ಬಿಡುಗಡೆ ಆಯಿತು ಪುನೀತ್​ ನಿರ್ಮಾಣದ 'ಕವಲುದಾರಿ' ಸಿನಿಮಾದ ಟ್ರೇಲರ್​..!

news18
Updated:September 3, 2018, 5:26 PM IST
ಬಿಡುಗಡೆ ಆಯಿತು ಪುನೀತ್​ ನಿರ್ಮಾಣದ 'ಕವಲುದಾರಿ' ಸಿನಿಮಾದ ಟ್ರೇಲರ್​..!
news18
Updated: September 3, 2018, 5:26 PM IST
ನ್ಯೂಸ್ 18 ಕನ್ನಡ 

`ಗೋಧಿ ಬಣ್ಣ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದಲ್ಲಿ 'ಕವಲುದಾರಿ' ಚಿತ್ರವನ್ನ ಪುನೀತ್​ ರಾಜ್​ಕುಮಾರ್​ ನಿರ್ಮಾಣ ಮಾಡುತ್ತಿದ್ದಾರೆ ಅಂದಾಗಲೇ ಆ ಸಿನಿಮಾದಲ್ಲಿ ಏನೋ ವಿಶೇಷವಿದೆ ಇರುತ್ತೆ ಅಂತ ಚಿತ್ರ ಪ್ರೇಮಿಗಳು ನಿರೀಕ್ಷೆ ಮಾಡಿದ್ದರು. ಸದ್ಯ 'ಕವಲು ದಾರಿ' ಚಿತ್ರದ ಟ್ರೇಲರ್ ರಿಲೀಸಾಗಿದೆ. ಪುನೀತ್ ಈ ಸಿನಿಮಾ ಯಾವ ಕಾರಣಕ್ಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಉತ್ತರ ನೀಡುವಂತಿದೆ ಈ ಟ್ರೇಲರ್​.

ಪುನೀತ್ ಕನ್ನಡ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಅಂತಲೇ ಕರೆಸಿಕೊಳ್ಳುವ ನಟ. ಅವರು ಏನೇ ಮಾಡಿದರೂ ಅದಕ್ಕೊಂದು ತೂಕವಿರುತ್ತೆ. ಅದರದ್ದೇ ಆದ ಮಹತ್ವ ಇರುತ್ತೆ. 'ಕವಲು ದಾರಿ' ಚಿತ್ರ ಅದಕ್ಕೆ ಮತ್ತೊಂದು ಉದಾಹರಣೆ. ಈ ಸಿನಿಮಾ ಮುಲಕ ಪವರ್​ ಸ್ಟಾರ್​ ಪುನೀತ್ ತಮ್ಮದೇ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ್ದು, ಮೊದಲ ಹೆಜ್ಜೆಯಲ್ಲಿಯೇ ಕನ್ನಡಕ್ಕೆ ಒಂದು ಅದ್ಭುತ ಚಿತ್ರವನ್ನ ಕೊಡುವ ಲಕ್ಷಣಗಳು ಸದ್ಯ ಬಿಡುಗಡೆಯಾಗಿರೋ ಟ್ರೇಲರ್​ನಲ್ಲೇ ಗೋಚರಿಸುತ್ತಿವೆ.ಅಂದಹಾಗೆ ಗೋಧಿ ಬಣ್ಣ ಖ್ಯಾತಿಯ ಹೇಮಂತ್ ರಾವ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಇದೊಂದು ಪತ್ತೆದಾರಿ ಕಥಾಹಂದರ ಹೊಂದಿದೆ ಅನ್ನೋದನ್ನ ಟ್ರೇಲರ್​ ಹೇಳುತ್ತಿದೆ. ಕಾಮಗಾರಿಯೊಂದನ್ನ ಮಾಡುವಾಗ ಒಂದಷ್ಟು ಮೂಳೆಗಳು ಸಿಗುತ್ತವೆ. ಅವು ಯಾರವು, ಅಲ್ಲಿ ಯಾಕೆ ಮಣ್ಣಿನಲ್ಲಿ ಹೂತು ಹೋಗಿದ್ದವು ಎನ್ನುವುದರ ರಹಸ್ಯ ಬೇಧಿಸುವ ಕಥೆಯನ್ನ ಹೊಂದಿದೆ ಈ ಸಿನಿಮಾ.

ಇನ್ನು 'ಆಪರೇಷನ್ ಅಲಮೇಲಮ್ಮ' ಚಿತ್ರದಿಂದ ಸ್ಯಾಂಡಲ್‍ವುಡ್‍ನ ಭರವಸೆಯ ನಟನಾಗಿ ಹೊಮ್ಮಿರೋ ರಿಷಿ ಇಲ್ಲಿ ಟ್ರಾಫಿಕ್ ಪೋಲಿಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಚ್ಯುತ್‍ರಾವ್, ಅನಂತ್‍ನಾಗ್ ಅವರು ಸಹ ಪ್ರಮುಖ ಪಾತ್ರಗಳಲ್ಲಿ  ರೋಲ್‍ಗಳಲ್ಲಿ ಅಭಿನಯಿಸಿದ್ದಾರೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626