ಕಿಚ್ಚ ಸುದೀಪ್ (Kichcha Sudeep), ಶಿವರಾಜ್ಕುಮಾರ್ (Shivarajkumar), ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಗ್ರೌಂಡ್ನಲ್ಲಿ ಬ್ಯಾಟ್ ಬೀಸೋದನ್ನು ನೋಡೋಕೆ ಹೋಗೋ ಆಸೆ ನಿಮಗಿಲ್ವಾ? ಕನ್ನಡ ಚಿತ್ರರಂಗದ (Sandalwood) ಸ್ಟಾರ್ ನಟರು ಹೇಗೆ ಕ್ರಿಕೆಟ್ (Cricket) ನೋಡ್ತಾರೆ ಅಂತ ನೋಡೋ ಕುತೂಹಲ ಇಲ್ವಾ? ಕೆಸಿಸಿ ಕಪ್ (KCC Cup) ಫೆಬ್ರವರಿ ತಿಂಗಳ 24 ಹಾಗೂ 25 ರಂದು ನಿಗದಿಯಾಗಿದೆ. ನೀವೂ ಕೂಡಾ ನಿಮ್ಮ ನೆಚ್ಚಿನ ಸಿನಿತಾರೆ ಕ್ರಿಕೆಟ್ ಆಡೋದನ್ನು ನೇರವಾಗಿ ನೋಡಿ ಆನಂದಿಸಬಹುದು. ಕನ್ನಡ ಚಲನಚಿತ್ರ ಕಪ್ ನೋಡೋಕೆ ಹೋಗೋಕೆ ಪ್ಲಾನ್ ಮಾಡಿದ್ದೀರಾ? ಟಿಕೆಟ್ ಬುಕ್ (Ticket Booking) ಮಾಡೋದು ಹೇಗೆ? ಎಲ್ಲಿ ನಡೆಯುತ್ತೆ ಕ್ರಿಕೆಟ್? ಇಲ್ಲಿದೆ ಫುಲ್ ಡೀಟೆಲ್ಸ್.
ಕನ್ನಡ ಚಲನಚಿತ್ರ ಕಪ್ 2023ರ ಮೂರನೇ ಎಡಿಷನ್ ಫೆಬ್ರವರಿ 24ರಂದು ಆರಂಭಗೊಳ್ಳಲಿದೆ. ಇಲ್ಲಿ ಕನ್ನಡ ಸಿನಿಮಾ ಸ್ಟಾರ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಂದಾಗಲಿದ್ದಾರೆ. ಸುರೇಶ್ ರೈನಾ, ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸುಬ್ರಮಣಿಯಂ ಬದ್ರಿನಾಥ್, ಹರ್ಷೆಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಅವರು ಆಡಲಿದ್ದಾರೆ.
ಇವರನ್ನು ಹೊರತುಪಡಿಸಿ ಪ್ರಸಿದ್ಧ ನಟರೂ ಕೂಡಾ ಕ್ರಿಕೆಟ್ ಆಡಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟ ರಾಕ್ಷಸ ಡಾಲಿ ಧನಂಜಯ, ಆ್ಯಕ್ಷನ್ ಪ್ರಿನ್ಸ ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಗ್ರೌಂಡ್ಗೆ ಇಳಿಯಲಿದ್ದಾರೆ.
ಕೆಸಿಸಿ 2023 ಯಾವಾಗಿನಿಂದ ಶುರು?
ಕನ್ನಡ ಚಲನಚಿತ್ರ ಕಪ್ 2023 ಫೆಬ್ರವರಿ 24ರಂದು ಆರಂಭವಾಗಲಿದೆ.
ಯಾವ ಸ್ಥಳದಲ್ಲಿ ಕೆಸಿಸಿ 2023 ಲೀಗ್ ನಡೆಯುತ್ತೆ?
ಕೆಸಿಸಿ 2023 ಕೀಗ್ ಮೈಸೂರಿನಲ್ಲಿ ನಡೆಯುವುದೆಂದು ನಿಗದಿಯಾಗಿತ್ತು. ಆದರೆ ನಂತರದಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರಿನಲ್ಲಿ ನಿಗದಿ ಮಾಡಲಾಗಿದೆ.
ಕೆಸಿಸಿ 2023 ತಂಡಗಳು:
ಗ್ರೂಪ್ ಎ: ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್
ಗ್ರೂಪ್ ಬಿ: ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ, ವಡಿಯರ್ ಚಾರ್ಜರ್ಸ್
ಟೂರ್ನಿ | KCC 2023 |
ದಿನಾಂಕ | ಫೆಬ್ರವರಿ 24 ಮತ್ತು 25 |
ಸ್ಥಳ | ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು |
ತಂಡಗಳು | ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ, ವಡಿಯರ್ ಚಾರ್ಜರ್ಸ್ |
ಎ ಗ್ರೂಪ್ | ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್ |
ಬಿ ಗ್ರೂಪ್ | ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ, ವಡಿಯರ್ ಚಾರ್ಜರ್ಸ್ |
ಕ್ಯಾಪ್ಟನ್ಸ್ | ಕಿಚ್ಚ ಸುದೀಪ್, ಕೃಷ್ಣ, ಪ್ರದೀಪ್, ಗಣೇಶ್, ಜಯರಾಮ್ ಕಾರ್ತಿಕ್, ಶಿವಣ್ಣ, |
ಲೈವ್ ಸ್ಟ್ರೀಮ್ | ವೂಟ್ |
ಹೊಯ್ಸಳ ಈಗಲ್ಸ್:
ಕ್ರಿಸ್ ಗೇಲ್, ಕಿಚ್ಚ ಸುದೀಪ್(ಕ್ಯಾಪ್ಟನ್), ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನಿಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ, ಅಭಿಷೇಕ್ ಬಾಡ್ಕರ್.
View this post on Instagram
ಸುರೇಶ್ ರೈನಾ, ಧನಂಜಯ, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ರಜನ್ ಹಾಸನ, ಪ್ರವೀಣ್, ಶಿವರಾಜ್ ಕುಮಾರ್ ಬಿಯು, ಕೃಷ್ಣ (ಕ್ಯಾಪ್ಟನ್)
ವಿಜಯನಗರ ಪ್ಯಾಟ್ರಿಯಾಟ್ಸ್:
ಹರ್ಷೆಲ್ ಗಿಬ್ಸ್, ಉಪೇಂದ್ರ, ತ್ರಿವಿಕ್ರಮ್, ಗರುಡ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಠಲ್ ಕಾಮತ್, ಕಿರಣ್, ಸಚಿನ್, ಮಹೇಶ್ ಕೃಷ್ಣ, ಮಯೂರ್ ಪಟೇಲ್, ಆದರ್ಶ್, ರಜತ್ ಹೆಗ್ಡೆ, ಪ್ರದೀಪ್ (ಕ್ಯಾಪ್ಟನ್)
ಕದಂಬ ಲಯನ್ಸ್:
ಟಿ. ದಿಲ್ಶನ್, ಗಣೇಶ್ (ಕ್ಯಾಪ್ಟನ್), ರೇಣುಕ್, ವ್ಯಾಸರಾಜ್, ಲೋಕಿ, ಪ್ರತಾಪ್ ವಿ, ಲೋಕಿ ಸಿಕೆ, ಯೋಗೇಶ್, ಅಭಿಲಾಷ್, ಪವನ್ ವಡೆಯರ್, ಪ್ರೀತಮ್ ಗುಬ್ಬಿ, ರಕ್ಷಿತ್ ಎಸ್, ರಿಷಿ ಬೋಪಣ್ಣ, ರಾಜೀವ್ ಹನು
ರಾಷ್ಟ್ರಕೂಟ ಪ್ಯಾಂಥರ್ಸ್:
ಎಸ್. ಬದ್ರಿನಾಥ್, ಧ್ರುವ ಸರ್ಜಾ, ವಿನೋದ್ ಕಿನಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ಜಯರಾಮ್ ಕಾರ್ತಿಕ್ (ಕ್ಯಾಪ್ಟನ್)
ವಡೆಯರ್ ಚಾರ್ಜರ್ಸ್:
ಬ್ರಿಯಾನ್ ಲಾರಾ, ಶಿವಣ್ಣ (ಕ್ಯಾಪ್ಟನ್), ಅರ್ಜುನ್ ಯೋಗಿ, ನಿರುಪ್ ಭಂಡಾರಿ, ನರೇಶ್ ಗಾಂಧಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್ ಬಿಎ, ರಾಹುಲ್ ಪ್ರಸನ್ನ, ಆರ್ಯನ್, ತಮನ್ ಎಸ್
ಇದನ್ನೂ ಓದಿ: Sharmitha Gowda: ಬೀಚ್ ಬೇಬಿಯಾದ ಗೀತಾ ಸೀರಿಯಲ್ನ ಭಾನುಮತಿ!
ಕೆಸಿಸಿ 2023 ನಡೆಯುವ ದಿನ:
ಫೆಬ್ರವರಿ 24
ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್
ಹೊಯ್ಸಳ ಈಗಲ್ಸ್ vs ವಡೆಯರ್ ಚಾರ್ಜರ್ಸ್
ಕದಂಬ ಲಯನ್ಸ್ vs ರಾಷ್ಟ್ರಕೂಟ ಫ್ಯಾಂಥರ್ಸ್
ಫೆಬ್ರವರಿ 25
ವಿಜಯನಗರ ಪ್ಯಾಟ್ರಿಯಾಟ್ಸ್ vs ಕದಂಬ ಲಯನ್ಸ್
ಗಂಗಾ ವಾರಿಯರ್ಸ್ vs ವಡೆಯರ್ ಚಾರ್ಜರ್ಸ್
ರಾಷ್ಟ್ರಕೂಟ ಫ್ಯಾಂಥರ್ಸ್ vs ವಿಜಯನಗರ ಪ್ರಾಟ್ರಿಯಾಟ್ಸ್
ಕೆಸಿಸಿ 2023 ಮ್ಯಾಚ್ ಎಲ್ಲಿ ನೋಡಬಹುದು?
KCC 2023 ಲೈವ್ ಸ್ಟ್ರೀಮ್ ವೂಟ್ನಲ್ಲಿ ನೋಡಬಹುದು.
ಟಿಕೆಟ್ ಬುಕ್ಕಿಂಗ್ ಹೇಗೆ?
ಟಿಕೆಟ್ಸ್ಜಿನಿ.ಕಾಂನಲ್ಲಿ ಟಿಕೆಟ್ ಬುಕ್ ಮಾಡಬಹುದು. https://in.ticketgenie.in/Tickets/KCC-2023 ಲಿಂಕ್ ಕ್ಲಿಕ್ ಮಾಡಿ ಅಲ್ಲಿ ಬಯ್ ಟಿಕೆಟ್ ಆಪ್ಶನ್ ಕ್ಲಿಕ್ ಮಾಡಿ. 5 ವಿಭಾಗದಲ್ಲಿ ದರ ನಿಗದಿ ಮಾಡಲಾಗಿದೆ. 250, 750, 1500, 3000, 5000 ಟಿಕೆಟ್ ದರ ಇದೆ. ಅಲ್ಲಿ ತೋರಿಸಲಾಗುವ ಚಾರ್ಟ್ನಿಂದ ನಿಮ್ಮ ಸೀಟ್ ಕ್ಯಾಟಗರಿ ಕ್ಲಿಕ್ ಮಾಡಿ. ಆಗ ನಿಮಗೆಷ್ಟು ಟಿಕೆಟ್ ಬೇಕು ಎನ್ನುವ ಆಯ್ಕೆ ಪಾಪ್ ಅಪ್ ಆಗುತ್ತದೆ. ನಿಮಗೆ ಬೇಕಾದಷ್ಟು ಟಿಕೆಟ್ ಆಯ್ಕೆ ಮಾಡಿ. ನಂತರ ಪ್ರೊಸೀಡ್ ಬಟನ್ ಕ್ಲಿಕ್ ಮಾಡಿ.
ಆಮೇಲೆ ನಿಮ್ಮ ಹೆಸರು, ಮೊಬೈಲ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿಯನ್ನು ಫಿಲ್ ಮಾಡಿ. ನಿಮ್ಮಲ್ಲಿ ಯಾವುದಾದರೂ ಕೋಡ್ ಇದ್ದರೆ ಅದನ್ನು ಇಲ್ಲಿ ನಮೂದಿಸಬಹುದು. ಆಮೇಲೆ ಪೇ ಆಪ್ಶನ್ ಕ್ಲಿಕ್ ಮಾಡಿ ಹಣ ಪಾವತಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ