ಕಳ್ಳನೊಬ್ಬನ ಕಥೆ : ಗಮನ ಸೆಳೆಯುತ್ತಿರುವ ಅದ್ಭುತ ಟ್ರೇಲರ್

news18
Updated:July 15, 2018, 8:05 PM IST
ಕಳ್ಳನೊಬ್ಬನ ಕಥೆ : ಗಮನ ಸೆಳೆಯುತ್ತಿರುವ ಅದ್ಭುತ ಟ್ರೇಲರ್
news18
Updated: July 15, 2018, 8:05 PM IST
-ನ್ಯೂಸ್ 18 ಕನ್ನಡ

'ಪ್ರೇಮಂ' ಚಿತ್ರನಟ ನಿವಿನ್ ಪೌಲಿ ಕಥೆಯ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಎಂಬ ಮಾತಿದೆ. ಇದಕ್ಕೆ ಹೊಸ ನಿದರ್ಶನ ಎಂಬಂತೆ ಮಲಯಾಳಂನಲ್ಲಿ 'ಕಾಯಂಕುಲಂ ಕೊಚ್ಚುನ್ನಿ' ಎಂಬ ಚಿತ್ರವೊಂದು ತಯಾರಾಗಿದೆ.  1830 ರಲ್ಲಿ ನಡೆದ ನೈಜಘಟನಾಧಾರಿತ ಈ ಸಿನಿಮಾಗೆ ನಿವಿನ್ ಪೌಲಿ ನಾಯಕ. ರೋಶನ್ ಆ್ಯಂಡ್ರೋಸ್ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್ ಮಾಲಿವುಡ್​ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ.

ಸಾಹಸಭರಿತ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಿವಿನ್ ಪೌಲಿ 18ನೇ ಶತಮಾನದ ಪ್ರಸಿದ್ದ ಕಳ್ಳ ಕಾಯಂಕುಲಂ ಕೊಚ್ಚುನ್ನಿ ಪಾತ್ರವನ್ನು ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಕಂಪ್ಲೀಟ್ ಆ್ಯಕ್ಟರ್ ಮೋಹನ್​ ಲಾಲ್ ಕೂಡ ಕಾಣಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟವಾಗುವಂತೆ ಮಾಡಿದೆ.


18ನೇ ಶತಮಾನದಲ್ಲಿ ಕೇರಳದ ಕಾಯಂಕುಲಂ ಭಾಗದ ಬಡವರ ಪಾಲಿನ ನಾಯಕನೆಂದು ಕೊಚ್ಚುನ್ನಿ ಖ್ಯಾತಿ ಪಡೆದಿದ್ದನು. ಶ್ರೀಮಂತರಿಂದ ಕದ್ದ ವಸ್ತುಗಳನ್ನು ದೀನ ದಲಿತರಿಗೆ ಹಂಚುತ್ತಿದ್ದರು. ಅಲ್ಲದೆ ಸಮಾಜ ಸುಧಾರಣೆಗೆ ಕಳ್ಳತನದ ಮೂಲಕ ಉತ್ತರ ಕಂಡುಕೊಳ್ಳಲು ಕೊಚ್ಚುನ್ನಿ ಪ್ರಯತ್ನಿಸಿದ್ದರು ಎಂಬ ಕಥೆಯಿದೆ.

1830ರ ಕೇರಳದ ರಾಬಿನ್ ಹುಡ್ ಎಂದು ಖ್ಯಾತಿ ಪಡೆದ ಕೊಚ್ಚುನ್ನಿ ಬ್ರಿಟಿಷರಿಗೂ ಸಿಂಹ ಸ್ವಪ್ನವಾಗಿ ಕಾಡಿದ್ದರು. ತೆರೆಮರೆಯಲ್ಲೇ ಉಳಿದಿದ್ದ ಕಳ್ಳಕೊಚ್ಚುನ್ನಿಯ ಕಥೆಗೆ ಚಿತ್ರಕಥೆಯ ರೂಪ ಕೊಟ್ಟಿದ್ದು ಬಾಬಿ-ಸಂಜಯ್ ಜೋಡಿ.

ನೋಟ್​ಬುಕ್ ಖ್ಯಾತಿಯ ನಿರ್ದೇಶಕ ರೋಶನ್ ಆ್ಯಂಡ್ರೋಸ್ 188 ವರ್ಷಗಳ ಹಿಂದಿನ ದೃಶ್ಯಾವಳಿಗಳನ್ನು ಮರುಸೃಷ್ಟಿಸಲು ಯಶಸ್ವಿಯಾಗಿದ್ದು, ಈ ಚಿತ್ರದ ಗ್ರಾಫಿಕ್ಸ್ ಮತ್ತು ಲೊಕೇಶನ್​ಗಳು ಬಾಹುಬಲಿ ಚಿತ್ರದಂತೆ ಅದ್ದೂರಿಯಾಗಿ ಮೂಡಿಬಂದಿದೆ.
Loading...

ಕರ್ನಾಟಕ, ಕೇರಳ ಮತ್ತು ಶ್ರೀಲಂಕಾದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದು, ಸಿನಿಮಾದ ಒಟ್ಟು ಬಜೆಟ್ 45 ಕೋಟಿ ದಾಟಿದೆ ಎನ್ನಲಾಗಿದೆ. ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಈ ಸಿನಿಮಾಗಾಗಿ ಬಂಡವಾಳ ಹೂಡಿದ್ದಾರೆ.

ಬಾಲಿವುಡ್​ನ ದೇವದಾಸ್​ ಚಿತ್ರ ಖ್ಯಾತಿಯ ಛಾಯಾಗ್ರಾಹಕ ಬಿನೋದ್ ಪ್ರಧಾನ್ ಕ್ಯಾಮೆರಾ ಕೈಚಳಕ ತೋರಿಸಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಬಾಹುಬಲಿ ಚಿತ್ರದ ಸೌಂಡ್​ ಡಿಸೈನರ್ ಪಿ.ಎಂ ಸತೀಶ್ ಸಹ ಈ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಕನ್ನಡ ನಟಿ ಪ್ರಿಯಾಂಕಾ, ಸನ್ನಿ ವೇಯ್ನ್, ಬಾಬು ಆಂಟೋನಿ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಐತಿಹಾಸಿಕ ಚಿತ್ರವನ್ನು ಓನಂ ಹಬ್ಬದಂದು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...