'ಕರ್ನಾಟಕ ಚಲನಚಿತ್ರ ಕಪ್​ ಸೀಸನ್​ 2'ಗೆ ನಡೆದಿದೆ ಭರದ ಸಿದ್ಧತೆ!

news18
Updated:July 23, 2018, 3:57 PM IST
'ಕರ್ನಾಟಕ ಚಲನಚಿತ್ರ ಕಪ್​ ಸೀಸನ್​ 2'ಗೆ ನಡೆದಿದೆ ಭರದ ಸಿದ್ಧತೆ!
news18
Updated: July 23, 2018, 3:57 PM IST
Loading...

ಓಂ ಸಕಲೇಶಪುರ, ನ್ಯೂಸ್​ 18 ಕನ್ನಡ 

ಕಿಚ್ಚ ಸುದೀಪ್ ಮುಂದಾಳತ್ವದ 'ಕೆ.ಸಿ.ಸಿ ಕಪ್' ಬರುವ ಸೆಪ್ಟೆಂಬರ್ ತಿಂಗಳ 8 ಮತ್ತು 9 ರಂದು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರು ಭಾಗವಹಿಸಿ ಆಕರ್ಷಣೆಯ ಕೇಂದ್ರಬಿಂದುಗಳಾದರು. ಈ ಕಾರ್ಯಕ್ರಮದ ಕುರಿತಾದ ಒಂದು ವರದಿ ಇಲ್ಲಿದೆ.

ಕರ್ನಾಟಕ ಚಲನಚಿತ್ರ ಕಪ್ ಮೊದಲ ಸೀಸನ್ ಯಶಸ್ಸಿನ ಖುಷಿಯಲ್ಲಿರುವ ಸುದೀಪ್, ಸೀಸನ್-2 ಮಾಡೋಕೆ ತಯಾರಿ ಮಾಡಿಕೊಂಡಿದ್ದಾರೆ. ಈ ಬಾರಿಯ ಸೀಸನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 8 ಮತ್ತು 9 ಎರಡು ದಿನಗಳ ಕಾಲ ನಡೆಯಲಿದೆ. ಈ ಕುರಿತಾದ ಮಾಹಿತಿಯನ್ನು ಸುದೀಪ್ ನೀಡಿದರು. ಉಪಮುಖ್ಯಮಂತ್ರಿ ಪರಮೇಶ್ವರ್ ಶುಭಹಾರೈಸಿದರೆ, ರೆಬೆಲ್‍ಸ್ಟಾರ್ ಅಂಬರೀಷ, ಸುಮಲತಾ, ಜನಾರ್ಧನ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಲಂಕಾದ ಸ್ಟಾರ್ ಆಟಗಾರರಾಗಿದ್ದ ತಿಲಕರತ್ನೆ ದಿಲ್ಶನ್, ವಿಶ್ವ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಲಾಸ್ಟಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಜರಿದ್ದರು ವಿಶ್ವ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವೀ ವಿಕೆಟ್ ಕೀಪರ್ ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ ಅನುಪಸ್ಥಿತಿ ಹೊರತುಪಡಿಸಿದರೆ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್‍ಮನ್ ಹರ್ಷಲ್‍ಗಿಬ್ಸ್ ಮತ್ತು ಇಂಗ್ಲೆಂಡ್ ಆಟಗಾರ ಓವೆಷ್ ಷಾ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಳಿಯಲು ತಯಾರಾಗಿರೋ ಸಂದೇಶ ಕೊಟ್ಟರು.


  ಸೃಜನ್ ಲೋಕೇಶ್ ನಡೆಸಿಕೊಟ್ಟ ಆಟಗಾರರ ಆಯ್ಕೆ ಕಾರ್ಯಕ್ರಮದಲ್ಲಿ, ಆರು ತಂಡಗಳಿಗೆ ಆಟಗಾರರ ಆಯ್ಕೆ ಕೂಡ ನಡೆಯಿತು. ನಾಲ್ಕು ಹಳೆಯ ನಾಯಕರ ಜೊತೆಯಲ್ಲಿ ಇಬ್ಬರು ಹೊಸ ನಾಯಕರಾಗಿ ರಿಯಲ್‍ಸ್ಟಾರ್ ಉಪೇಂದ್ರ ಮತ್ತು ಗೋಲ್ಡನ್‍ಸ್ಟಾರ್ ಗಣೇಶ್ ಕೆಸಿಸಿ ಟೂರ್ನಮೆಂಟ್‍ಗೆ ಕಾಲಿಟ್ಟರು. ಒಟ್ಟಾರೆ ಸೆಪ್ಟೆಂಬರ್ ತಿಂಗಳಲ್ಲಿ ಕನ್ನಡ ಚಿತ್ರರಂಗದ ತಾರೆಯರ ಜೊತೆ ವಿಶ್ವ ಕ್ರಿಕೆಟ್ ಮಾಜಿ ತಾರಾ ಆಟಗಾರರು ಸೇರಿಕೊಳ್ಳಲಿದ್ದಾರೆ. 
 
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ