ಕನ್ನಡ ಚಲನಚಿತ್ರ ಕಪ್‍: ಗೋಲ್ಡನ್ ಸ್ಟಾರ್​ಗೆ 122 ರನ್​ಗಳ ಟಾರ್ಗೆಟ್ ನೀಡಿದ ಕಿಚ್ಚ ಸುದೀಪ್

news18
Updated:September 8, 2018, 3:19 PM IST
ಕನ್ನಡ ಚಲನಚಿತ್ರ ಕಪ್‍: ಗೋಲ್ಡನ್ ಸ್ಟಾರ್​ಗೆ 122 ರನ್​ಗಳ ಟಾರ್ಗೆಟ್ ನೀಡಿದ ಕಿಚ್ಚ ಸುದೀಪ್
  • News18
  • Last Updated: September 8, 2018, 3:19 PM IST
  • Share this:
-ನ್ಯೂಸ್ 18 ಕನ್ನಡ

ಕನ್ನಡ ಚಲನಚಿತ್ರ ಕಪ್‍ನ ಎರಡನೇ ಆವೃತಿ ಆರಂಭವಾಗಿದೆ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ‌‌. ಕುಮಾರಸ್ವಾಮಿ ಪಂದ್ಯವನ್ನು ಉದ್ಘಾಟನೆ ಮಾಡಿದ್ದು, ಮೊದಲ ಪಂದ್ಯ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಮತ್ತು ಗಣೇಶ್ ನಾಯಕನಾಗಿರುವ ಒಡೆಯರ್ ಚಾರ್ಜರ್ಸ್​ ನಡುವೆ ನಡೆಯುತ್ತಿದೆ.ಕದಂಬ ತಂಡವನ್ನು ಪ್ರೋತ್ಸಾಹಿಸಲು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಆಗಮಿಸಿರುವುದು ವಿಶೇಷ. ಮೊದಲನೇ ಸೀಸನ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಎರಡನೇ ಆವೃತಿ ಭರ್ಜರಿಯಾಗಿ ಪ್ರಾರಂಭವಾಗಿದೆ. ಸಿಎಂ ಮತ್ತು ಸೆಲೆಬ್ರಿಟಿಗಳು ಆಗಮಿಸಿದ್ದರಿಂದ ಸ್ಟೇಡಿಯಂ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸ್ಯಾಂಡಲ್​ವುಡ್​ನ ಸ್ಟಾರ್ ನಟರಾದ ಸುದೀಪ್, ಶಿವರಾಜ್ ಕುಮಾರ್, ಗಣೇಶ್ ಸೇರಿದಂತೆ ಅನೇಕ ನಟರು ಮೈದಾನಕ್ಕಿಳಿದಿದ್ದಾರೆ. ಹಾಗೆಯೇ ಪ್ರತಿ ತಂಡದಲ್ಲೂ ಒಬ್ಬ ಅಂತರಾಷ್ಟ್ರೀಯ ಕ್ರಿಕೆಟರ್ಸ್​​ ಭಾಗಿಯಾಗಿದ್ದಾರೆ. ಅಂತರಾಷ್ಟ್ರೀಯಾ ಕ್ರಿಕೆಟರ್ಸ್​​ ಪಾಲ್ಗೊಂಡಿರುವುದು ಈ ಭಾರಿಯ ಪ್ರಮುಖ ಆಕರ್ಷಣೆಯಾಗಿದ್ದು, ಸೆಪ್ಟಂಬರ್ 8 ಮತ್ತು 9 ರಂದು ಪಂದ್ಯಾಟಗಳು 10 ಓವರ್​ನಲ್ಲಿ ನಡೆಯಲಿದೆ.
ಇತ್ತೀಚಿನ ವರದಿ ಬಂದಾಗ ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ಅವರ ಕದಂಬ 10 ಓವರ್​ನಲ್ಲಿ 121 ರನ್ ಪೇರಿಸಿದೆ. ಲಯನ್ಸ್​ ಪರ ವೀರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಬೋಗಾದಿ ಆರಂಭಿಕರಾಗಿ ಕಣಕ್ಕಿಳಿದ್ದರು. ಸ್ಫೋಟಕ ಆಟಕ್ಕೆ ಮುಂದಾದ ಸೆಹ್ವಾಗ್ 16 ಎಸೆತಗಳಲ್ಲಿ 29ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್​ ಮುಗಿದಿದ್ದು ಗಣೇಶ್ ನಾಯಕತ್ವದ ಚಾರ್ಜರ್ಸ್​ಗೆ 122 ರನ್​ಗಳ ಗುರಿ ನೀಡಲಾಗಿದೆ.

ನಾಯಕ- ತಂಡದ ಹೆಸರು-ಅಂತರಾಷ್ಟ್ರೀಯ ಆಟಗಾರ

ಕಿಚ್ಚ ಸುದೀಪ್ - ಕದಂಬ ಲಯನ್ಸ್ - ವಿರೇಂದ್ರ ಸೆಹವಾಗ್

ಉಪೇಂದ್ರ - ಹೊಯ್ಸಳ ಈಗಲ್ಸ್ - ಹರ್ಷಲ್ ಗಿಬ್ಸ್

ಪುನೀತ್ ರಾಜ್ ಕುಮಾರ್ - ಗಂಗಾ ವಾರಿಯರ್ಸ್ - ಲ್ಯಾನ್ಸ್ ಕ್ಲೂಸ್ನರ್

ಶಿವರಾಜ್ ಕುಮಾರ್ - ವಿಜಯನಗರ ಪಾಟ್ರಿವೊಟ್ಸ್ - ಆ್ಯಡಂ ಗಿಲ್​ಕ್ರಿಸ್ಟ್

ಯಶ್ - ರಾಷ್ಟ್ರಕೂಟ ಪಾಂಥರ್ಸ್ - ಒವೈಸ್ ಶಾ

ಗಣೇಶ್ - ಒಡೆಯರ್ ಚಾರ್ಜರ್ಸ್ - ತಿಲಕರತ್ನೆ ದಿಲ್ಶಾನ್
First published: September 8, 2018, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading