುವೆ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಸಾಕಷ್ಟು ಚಿತ್ರರಂಗದ ತಾರೆಯರು ಮದುವೆಗೆ ಆಗಮಿಸಿ ಶುಭ ಹಾರೈಸಿದ್ದರು.
ಅವರಲ್ಲಿ ನಟಿ ಕೀರ್ತಿ ಸುರೇಶ್ ಕೂಡ ಒಬ್ಬರು. ಕೀರ್ತಿ ಸುರೇಶ್, ನಿತಿನ್, ಅವರ ಪತ್ನಿ ಶಾಲಿನಿ, ವೆಂಕಿ ಕುಡುಮುಲ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಬಣ್ಣ ಬಣ್ಣದ ಕಲರ್‌ಫುಲ್ ಲೆಹೆಂಗಾ ಧರಿಸಿ ಬಂದಿದ್ದ ಕೀರ್ತಿ ಸಖತ್ತಾಗಿ ಮಿಂಚಿದ್ರು. ಸದ್ಯ ಅವರ ಕಲರ್‌ಫುಲ್ ಲೆಹೆಂಗಾ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಸಾಕಷ್ಟು ಜನರು ಅವರನ್ನು ಟ್ರೋಲ್ ಮಾಡ್ತಿದ್ದಾರೆ.
ವೆಂಕಿ ಮದುವೆಗೆ ಕಲರ್‌ಫುಲ್ ಲೆಹೆಂಗಾ ತೊಟ್ಟಿದ್ದ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್‌ಗೆ ಅಪಾರ ಅಭಿಮಾನಿ ಬಳಗವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಫಾಲೋವರ್ಸ್ ಇದ್ದಾರೆ. ತಮ್ಮ ಫೋಟೋಶೂಟ್ ಸ್ಟಿಲ್‌ಗಳು ಮತ್ತು ಅವರ ದೈಹಿಕ ರೂಪಾಂತರದಿಂದ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಆದ್ರೆ ಈಗ ತಮ್ಮ ವಿಶಿಷ್ಟ ಕಾಸ್ಟ್ಯೂಮ್‌ನಿಂದಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಫೆಬ್ರವರಿ 1 ರಂದು, ನಿರ್ದೇಶಕ ವೆಂಕಿ ಅಟ್ಲೂರಿ ಅವರ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡಿದ್ದರು.
ಶೀರ್ಷಿಕೆಯಲ್ಲಿ "ಅಭಿನಂದನೆಗಳು ವೆಂಕಿ ಸ್ವಾಮಿ ಮತ್ತು ಪೂಜಾ! ಈ ಹೊಸ ಆರಂಭಕ್ಕಾಗಿ ದೇವರು ನಿಮ್ಮಿಬ್ಬರ ಮೇಲೆ ಎಲ್ಲಾ ಪ್ರೀತಿಯನ್ನು ನೀಡಲಿ!"ಎಂದು ಬರೆದಿದ್ದರು.
ಕೀರ್ತಿ ಸುರೇಶ್ ಫ್ಯಾಷನ್ ಸೆನ್ಸ್ ಸಖತ್ ಟ್ರೋಲ್!
ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಕೀರ್ತಿ ಸುರೇಶ್ ಅವರ ಕಾಸ್ಟ್ಯೂಮ್‌ಗೆ ಬಹಳಷ್ಟು ಜನರು ಹಾಸ್ಯ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಫ್ಯಾಶನ್ ಸೆನ್ಸ್ ಅನ್ನು ಟ್ರೋಲ್ ಮಾಡಿದ್ದಾರೆ. ಹಲವರು ಆಕೆಯ ಉಡುಪನ್ನು ಶಾಮಿಯಾನ ಮತ್ತು ಕರ್ಟನ್ ಬಟ್ಟೆಗೆ ಹೋಲಿಸಿದ್ದಾರೆ.
ಒಬ್ಬರು “ನಿಮ್ಮ ಡ್ರೆಸ್ ಸೆನ್ಸ್ ಯಾವಾಗಲೂ ನನಗೆ ಇಷ್ಟವಾಗುತ್ತಿತ್ತು ಆದರೆ ಇದಕ್ಕೆ 1/10” ಎಂದಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು “ತಪ್ಪು ತಿಳಿದುಕೊಳ್ಳಬೇಡಿ... ಒಳ್ಳೆಯ ಸ್ಟೈಲಿಸ್ಟ್ ಅನ್ನು ನೇಮಿಸಿಕೊಳ್ಳಿ” ಎಂಬುದಾಗಿ ಹೇಳಿದ್ದಾರೆ.
ಇನ್ನು ಕೀರ್ತಿ ಸುರೇಶ್ ಕೊನೆಯದಾಗಿ ಮಲಯಾಳಂ ಚಿತ್ರ ವಾಶಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್, ತಮ್ಮ ಮುಂದಿನ ಚಿತ್ರ ದಸರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರಲ್ಲಿ ಕೀರ್ತಿ ಸುರೇಶ್‌ಗೆ ಜೊತೆಗಾಗಿ ನ್ಯಾಚುರಲ್ ಸ್ಟಾರ್ ನಾನಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಾರ್ಚ್ 30 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಶ್ರೀಕಾಂತ್ ಒಡೆಲಾ ಅವರ ನಿರ್ದೇಶನದ 'ದಸರಾ' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಜರೀನಾ ವಹಾಬ್, ಸಾಯಿ ಕುಮಾರ್ ಮತ್ತು ರಾಜಶೇಖರ್ ಅಣಿಂಗಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 'ಭೋಲಾ ಶಂಕರ್' ಚಿತ್ರದಲ್ಲೂ ಕೀರ್ತಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಚಿರಂಜೀವಿಯ ಸಹೋದರಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ. ಇದು 2015 ರ ತಮಿಳು ಚಿತ್ರ 'ವೇದಾಲಂ'ನ ಅಧಿಕೃತ ರಿಮೇಕ್ ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ