ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು (Reeshma Nanaiah Special Video) ಭರವಸೆ ಮೂಡಿಸಿದ ನಟಿ ರೀಷ್ಮಾ ನಾಣಯ್ಯ ಈಗ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕನ್ನಡದ ಕ್ಲಾಸಿಕ್ ಸೂಪರ್ ಹಿಟ್ ಹಾಡೊಂದಕ್ಕೆ ಹೊಸ (Dooradinda Bandantha Song) ರೀತಿಯಲ್ಲಿ ಕುಣಿದು ಕುಪ್ಪಳ್ಳಿಸಿದ್ದಾರೆ. ಇದನ್ನ ಕಂಡ ಫ್ಯಾನ್ಸ್ ಹಳೆ ಹಾಡಿಗೆ ಈ ರೀತಿನೂ ಡ್ಯಾನ್ಸ್ ಮಾಡಬಹುದೇ ? ಅಂತಲೇ ಆಶ್ಚರ್ಯ ಪಟ್ಟಿದ್ದಾರೆ. ಮತ್ತೆ (Reeshma Updates) ಕೆಲವ್ರು ನಿಮ್ಮ ಡ್ಯಾನ್ಸ್ ಬೆಂಕಿ ನೃತ್ಯ ಅಂತಲೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಜ, ಈ ಒಂದು ಓಲ್ಡ್ ಸಾಂಗ್‌ನ ಹೊಸ ವಿಡಿಯೋ ನೋಡಿದ್ರೆ ನಿಮಗೂ ಖುಷಿ ಆಗುತ್ತದೆ. ಸಖತ್ (Special Video on Classic Song) ಇಂಟ್ರಸ್ಟಿಂಗ್ ಆಗಿಯೇ ರೀಷ್ಮಾ ನಾಣಯ್ಯ ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಳೆ ಹಾಡು ಹೊಸ ಕುಣಿತ-ಕೆಡಿ ಲೇಡಿ ಮಸ್ತ್ ಡ್ಯಾನ್ಸ್!
ರೀಷ್ಮಾ ನಾಣಯ್ಯ ಅವರಿಗೆ ಹಳೆ ಹಾಡಿನ ಕ್ರೇಜ್ ಜಾಸ್ತಿ ಇದ್ದಂತೆ ಕಾಣುತ್ತದೆ. ಸ್ಪೂಕಿ ಕಾಲೇಜ್ ಚಿತ್ರದಲ್ಲಿ "ಮೆಲ್ಲುಸಿರೆ ಸವಿಗಾನ" ಹಾಡಿಗೆ ಇದೇ ರೀಷ್ಮಾ ನೃತ್ಯ ಮಾಡಿದ್ದರು. ಆದರೆ ಈ ಸಲ ಆಯ್ದುಕೊಂಡ ಹಾಡು ವಿಭಿನ್ನವಾಗಿಯೇ ಇದೆ. 1971 ರಲ್ಲಿ ಈ ಒಂದು ಗೀತೆ ಟಾಪ್ ಅಲ್ಲಿಯೇ ಇತ್ತು. ಕೇಳುವ ಮನಸುಗಳು ಹುಚ್ಚೆದ್ದು ಹಾಡಿಕೊಂಡಿದ್ದರು.
ದೂರದಿಂದ ಬಂದಂತ ಸುಂದರಾಂಗ ಜಾಣ ಸ್ಪೆಷಲ್ ವಿಡಿಯೋ
ಬ್ಲಾಕ್ ಆ್ಯಂಡ್ ವೈಟ್ ಕಾಲದಲ್ಲಿ ಈ ಗೀತೆ ಕಲರ್‌ಫುಲ್ ಆಗಿ ಕಿಕ್ ಕೊಟ್ಟಿತ್ತು. ನಾಯಕ ನಟ ಉದಯ್‌ಕುಮಾರ್ ಕ್ಲಬ್‌ನಲ್ಲಿ ಕುಳಿತ ಸಂದರ್ಭದಲ್ಲಿ ಈ ಒಂದು ಗೀತೆಯನ್ನ ಹಾಡುತ್ತಲೇ ಕ್ಲಬ್ ಡ್ಯಾನ್ಸರ್ ನಾಯಕನ ಮುಂದೆ ಬರುತ್ತಾಳೆ.
ಹೌದು, ನಾವು ಹೇಳ್ತಿರೋದು ಎ.ಎಂ. ಸಮೀವುಲ್ಲಾ ನಿರ್ದೇಶನದ ಸಂಶಯ ಫಲ ಚಿತ್ರದ ಗೀತೆಯ ಬಗ್ಗೇನೆ, ಗಾಯಕಿ ಎಲ್.ಆರ್. ಈಶ್ವರಿ ಈ ಗೀತೆಯನ್ನ ಹಾಡಿದ್ದರು. ಸಲೀಲ್ ಚೌಧರಿ ಈ ಗೀತೆಯನ್ನ ಕಂಪೋಜ್ ಮಾಡಿದ್ದರು. "ದೂರದಿಂದ ಬಂದಂತ ಸುಂದರಾಂಗ ಜಾಣ" ಅನ್ನೋ ಈ ಗೀತೆ ಎಲ್ಲರ ಮನದಲ್ಲೂ ಹೊಸ ಅಲೆ ಎಬ್ಬಿಸಿತ್ತು. ಇದರ ಎಫೆಕ್ಟ್ ಈಗಲೂ ಇದೆ. ಅದಕ್ಕೆ ಸಾಕ್ಷಿ ರೀಷ್ಮಾ ನಾಣಯ್ಯ ಅವರ ಈ ಒಂದು ಹೊಸ ವಿಡಿಯೋ ನೋಡಿ.
ಹಳೆ ಹಾಡಿಗೆ ಹೊಸ ಕುಣಿತ-ಇದು ಕೆಡಿ ಲೇಡಿ ಸ್ಪೆಷಲ್ ವಿಡಿಯೋ
ರೀಷ್ಮಾ ನಾಣಯ್ಯ ತಮ್ಮ ಗೆಳತಿಯೊಟ್ಟಿಗೆ ಈ ಒಂದು ಹಾಡಿಗೆ ನೃತ್ಯ ಮಾಡಿದ್ದಾರೆ. ಇದು ನಿಜಕ್ಕೂ ಹೊಸ ರೀತಿಯ ನೃತ್ಯ ರೂಪವೇ ಆಗಿದೆ. ಹಳೆ ಹಾಡುಗಳನ್ನ ಹೀಗೂ ರೀ ಕ್ರಿಯೇಟ್ ಮಾಡಬಹುದು ಅನ್ನೋದಕ್ಕೆ ಈ ಒಂದು ವಿಡಿಯೊ ಸಾಕ್ಷಿ ಆದಂತಿದೆ.
View this post on Instagram
ಮಚ್‌ಲಕ್ಷ್ಮಿಯ ಮಸ್ತ್ ಮಸ್ತ್ ಡ್ಯಾನ್ಸ್ ವಿಡಿಯೋ ವೈರಲ್
ಎಲ್ಲೂ ಈ ಬಗ್ಗೆ ರೀಷ್ಮಾ ಹೇಳಿಕೊಂಡಿಲ್ಲ. ಆದರೆ ರೀಷ್ಮಾ ನಾಣಯ್ಯ ವಿಡಿಯೋ ಅದನ್ನೆ ಹೇಳುತ್ತದೆ. ಜೊತೆಗೆ ಸೂಪರ್ ಅನ್ನುವ ಭಾವನೆ ಕೂಡ ಮೂಡಿಸುತ್ತದೆ.
ರೀಷ್ಮಾ ನಾಣಯ್ಯ ಸ್ಪೆಷಲ್ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಸ್ತ್ ಡ್ಯಾನ್ಸ್ ರೀ ಮ್ಯಾಡಂ ಅಂತಲೂ ರಿಯ್ಯಾಕ್ಟ್ ಮಾಡಿದ್ದಾರೆ.
ಇದನ್ನೂ ಓದಿ: Rebel Star Ambareesh: ರೆಬಲ್ ಸ್ಟಾರ್ ಅಂಬಿ ಕಂಡು "ನಮಸ್ಕಾರ ಅಂಬರೀಶ್" ಎಂದಿದ್ರು ರಾಜ್ಕುಮಾರ್? ಇಲ್ಲಿದೆ ಅಸಲಿ ಕಾರಣ
ಅಂದ್ಹಾಗೆ ರೀಷ್ಮಾ ನಾಣಯ್ಯ ಸದ್ಯ ಕೆಡಿ ಚಿತ್ರದ ಮೂಲಕ ಹೊಸ ಅಲೆ ಎಬ್ಬಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಚ್‌ಲಕ್ಷ್ಮಿ ಪಾತ್ರದ ಮೂಲಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಜೋಡಿ ಆಗಿದ್ದಾರೆ. ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅವರನ್ನ ಇನ್ನೂ ಹೇಗೆ ತೋರಿಸುತ್ತಾರೆ ಅನ್ನುವ ಕುತೂಹಲ ಕೂಡ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ