Kaun Banega Crorepati 11: ಕೌನ್​ ಬನೇಗ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಈ ವಾರ ಸೃಷ್ಟಿಯಾಗಲಿದೆ ಇತಿಹಾಸ..!

Amithabh Bachchan: ಈ ವಾರದ ಕೆಬಿಸಿ ಕಾರ್ಯಕ್ರಮದಲ್ಲಿ ಒಂದು ಇತಿಹಾಸ ಸೃಷ್ಟಿಯಾಗಲಿದೆ. ಹೌದು, ಈ ಸಲ ಒಂದೇ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಒಂದು ಕೋಟಿ ಪ್ರಶ್ನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಕುರಿತಾಗಿ ಸೋನಿ ಟಿವಿ ಇಬ್ಬರು ಸ್ಪರ್ಧಿಗಳಿರುವ ಒಂದು ಪುಟ್ಟ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

Anitha E | news18-kannada
Updated:September 10, 2019, 3:53 PM IST
Kaun Banega Crorepati 11: ಕೌನ್​ ಬನೇಗ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಈ ವಾರ ಸೃಷ್ಟಿಯಾಗಲಿದೆ ಇತಿಹಾಸ..!
ಒಂದು ವಾರದಲ್ಲೇ ಒಂದು ಕೋಟಿ ಪ್ರಶ್ನೆಯ ಸುತ್ತಿಗೆ ತಲುಪಿದ ಇಬ್ಬರು ಸ್ಪರ್ಧಿಗಳು
Anitha E | news18-kannada
Updated: September 10, 2019, 3:53 PM IST
ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮದ ಕೌನ್​ ಬನೇಗ ಕರೋಡ್​ ಪತಿ. ಇದನ್ನು ಚಿಕ್ಕದಾಗಿ ಕೆಬಿಸಿ ಎಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮದ 11ನೇ ಸೀಸನ್​ ಆರಂಭವಾಗಿರುವ ವಿಷಯ ತಿಳಿದೇ ಇದೆ.

ಈ ವಾರ ಕಾರ್ಯಕ್ರಮದಲ್ಲಿ ಒಂದು ಇತಿಹಾಸ ಸೃಷ್ಟಿಯಾಗಲಿದೆ. ಹೌದು, ಈ ಸಲ ಒಂದೇ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಒಂದು ಕೋಟಿ ಪ್ರಶ್ನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಕುರಿತಾಗಿ ಸೋನಿ ಟಿವಿ ಇಬ್ಬರು ಸ್ಪರ್ಧಿಗಳಿರುವ ಒಂದು ಪುಟ್ಟ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದೆ.




 


Loading...



View this post on Instagram




 

Prepare for a very interesting week on #KBC as not one but two of the Hotseat could contestants prepare to attempt the 1 Cr question! Will either of them manage to crack the question and become a crorepati? Find out on KBC, Mon-Fri at 9 PM @amitabhbachchan


A post shared by Sony Entertainment Television (@sonytvofficial) on






ಒಂದು ಕೋಟಿಯ ಪ್ರಶ್ನೆವರೆಗೆ ತಲುಪಿರುವ ಸ್ಪರ್ಧಿ 19 ವರ್ಷದ ಹಿಮಾಂಶು. ಪೈಲಟ್​ ಆಗುವುದು ಇವರ ಚಿಕ್ಕಂದಿನ ಕನಸು. ಅದನ್ನು ನನಸಾಗಿಸಿಕೊಳ್ಳಲು ಹಿಮಾಂಶು ಇಂದಿರಾಗಾಂಧಿ ಫ್ಲೈಯಿಂಗ್​ ಇನ್​ಸ್ಟಿಟ್ಯೂಟ್​ಗೆ ದಾಖಲಾಗಿದ್ದಾರೆ.

ಕಾರ್ಯಕ್ರಮದಲ್ಲಿ ಅಮಿತಾಭ್​ ಅವರೊಂದಿಗೆ ಮಾತನಾಡುತ್ತಾ ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುತ್ತಾ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದಾರೆ. ಹೀಗೆ ಆಡುತ್ತಾ 50 ಲಕ್ಷದ ಪ್ರಶ್ನೆಗೆ ಉತ್ತರ ಕೊಡುವ ಮೂಲಕ ಈಗ ಒಂದು ಕೋಟಿಯ ಪ್ರಶ್ನೆಗೆ ಬಂದು ನಿಂತಿದ್ದಾರೆ.

ಇದನ್ನೂ ಓದಿ: Puneeth Rajkumar: ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಗಲಾಟೆ: ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ..!

ಇನ್ನು ಈ ವಾರದ ಮತ್ತೋರ್ವ ಸ್ಪರ್ಧಿಯ ಬಗ್ಗೆ ಮಾತನಾಡುವುದಾದರೆ, ಬಿಹಾರ ಜಹಾನಾಬಾದ್​ ನಿವಾಸಿ ಇವರು. ಈ ಸ್ಪರ್ಧಿಯ ಹೆಸರು ಎಲ್ಲೂ ಬಹಿರಂಗಪಡಿಸಿಲ್ಲ. ಅಲ್ಲದೆ ರೈತ ಕುಟುಂಬದವರಾದ ಈ ಸ್ಪರ್ಧಿ ಐಎಎಸ್​ ಅಧಿಕಾರಿಯಾಗುವ ಕನಸು ಕಂಡಿದ್ದಾರಂತೆ. ಅವರ ಪರಿಶ್ರಮದ ಫಲವೇ ಅವರನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ. ಅದರಲ್ಲೂ ವಿಡಿಯೋದಲ್ಲಿ ಈ ಸ್ಪರ್ಧಿ ಒಂದು ಕೋಟಿಯ ಪ್ರಶ್ನೆಗೆ ಉತ್ತರ ನೀಡಿದ್ದು, ಅದನ್ನು ಲಾಕ್​ ಮಾಡಿ ಎಂದು ಹೇಳುವುದನ್ನು ತೋರಿಸಲಾಗಿದೆ. ಇವರು ಗೆಲ್ಲುತ್ತಾರೋ ಅಥವಾ ಇಲ್ಲವೋ ಎಂಬುದಕ್ಕೆ ಕಾದುನೋಡಬೇಕು ಅಷ್ಟೆ.

Tanya Hope: ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಪಡ್ಡೆಗಳ ನಿದ್ದೆ ಕೆಡಿಸಿದ 'ಯಜಮಾನ'ನ ಬಸಣ್ಣಿ ತಾನ್ಯಾ..!

First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...