KBC 14: ಕೌನ್ ಬನೇಗಾ ಕರೋಡ್‌ಪತಿ ಶೋ ಗೆದ್ರೆ ಹಣದ ಜೊತೆ ಬಂಪರ್ ಬಹುಮಾನ!

ಈಗಾಗಲೇ ನಮಗೆಲ್ಲರಿಗೂ ಕೌನ್ ಬನೇಗಾ ಕರೋಡ್‌ಪತಿ ಶೋ ತಿಳಿದಿರುವ ಶೋನ ಫಾರ್ಮ್ಯಾಟ್ ನಲ್ಲಿ ಗೆದ್ದವರಿಗೆ 1 ಕೋಟಿ ರೂಪಾಯಿಗಳನ್ನು ಬಹುಮಾನದ ಮೊತ್ತವಾಗಿ ನೀಡಲಾಗುತ್ತಿತ್ತು. ಆದರೆ ಈಗ ಗೆದ್ದಿರುವ ಸ್ಪರ್ಧಿಗಳು ಕೋಟಿ ರೂಪಾಯಿ ಹಣದೊಂದಿಗೆ ಒಂದು ಕಾರನ್ನು ಸಹ ಪಡೆಯುತ್ತಾರೆ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಅಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಹೇಳಿದರು.

ಕೌನ್ ಬನೇಗಾ ಕರೋಡ್‌ಪತಿ 14

ಕೌನ್ ಬನೇಗಾ ಕರೋಡ್‌ಪತಿ 14

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ ಕೌನ್ ಬನೇಗಾ ಕರೋಡ್‌‌ಪತಿ 14 (Kaun Banega Crorepati ) ಶೋ ಬಗ್ಗೆಯೇ ಚರ್ಚೆ ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರು ಮತ್ತೊಮ್ಮೆ ಕೆಬಿಸಿಯ ನಿರೂಪಕರಾಗಿ ಮರಳಿದ್ದಾರೆ. ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋ ಇತಿಹಾಸದಲ್ಲಿ 14ನೇ ಆವೃತ್ತಿಯ 233ನೇ ಪ್ರೀಮಿಯರ್ ಎಪಿಸೋಡ್ ಅನ್ನು 75ನೇ ಸ್ವಾತಂತ್ರ್ಯ ದಿನಾಚರಣೆಯ (Independence day) ಅಂಗವಾಗಿ "ಆಜಾದಿ ಕೆ ಗರ್ವ್ ಕಾ ಮಹಾಪರ್ವ್" ಎಂದು ಕರೆಯಲಾಗಿದೆ ಮತ್ತು ಈ ವಿಶೇಷ ಸಂಚಿಕೆಯಲ್ಲಿ ವಿಶೇಷವಾಗಿ ಸಾಧನೆಗೈದ ವ್ಯಕ್ತಿಗಳನ್ನು ಶೋ ಗೆ ಆಹ್ವಾನಿಸಿ ಅವರೊಂದಿಗೆ ಈ ಶೋ ಮಾಡಲಾಗಿದೆ. ಆಗಸ್ಟ್ 7 ರಂದು ಈ ಕಾರ್ಯಕ್ರಮ ಪ್ರಥಮ ಪ್ರದರ್ಶನ ಕಂಡಿತು ಮತ್ತು ಅಂದು ಸ್ಪರ್ಧಿಗಳನ್ನು ಒಳಗೊಂಡ ಮೊದಲ ಸಂಚಿಕೆಯಾಗಿತ್ತು.

ನಿರೂಪಕ ಅಮಿತಾಭ್ ಬಚ್ಚನ್ 10 ಸ್ಪರ್ಧಿಗಳೊಂದಿಗೆ ಮೊದಲ ಬಾರಿಗೆ ‘ಫಾಸ್ಟೆಸ್ಟ್ ಫಿಂಗರ್ ಫಸ್ಟ್’ ಅನ್ನು ಆಡಿದರು ಮತ್ತು ಛತ್ತೀಸ್‌ಘಡ್ ದ ದುರ್ಗ್ ನ ಧುಲಿಚಂದ್ ಅಗರ್ವಾಲ್ ಅವರು ಹಾಟ್‌ಸೀಟ್ ನಲ್ಲಿ ಸ್ಥಾನ ಪಡೆದರು. ಆಟದ ಸ್ವರೂಪದಲ್ಲಿ ನಿಯಮಗಳು ಮತ್ತು ಹೊಸ ಬದಲಾವಣೆಗಳ ಬಗ್ಗೆ ಅಮಿತಾಭ್ ಬಚ್ಚನ್ ಅವರು ಎಲ್ಲರಿಗೂ ಮಾಹಿತಿ ನೀಡಿದರು.

ಗೆದ್ದವರಿಗೆ 1 ಕೋಟಿ ರೂಪಾಯಿ ಜೊತೆಗೆ ಕಾರು ಕೊಡ್ತಾರೆ

ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ಶೋನ ಫಾರ್ಮ್ಯಾಟ್ ನಲ್ಲಿ ಗೆದ್ದವರಿಗೆ 1 ಕೋಟಿ ರೂಪಾಯಿಗಳನ್ನು ಬಹುಮಾನದ ಮೊತ್ತವಾಗಿ ನೀಡಲಾಗುತ್ತಿತ್ತು. ಆದರೆ ಈಗ ಗೆದ್ದಿರುವ ಸ್ಪರ್ಧಿಗಳು ಕೋಟಿ ರೂಪಾಯಿ ಹಣದೊಂದಿಗೆ ಒಂದು ಕಾರನ್ನು ಸಹ ಪಡೆಯುತ್ತಾರೆ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಅಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಹೇಳಿದರು. 7.5 ಕೋಟಿ ರೂಪಾಯಿಗಳ ವಿಜೇತರು ಸಹ ಒಂದು ಕಾರನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಆ ಕಾರು ಬೇರೆ ಮಾದರಿಯ ಕಾರು ಆಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Alia Bhatt: ತಾಯಿಯಾಗುತ್ತಿರುವ ಆಲಿಯಾಳದ್ದು ಧೈರ್ಯಶಾಲಿ ನಿರ್ಧಾರ! ಕರೀನಾ ಕಪೂರ್ ಮೆಚ್ಚುಗೆ ಮಾತು

ಈ ಋತುವಿನಲ್ಲಿ ಆಟವು ಮತ್ತೊಮ್ಮೆ 4 ರ ಬದಲು 3 ಲೈಫ್ ಲೈನ್ ಗಳನ್ನು ಹೊಂದಿರುತ್ತದೆ. ಮೂಲತಃ, ಪ್ರದರ್ಶನವು ಪ್ರಥಮ ಪ್ರದರ್ಶನಗೊಂಡಾಗ, ಇದು 3 ಲೈಫ್ ಲೈನ್ ಗಳನ್ನು ಹೊಂದಿತ್ತು ಮತ್ತು ಸೀಸನ್ 4 ರಿಂದ 'ಆಸ್ಕ್ ದಿ ಎಕ್ಸ್ಪರ್ಟ್' ಲೈಫ್ ಲೈನ್ ಅನ್ನು ಹೊಸದಾಗಿ ಸೇರಿಸಲಾಯಿತು. ಈ ಋತುವಿನಲ್ಲಿ ಈ ಲೈಫ್ ಲೈನ್ ಇರುವುದಿಲ್ಲ ಎಂದು ಅಮಿತಾಭ್ ಹೇಳಿದರು.

'ಫೋನ್ ಎ ಫ್ರೆಂಡ್' ಲೈಫ್ ಲೈನ್ ಇಲ್ಲ

ಈ ಶೋದಲ್ಲಿರುವ 'ಫೋನ್ ಎ ಫ್ರೆಂಡ್' ಲೈಫ್ ಲೈನ್ ನ ಬದಲಿಗೆ, ಶೋನ ತಯಾರಕರು ಅದನ್ನು 'ವಿಡಿಯೋ ಕಾಲ್ ಎ ಫ್ರೆಂಡ್' ಎಂದು ಬದಲಾಯಿಸಿದ್ದಾರೆ. ಸ್ಪರ್ಧಿಗಳು ಮೊದಲೇ ನೀಡಿದ 3 ಸಂಪರ್ಕಗಳಲ್ಲಿ, ಅವರು ಆಟದಲ್ಲಿ ಯಾವುದಾದರೂ ಒಂದು ಪ್ರಶ್ನೆಯಲ್ಲಿ ಉತ್ತರ ಅರ್ಥವಾಗದೆ ಸಿಲುಕಿಕೊಂಡರೆ ಆ ಉತ್ತರವನ್ನು ಕಂಡುಕೊಳ್ಳಲು ಸಹಾಯ ಪಡೆಯಲು ಅವರು ನೀಡಿದ ಮೂವರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಡಿಯೋ ಕರೆ ಮಾಡಿ ಉತ್ತರ ತಿಳಿದುಕೊಳ್ಳಬಹುದು.

ಇದನ್ನೂ ಓದಿ:  Rishabh Pant: ನನ್ನ ಹೆಸರು ಬಳಸಿ ಫೇಮಸ್​ ಆಗ್ತಿದ್ದಾರೆ! ಬಾಲಿವುಡ್​ ಖ್ಯಾತ ನಟಿ ಹೆಸರು ಹೇಳದೇ ಟಾಂಗ್​ ಕೊಟ್ಟ ಪಂತ್​!

ಈ ಎಪಿಸೋಡ್ ನಲ್ಲಿ ಧುಲಿಚಂದ್ ಒಂದು ಪ್ರಶ್ನೆಗೆ ಲೈಫ್ ಲೈನ್ ಅನ್ನು ಬಳಸುತ್ತಾರೆ ಮತ್ತು ಉತ್ತರವನ್ನು ಲಾಕ್ ಮಾಡಲು 60 ಸೆಕೆಂಡುಗಳ ನಂತರ ಕರೆ ಬೀಳುತ್ತದೆ, ಆದರೆ ವಿಡಿಯೋ ಕರೆಯಲ್ಲಿರುವ ವ್ಯಕ್ತಿಯು ಉತ್ತರವನ್ನು ಬಹಿರಂಗಪಡಿಸುವವರೆಗೆ ಹಾಗೆಯೇ ಉಳಿಯುತ್ತಾರೆ. ಈ ಸೇರ್ಪಡೆಗಳು ಮತ್ತು ಬದಲಾವಣೆಗಳ ಹೊರತಾಗಿ, ಒಬ್ಬ ಸ್ಪರ್ಧಿಯು 7.5 ಕೋಟಿ ರೂಪಾಯಿಯ ಪ್ರಶ್ನೆಗೆ ಉತ್ತರಿಸಲು ವಿಫಲವಾದರೆ, ಅವರು ಹಿಂದಿನ ಸೀಸನ್ ಗಿಂತಲೂ ಭಿನ್ನವಾಗಿ ಕನಿಷ್ಠ 75 ಲಕ್ಷ ರೂಪಾಯಿಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಈ ಸಂದರ್ಭದಲ್ಲಿ ಈ ಹಿಂದೆ ಈ ಮನೆಗೆ ತೆಗೆದುಕೊಂಡು ಹೋಗಬಹುದಾದ ಕನಿಷ್ಠ ಬಹುಮಾನದ ಮೊತ್ತವು 3.20 ಲಕ್ಷ ರೂಪಾಯಿ ಆಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Published by:Ashwini Prabhu
First published: