ಬಿಗ್ಬಾಸ್ ಸೀಸನ್ 9 (Bigg Boss season 9) ಸಖತ್ತಾಗಿ ನಡೆದಿದೆ. ಇದರಲ್ಲಿ ಪ್ರವೀಣರೂ ನವೀನರೂ ಸೇರಿ ಅವರ ನಡುವಿನ ಸ್ಪರ್ಧೆ, ಆಟ ಎಲ್ಲವೂ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಇದಕ್ಕೆ ಕನ್ನಡ ಪ್ರೇಕ್ಷಕರು ಕೂಡಾ ಫಿದಾ ಆಗಿದ್ದರು. ರೂಪೇಶ್ ಶೆಟ್ಟಿ (Roopesh Shetty) ಬಿಗ್ಬಾಸ್ ಮನೆಯೊಳಗೆ ಎಲ್ಲರೊಂದಿಗೆ ಕ್ಲೋಸ್ ಆಗಿದ್ದರು. ಹಾಗೆಯೇ ಮಂಗಳ ಗೌರಿ ಮದುವೆ ಧಾರವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ (Kavyashree Gowda) ಅವರೂ ಬಿಗ್ಬಾಸ್ (Bigg Boss) ಮನೆಗೆ ಹೋಗಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿದರು. ಇದೀಗ ಬಿಗ್ಬಾಸ್ ಸೀಸನ್ ಮುಗಿದು ರೂಪೇಶ್ ಶೆಟ್ಟಿ ಕಪ್ ಗೆದ್ದುಕೊಂಡು ಹೊರಬಂದಿದ್ದಾರೆ. ಗೇಮ್ ಮುಗಿದ ನಂತರ ಈಗ ಸೀಸನ್ನ ಸ್ಪರ್ಧಿಗಳು ಹಲವೆಡೆ ಭೇಟಿಯಾಗುತ್ತಿದ್ದಾರೆ.
ಬಿಗ್ಬಾಸ್ ಖ್ಯಾತಿಯ ಕಾವ್ಯಶ್ರೀ ಗೌಡ ಹಾಗೂ ರೂಪೇಶ್ ಶೆಟ್ಟಿ ಜೊತೆಯಾಗಿ ರೀಲ್ಸ್ ಮಾಡಿದ್ದು ಅವರ ರೀಲ್ಸ್ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಅವರ ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ.
ಕಾವ್ಯಶ್ರೀ ಗೌಡ ಹಾಗೂ ರೂಪೇಶ್ ಶೆಟ್ಟಿ ಅವರೂ ಕೂಡಾ ಒಂದು ಕಡೆಯಲ್ಲಿ ಭೇಟಿಯಾಗಿದ್ದು ಅವರು ಜೊತೆಯಾಗಿ ಕನ್ನಡ ಸಾಂಗ್ ಒಂದಕ್ಕೆ ರೀಲ್ಸ್ ಕೂಡಾ ಮಾಡಿದ್ದಾರೆ.
ಆದರೆ ರೊಮ್ಯಾಂಟಿಕ್ ಹಾಡಿಗೆ ಕಾವ್ಯಶ್ರೀ ಅವರು ರೂಪೇಶ್ ಶೆಟ್ಟಿ ಜೊತೆ ರೀಲ್ಸ್ ಮಾಡಿದ್ದು ನೆಟ್ಟಿಗರಿಗೆ ಮಾತ್ರ ಇಷ್ಟ ಆಗಿಲ್ಲ. ರೂಪೇಶ್ ಶೆಟ್ಟಿ ಜೊತೆ ಸಾನ್ಯಾ ಐಯ್ಯರ್ ಮಾತ್ರ ರೊಮ್ಯಾಂಟಿಕ್ ಆಗಿರಬೇಕು ಎಂದು ಹಾಡು ಬದಲಾಯಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Anchor Anushree: ಅನುಶ್ರೀಗೆ ಸಾಲು ಸಾಲು ಮದುವೆ ಪ್ರಪೋಸಲ್, ಎಷ್ಟೊಂದು ಆಫರ್ ಅಂತ ನಿರೂಪಕಿ ಶಾಕ್!
ವೈರಲ್ ಆಯ್ತು ವಿಡಿಯೋ
ವಿಡಿಯೋಗೆ 91 ಸಾವಿರ ಲೈಕ್ಸ್ ಬಂದಿದ್ದು 100ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ನೀವು ದೇವರು ಕೊಟ್ಟ ತಂಗಿ, ಸಾನ್ಯಾ ರೂಪಿಯ ಪರ್ಫೆಕ್ಟ್ ಜೋಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಬಿಗ್ಬಾಸ್ ಮನೆಯಲ್ಲಿ ರೂಪಿಗೆ ಎಲ್ಲರೂ ಫ್ರೆಂಡ್ಸ್
ನಟ ರೂಪೇಶ್ ಶೆಟ್ಟಿಗೆ ಬಿಗ್ಬಾಸ್ ಮನೆಯಲ್ಲಿ ಎಲ್ಲರೂ ಸ್ನೇಹಿತರೇ. ಅಲ್ಲಿದ್ದ ಸ್ಪರ್ಧಿಗಳ ಜೊತೆ ಎಲ್ಲರೊಂದಿಗೂ ಚೆನ್ನಾಗಿದ್ದ ರೂಪೇಶ್ ಶೆಟ್ಟಿ ಅವರು ಅಲ್ಲಿಂದ ಹೊರಬಂದ ಮೇಲೆಯೂ ಹಾಗೆಯೇ ಇದ್ದಾರೆ. ಅವರ ಹಳೆ ಸಹ ಸ್ಪರ್ಧಿಗಳನ್ನು ಭೇಟಿ ಮಾಡಿದ್ದಾರೆ.
ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ ವಿಜಯಯಾತ್ರೆ
ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ ಅವರ ಗೆಲುವನ್ನು ಸಂಭ್ರಮಿಸಲಾಗಿದೆ. ಇತ್ತೀಚೆಗೆ ರೂಪೇಶ್ ಶೆಟ್ಟಿ ಅವರ ವಿಜಯಯಾತ್ರೆಯನ್ನು ನಡೆಸಲಾಗಿದ್ದು ರೋಡ್ ಶೋ, ಮೆರವಣಿಗೆಯಲ್ಲಿ ರೂಪೇಶ್ ಸಖತ್ತಾಗಿ ಮಿಂಚಿದ್ದರು. ಅವರ ಅಭಿಮಾನಿಗಳೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾವ್ಯಶ್ರೀ ಗೌಡ ಅವರು ಮನೆಯೊಳಗೆ ಆ್ಯಕ್ಟಿವ್ ಆಗಿದ್ದರೂ ಅಷ್ಟೊಂದು ಇಂಟ್ರೆಸ್ಟಿಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಎಲಿಮಿನೇಟ್ ಆದಾಗ ನೀವು ಎಲಿಮಿನೇಟ್ ಆಗಿದ್ದು ಅಚ್ಚರಿಯಲ್ಲ, ಇಷ್ಟೊಂದು ದಿನ ಎಲಿಮಿನೇಟ್ ಆಗದೆ ಮನೆಯೊಳಗೆ ಹೇಗೆ ಉಳಿದುಕೊಂಡಿದ್ರಿ ಅಂತ ಅಚ್ಚರಿಯಾಗಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ