ಹಿಂದಿಯಲ್ಲಿ ಮೂಡಿ ಬರುತ್ತಿರುವ ಕೌನ್ ಬನೇಗಾ ಕರೋಡ್ಪತಿ ಈ ಬಾರಿ ಕನ್ನಡಿಗರಿಗೆ ವಿಶೇಷವಾಗಿತ್ತು. ಇದಕ್ಕೆ ಕಾರಣ ಹಾಟ್ ಸೀಸನ್ನಲ್ಲಿ ಕಾಣಿಸಿಕೊಂಡಿದ್ದುಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಹೆಮ್ಮೆಯ ಕನ್ನಡತಿ ಸುಧಾ ಮೂರ್ತಿ.
ಅಭಿತಾಭ್ ಬಚ್ಚನ್ ಅವರ ಕಂಚಿನ ಕಂಠದ ನಿರೂಪಣೆಯೊಂದಿಗೆ 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 11 ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದ ಅಂತಿಮ ಸ್ಪರ್ಧಿಯಾಗಿ ಸುಧಾಮೂರ್ತಿ ಅವರು ಭಾಗವಹಿಸಿದ್ದರು. ಅದರಂತೆ ತಮ್ಮ ಜೀವನ ಅಮೂಲ್ಯ ಕ್ಷಣ, ಕಾಲೇಜ್ ಲೈಫ್ಗಳನ್ನು ವೀಕ್ಷಕರ ಮುಂದೆ ತೆರೆದಿಟ್ಟರು. ಅದರಲ್ಲೂ ಬಿಗ್ ಬಿ ಖುದ್ದು ವಯಸ್ಸಿನಲ್ಲಿ ತಮಗಿಂತಲೂ ಕಿರಿಯರಾದರೂ ಸುಧಾಮೂರ್ತಿ ಅವರ ಕಾಲಿಗೆ ನಮಸ್ಕರಿಸಿ ಎಲ್ಲರ ಸೆಳೆದರು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡುತ್ತಾ, "ಸುಧಾ ಮೂರ್ತಿ 60 ಸಾವಿರ ಲೈಬ್ರರಿಗಳು, ನೂರಾರು ಶಾಲೆಗಳು, 16 ಸಾವಿರಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಅವರ ಜೀವನವೇ ಸ್ಫೂರ್ತಿದಾಯಕ. ಯುವ ಪೀಳಿಗೆಗೆ ಆದರ್ಶ" ಎಂದು ಅಮಿತಾಭ್ ಬಚ್ಚನ್ ಹಾಡಿ ಹೊಗಳಿದರು.
ಹೀಗೆ ಪ್ರಾರಂಭವಾದ ಪ್ರಶ್ನೋತ್ತರಗಳಲ್ಲಿ ಸುಧಾಮೂರ್ತಿ ಅವರು ಪ್ರತಿಯೊಂದಕ್ಕೂ ಸರಿಯಾದ ಉತ್ತರವನ್ನು ನೀಡುತ್ತಾ ಹೋದರು. 1,60,000 ಮೊತ್ತದಿಂದ ಆರಂಭವಾದ ಪ್ರಶ್ನೆಗೆ ಉತ್ತರಿಸುವ ಮೂಲಕ ಬಹುಮಾನ ಮೊತ್ತ 3,20,000 ರೂ. ತಲುಪಿತು. 11ನೇ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದ ಸುಧಾಮ್ಮ ತಮ್ಮ ಖಾತೆಗೆ 6,40,000 ರೂ. ಸೇರ್ಪಡೆಗೊಳಿಸಿದರು. ಈ ಉತ್ತರ ನೀಡಲು ಆಡಿಯನ್ಸ್ ಸಹಾಯ ಪಡೆದು 50:50 ಆಯ್ಕೆ ಮಾಡಿಕೊಂಡರು. ಮುಂದಿನ ಪ್ರಶ್ನೆಗೆ ಮತ್ತೊಮ್ಮೆ ಸರಿಯಾದ ಉತ್ತರ ನೀಡಿ 2,50,0000 ಮೊತ್ತ ಗೆದ್ದರು. ಮುಂದಿನ ಪ್ರಶ್ನೆ 50 ಲಕ್ಷದ್ದಾಗಿತ್ತು.
ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್
ಕೊನೆಯ ಪ್ರಶ್ನೆ ಏನಾಗಿತ್ತು?
ಸತತ ಎರಡು ವರ್ಷ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ತಾರೆ ಯಾರು?
ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲವೆಂದು ಸುಧಾ ಮೂರ್ತಿ ಅವರು ಕ್ವಿಟ್ ಮಾಡುವುದಾಗಿ ತಿಳಿಸಿದರು. ಅಲ್ಲದೆ ಉತ್ತರವನ್ನು ಊಹಿಸುತ್ತಿದ್ದೇನೆ ಎಂದು ಬಾಲಿವುಡ್ ನಟಿ ಕಾಜೋಲ್ ಹೆಸರು ಹೇಳಿದರು. ಆದರೆ ಉತ್ತರ ತಪ್ಪಾಗಿತ್ತು. ಸರಿಯಾದ ಉತ್ತರ ಜಯಾ ಬಚ್ಚನ್ . ಮೊದಲೇ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರಿಂದ ಸುಧಾ ಮೂರ್ತಿ ಅವರು ಅಂತಿಮವಾಗಿ 2,50,0000 ರೂ. ಬಹುಮಾನವಾಗಿ ಪಡೆದುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ