Ileana and Sebastian: ನಟಿ ಇಲಿಯಾನಾ, ಕತ್ರಿನಾ ಸಹೋದರ ಸೆಬಾಸ್ಟಿಯನ್ ಡೇಟಿಂಗ್?

ಕೆಲವು ವಾರಗಳ ಹಿಂದೆಯಷ್ಟೆ, ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಬರ್ತ್ಡೇ ಪಾರ್ಟಿ ಯಲ್ಲಿ ಯಾರ‍್ಯಾರು ಬಾಗಿಯಾಗಿದ್ರು ನೋಡಿ.

ಕತ್ರಿನಾ ಕೈಫ್ ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಫೋಟೋ

ಕತ್ರಿನಾ ಕೈಫ್ ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಫೋಟೋ

  • Share this:
ಈ ಚಿತ್ರೋದ್ಯಮದಲ್ಲಿರುವ ನಟ ಮತ್ತು ನಟಿಯರು ತಮ್ಮ ವೈಯುಕ್ತಿಕ ಜೀವನವನ್ನು (Personal Life) ತುಂಬಾನೇ ರಹಸ್ಯವಾಗಿಡಲು ಪ್ರಯತ್ನಿಸುತ್ತಾರೆ, ಆದರೆ ಅದು ಅಷ್ಟೊಂದು ಸುಲಭವಾದ ಕೆಲಸವಲ್ಲ ಬಿಡಿ. ಏಕೆಂದರೆ ಅಭಿಮಾನಿಗಳು (Fans) ತಮ್ಮ ನೆಚ್ಚಿನ ನಟ ಮತ್ತು ನಟಿಯರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮನೆಯ ಸದಸ್ಯರಿಗಿಂತಲೂ ಹೆಚ್ಚು ಫಾಲೋ ಮಾಡುತ್ತಿರುತ್ತಾರೆ. ಅಂತಹದರಲ್ಲಿ ಸುದ್ದಿ ಹೇಗಾದರೂ ಹೊರಗೆ ಬಂದೆ ಬರುತ್ತದೆ. ಈಗ ಮತ್ತೊಬ್ಬ ನಟಿಯ (Actress) ಬಗ್ಗೆ ಹೊಸ ಸುದ್ದಿಯೊಂದು ಕೇಳಲು ಸಿಗುತ್ತಿದೆ ನೋಡಿ. ಕೆಲವು ವಾರಗಳ ಹಿಂದೆಯಷ್ಟೆ, ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಾಲ್ಡೀವ್ಸ್ ನಲ್ಲಿ (Maldives) ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಮಾಲ್ಡೀವ್ಸ್ ನಲ್ಲಿ ಕತ್ರಿನಾ ಕೈಫ್ ಬರ್ತ್ ಡೇ 
ನಟಿ ಕತ್ರಿನಾ ಅವರ ಪತಿ ಮತ್ತು ನಟ ವಿಕ್ಕಿ ಕೌಶಲ್, ಸಹೋದರಿ ಇಸಾಬೆಲ್ ಕೈಫ್, ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್, ಸ್ನೇಹಿತರಾದ ಶಾರ್ವರಿ ವಾಘ್, ಸನ್ನಿ ಕೌಶಲ್, ಮಿನಿ ಮಾಥುರ್ ಮತ್ತು ಇತರರು ನಟಿ ಕತ್ರಿನಾ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಹಾಜರಿದ್ದರು.

ಇಲಿಯಾನಾ ಜೊತೆ ಸೆಬಾಸ್ಟಿಯನ್ ಡೇಟ್ ಮಾಡ್ತಿದ್ದಾರಾ?
ಇಲ್ಲಿ ಫೋಟೋ ಗಮನಿಸಿದವರಿಗೆ ಒಂದು ಪ್ರಶ್ನೆ ಮಾತ್ರ ಕಾಡದೆ ಬಿಡದು. ಅದೇನಪ್ಪಾ ಅಂತ ಎಂದರೆ ನಟಿ ಇಲಿಯಾನಾ ಡಿ'ಕ್ರೂಜ್ ಅವರು ಈ ಪಾರ್ಟಿಯಲ್ಲಿ ಏನು ಮಾಡುತ್ತಿದ್ದಾರೆ ಅಂತ ಇವರ ಉಪಸ್ಥಿತಿಯು ಅನೇಕರನ್ನು ಗೊಂದಲಕ್ಕೀಡು ಮಾಡಿದ್ದಂತೂ ನಿಜ.  ಬಹುಶಃ ಇಲಿಯಾನಾ ಅವರು ಕತ್ರಿನಾ ಅವರ ಸಹೋದರ ಸೆಬಾಸ್ಟಿಯನ್ ಅವರೊಂದಿಗೆ ಡೇಟ್ ಮಾಡುತ್ತಿರಬಹುದು ಅಂತ ಈ ಫೋಟೋ ನೋಡಿದ ಕೆಲವರು ಊಹಿಸಿದ್ದಾರೆ. ಅದು ನಿಜ ಕೂಡ ಅಂತೆ ಎಂದು ತಿಳಿದು ಬಂದಿದೆ ನೋಡಿ.

ಇದನ್ನೂ ಓದಿ: Urvashi Rautela: ಪಂತ್ ಆಯ್ತು, ಈಗ ಪಾಕ್ ಆಟಗಾರನೇ ಬೇಕಂತೆ! ಬಾಲಿವುಡ್​ ನಟಿ ರೀಲ್ಸ್​ ವಿಡಿಯೋ ವೈರಲ್​

‘ಕಾಫಿ ವಿತ್ ಕರಣ್’ ಶೋ ನಲ್ಲಿ ಏನಂದ್ರು ನಟಿ 
ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ ಅವರು ನಡೆಸಿ ಕೊಡುವಂತಹ ‘ಕಾಫಿ ವಿತ್ ಕರಣ್’ ಶೋ ನ ಇತ್ತೀಚಿನ ಸಂಚಿಕೆಯಲ್ಲಿ ಕಾಣಿಸಿಕೊಂಡ ಕತ್ರಿನಾ ಅವರ ಮುಂದೆಯೇ ಕರಣ್ ಜೋಹರ್ ಅವರು ಇಲಿಯಾನಾ ಅವರು ಕತ್ರಿನಾ ಅವರ ಕುಟುಂಬದೊಂದಿಗೆ ಹೊಂದಿರುವ ಸಂಬಂಧವನ್ನು ಉಲ್ಲೇಖಿಸಿದ್ದಾರೆ.

ಅವರು ಈ ಪ್ರಶ್ನೆಯನ್ನು 'ನಾವು ಅದನ್ನು ದೃಢೀಕರಿಸಬೇಕಾಗಿಲ್ಲ' ಎಂದು ಯಾವುದೇ ಪೀಠಿಕೆ ಹಾಕದೆ ಕೇಳಿದರು. "ಮಾಲ್ಡೀವ್ಸ್ ಪ್ರವಾಸದಲ್ಲಿನ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು ಮತ್ತು ನಾನು ಅದರ ಬಗ್ಗೆ ಯೋಚನೆ ಮಾಡುತ್ತಿದ್ದೆ. ನಾನು ಈ ಇಬ್ಬರು ಈ ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗುವುದನ್ನು ನೋಡಿದೆ' ಮತ್ತು ಇದು ಇಷ್ಟೊಂದು ವೇಗವಾಗಿ ಬೆಳೆದುಕೊಂಡು ಹೋಗಿದೆ” ಎಂದು ಕರಣ್ ಹೇಳಿದರು.

ಈ ಬಗ್ಗೆ ಕತ್ರಿನಾ ಕೈಫ್ ಹೇಳಿದ್ದು ಹೀಗೆ 
ಕರಣ್ ಅವರ ಕಾಮೆಂಟ್ ಗೆ ಕತ್ರಿನಾ ಅವರು ಜೋರಾಗಿ ನಕ್ಕರು ಮತ್ತು ಅವರು ತಮ್ಮ ಸುತ್ತಲು ನಡೆಯುತ್ತಿರುವ ಬಹಳಷ್ಟು ವಿಷಯಗಳಿಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಒಪ್ಪಿಕೊಂಡರು. ಏತನ್ಮಧ್ಯೆ, ಮಾಲ್ಡೀವ್ಸ್ ಪ್ರವಾಸದ ನಂತರ ಸೆಬಾಸ್ಟಿಯನ್ ಮತ್ತು ನಟಿ ಇಲಿಯಾನಾ ಅವರ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಕಾಣಿಸಿಕೊಂಡಿಲ್ಲ. ಇನ್‌ಸ್ಟಾಗ್ರಾಮ್ ನಲ್ಲಿ ಇವರಿಬ್ಬರ ಖಾತೆಗಳು ಖಾಸಗಿಯಾಗಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Mahalaskhmi Ravindar: 2ನೇ ಮದುವೆಗೂ ಮುನ್ನ ಆ ನಟನ ಜೊತೆ ​ಮಹಾಲಕ್ಷ್ಮಿ ಲವ್ವಿ-ಡವ್ವಿ, ಈ ಮ್ಯಾಟರ್​ ರವೀಂದರ್​ಗೂ ಗೊತ್ತಿತ್ತಂತೆ!

ವಿಕ್ಕಿ ಕೌಶಲ್ ಅವರೊಂದಿಗಿನ ತಮ್ಮದೇ ಆದ ಸಂಬಂಧ ಮತ್ತು ಅದು ಹೇಗೆ ಬೆಳೆಯಿತು ಎಂಬುದರ ಬಗ್ಗೆ ಕತ್ರಿನಾ ಈ ಶೋ ನಲ್ಲಿ ಮಾತನಾಡಿದರು. “ಆರಂಭದಲ್ಲಿ ಅವನು ತನ್ನ 'ರಾಡಾರ್' ನಲ್ಲಿ ಇರಲಿಲ್ಲ” ಎಂದು ಅವರು ಒಪ್ಪಿಕೊಂಡರು. “ನಂತರ ಅವನ ಬಗ್ಗೆ ಭಾವನೆಗಳು ಹುಟ್ಟಿಕೊಂಡವು ಮತ್ತು ನಿರ್ದೇಶಕ ಜೋಯಾ ಅಖ್ತರ್ ಅವರು ಅದನ್ನು ಮೊದಲು ತಿಳಿದುಕೊಂಡರು. ಜೋಯಾ ಅವರು ಪಾರ್ಟಿಯಲ್ಲಿದ್ದಾಗ, ನನಗೆ ವಿಕ್ಕಿಯೊಂದಿಗೆ ಪ್ರೀತಿ ಬೆಳೆಯಿತು” ಎಂದು ಹೇಳಿಕೊಂಡರು. ಕತ್ರಿನಾ ಮತ್ತು ವಿಕ್ಕಿ ಕಳೆದ ವರ್ಷ ರಾಜಸ್ಥಾನದಲ್ಲಿ ವಿವಾಹವಾದರು. ಅವರ ವಿವಾಹದಲ್ಲಿ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.
Published by:Ashwini Prabhu
First published: