Kavaludaari Rishi: ಕವಲುದಾರಿಯ ಟ್ರಾಫಿಕ್ ಇನ್​ಸ್ಪೆಕ್ಟರ್ ಈಗ ಗ್ರೇ ಶೇಡ್ ಸೂಪರ್ ಹೀರೋ!

ಕವಲುದಾರಿ ಹೀರೋ ರಿಷಿ ತೆಲುಗು ವೆಬ್ ಸಿರೀಸ್ ನಲ್ಲಿ ಗ್ರೇ ಶೇಡ್ ಇರೋ ಹೀರೋ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸೀರಿಸ್ ಈ ವರ್ಷದ ಕೊನೆಯಲ್ಲಿ ಹಾಟ್ ಸ್ಟಾರ್​ ನಲ್ಲಿ ಪ್ರಸಾರ ಆಗುತ್ತದೆ.

ಕವಲುದಾರಿ ರಿಷಿ ಹೊಸ ಪಯಣ

ಕವಲುದಾರಿ ರಿಷಿ ಹೊಸ ಪಯಣ

  • Share this:
ಕನ್ನಡದ ಕವಲುದಾರಿ (Kavaludaari Rishi) ಸಿನಿಮಾ ವಿಶೇಷವಾಗಿಯೇ ಇತ್ತು. ಥಿಯೇಟರ್​ ಗೆ (Theater) ಬರೋದಲ್ಲದೇ, ಓಟಿಟಿ (OTT) ಪ್ಲಾಟ್​ಫಾರಂಗೂ ಬಂದು ಒಳ್ಳೆ ಸಿನಿಮಾ ಆರಾಧಿಸೋ ಪ್ರೇಕ್ಷಕರ ಹೃದಯ ಕದ್ದಿತ್ತು. ಅದೇ ಚಿತ್ರದಲ್ಲಿ ಅಭಿನಯಿಸಿದ್ದ ನಾಯಕ ನಟ ರಿಷಿ ಎಲ್ಲರ ಫೇವರಿಟ್ ಆಕ್ಟರ್ ಆಗಿ ಬಿಟ್ಟರು. ಜೊತೆಗೆ ಕವಲುದಾರಿ ಚಿತ್ರದ ಬಳಿಕ ರಿಷಿಗೆ (Actor Rishi) ಆಫರ್​ಗಳ ಸುರಿಮಳೆನೆ ಆಯಿತು.ಹಾಗೆ ಬಂದ ಹಲವು ಪ್ರೋಜೆಕ್ಟರ್​ಗಳಲ್ಲಿ ಸದ್ಯ ರಿಷಿ ಬಹು ಭಾಷೆಯಲ್ಲಿಯೇ ರಿಲೀಸ್ ಆಗೋ ಒಂದು ತೆಲುಗು ವೆಬ್ ಸರಣಿ ಮುಗಿಸಿಕೊಂಡು ಬಂದಿದ್ದಾರೆ. ನಮ್ಮೊಟ್ಟಿಗೆ ಇನ್ನು ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ.

ಕವಲುದಾರಿ ಚಿತ್ರಕ್ಕೂ ಮುಂಚೆ ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ರಿಷಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದರಲ್ಲೂ ಖಾಸಗಿ ವಾಹಿನಿಯಲ್ಲಿ ಬಂದ ಅನುರೂಪ ಸೀರಿಯಲ್​ ನಿಂದಲೂ ಜನರ ಮೆಚ್ಚುಗೆ ಪಡೆದಿದ್ದರು. ಅದೇ ರಿಷಿ ಈಗ ಫಸ್ಟ್ ಟೈಮ್ ಟಾಲಿವುಡ್​ ಗೂ ಕಾಲಿಟ್ಟಿದ್ದಾರೆ. ಇನ್ನೂ ಹೆಸರು ಫೈನಲ್ ಆಗದೇ ಇರೋ ಈ ವೆಬ್ ಸಿರೀಸ್ ವಿಶೇಷವಾಗಿಯೇ ಇದೆ. ಇದನ್ನ ಕನ್ನಡ ಸೇರಿದಂತೆ ಇತರ ಭಾಷೆಯಲ್ಲೂ ಹಾಟ್ ಸ್ಟಾರ್​ನಲ್ಲಿ ಇದು ಪ್ರಸಾರ ಆಗುತ್ತದೆ.

ಕವಲುದಾರಿ ಚಿತ್ರದಿಂದಲೇ ಹುಡುಕಿ ಬಂತು ವೆಬ್​ ಸಿರೀಸ್ ಆಫರ್
ಕವಲುದಾರಿ ಸಿನಿಮಾದಲ್ಲಿ ರಿಷಿ ಅಭಿನಯ ಅದ್ಭುತವಾಗಿಯೇ ಇತ್ತು. ಜನ ಮೆಚ್ಚುಗೆನೂ ಪಡೆಯಿತು. ಓಟಿಟಿ ಪ್ಲಾಟ್​ಫಾರಂನಲ್ಲಿ ಸಿನಿಮಾ ಬಂದ್ಮೇಲೆ ಚಿತ್ರ ಪ್ರೇಮಿಗಳು ರಿಷಿಯನ್ನ ಒಪ್ಪಿಕೊಂಡಿರು. ಕ್ರಿಟಿಕ್ಸ್ ಅವಾರ್ಡ್ ಕೊಟ್ಟು ಗೌರವಿಸಿದರು. ಅದರ ಜೊತೆಗೆ ತೆಲುಗು ಭಾಷೆಯ 10 ಎಪಿಸೋಡ್​ಗಳ ವೆಬ್​ ಸಿರೀಸ್ ಆಫರ್ ಕೂಡ ಬಂದೇ ಬಿಡ್ತು.ಅದೇ ವೆಬ್​ ಸಿರೀಸ್​ನ ಚಿತ್ರೀಕರಣದ ಕೆಲಸವನ್ನ ರಿಷಿ ಈಗ ಮುಗಿಸಿಕೊಂಡು ಬಂದಿದ್ದಾರೆ.

Kannada Actor Rishi Acted In Telugu Web Series
ಕನ್ನಡ ರಿಷಿಯ ತೆಲುಗು  ಮೊದಲ ವೆಬ್ ಸಿರೀಸ್


ಕವಲುದಾರಿ ಟ್ರಾಫಿಕ್ ಇನ್​ಸ್ಪೆಕ್ಟರ್ ಈಗ ಗ್ರೇ ಶೇಡ್ ವಿಲನ್
ರಿಷಿ ಅಭಿನಯದ ವೆಬ್ ಸಿರೀಸ್ ಒಂದು ಕ್ರೈಂ ಡ್ರಾಮಾನೇ ಆಗಿದೆ. ಇದೇ ವೆಬ್ ಸಿರೀಸ್ ನಲ್ಲಿಯೇ ರಿಷಿ ಲೀಡ್ ರೋಲ್ ಮಾಡುತ್ತಿದ್ದಾರೆ. ಆದರೆ, ಈ ಒಂದು ಹೀರೋ ಪಾತ್ರಕ್ಕೆ ಗ್ರೇ ಶೇಡ್ ಕೂಡ ಇದೆ. ಅಂದ್ರೆ, ವಿಲನ್ ಪಾತ್ರದಲ್ಲಿಯೇ ರಿಷಿ ಇಲ್ಲಿ ಈ ಸಲ ಬೇರೆ ಖದರ್ ತೋರಲಿದ್ದಾರೆ. ಆದರೆ ಈ ಒಂದು ವೆಬ್ ಸಿರೀಸ್​ ಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಅದು ಶೀಘ್ರದಲ್ಲಿಯೇ ಫೈನಲ್ ಆಗಲಿದೆ.

ರಿಷಿಯ ರಾಮನ ಅವತಾರ ಯಾವಾಗ ರಿಲೀಸ್?
ನಾಯಕ ನಟ ರಿಷಿ ರಾಮನ ಅವತಾರ ಚಿತ್ರ ಈಗಾಗಲೇ ಅನೌನ್ಸ್ ಆಗಿದೆ. ಇದರ ಫೋಸ್ಟರ್ ಕೂಡ ರಿವೀಲ್ ಆಗಿದೆ. ಆದರೆ ಈ ಸಿನಿಮಾ ಎಲ್ಲಿಗೆ ಬಂತು ಅನ್ನೋರಿಗೆ ಸ್ವತಃ ರಿಷಿ ಒಂದಷ್ಟು ಮಾಹಿತಿಕೊಟ್ಟಿದ್ದಾರೆ. ರಾಮನ ಅವತಾರ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಆಲ್​ ಮೋಸ್ಟ್ ಕೊನೆ ಹಂತದಲ್ಲಿಯೇ ಇದೆ. ಇನ್ನೇನೂ ಕೆಲವೇ ದಿನಗಳಲ್ಲಿ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತದೆ ಅಂತಲೇ ರಿಷಿ ಹೇಳಿಕೊಂಡಿದ್ದಾರೆ.

ರಾಮನ ಅವತಾರದ ಹಿಂದೆ ಯುಟ್ಯೂಬರ್ ಪಂಪಾಪತಿ 
ರಾಮನ ಅವತಾರ ಚಿತ್ರವನ್ನ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ವಿಕಾಸ್ ಪಂಪಾಪತಿ ಈ ಹಿಂದೆ ಯುಟ್ಯೂಬ್​ ನಲ್ಲಿ ತಮ್ಮದೇ ಒಂದು ಚಾನಲ್ ಮಾಡಿಕೊಂಡು ಹೆಸರಾದವರು.ಈ ಮೂಲಕ ಫ್ಯಾಮಿಲಿ ಎಂಟರಟೈನರ್ ಸಿನಿಮಾ ಕೊಡ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಈ ಚಿತ್ರದ ರಿಲೀಸ್ ಪ್ಲಾನಿಂಗ್ ಕೂಡ ಆಗುತ್ತಿದ್ದು ರಿಷಿ ಇಲ್ಲೂ ವಿಭಿನ್ನವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
First published: