• Home
  • »
  • News
  • »
  • entertainment
  • »
  • Katrina Kaif: ಹಾಲಿಡೇ ಮೂಡ್​ನಲ್ಲಿ ವಿಕ್ಕಿ-ಕತ್ರೀನಾ, ಎಲ್ಲಿ ಸುತ್ತಾಡ್ತಿದ್ದಾರೆ ಗೊತ್ತಾ?

Katrina Kaif: ಹಾಲಿಡೇ ಮೂಡ್​ನಲ್ಲಿ ವಿಕ್ಕಿ-ಕತ್ರೀನಾ, ಎಲ್ಲಿ ಸುತ್ತಾಡ್ತಿದ್ದಾರೆ ಗೊತ್ತಾ?

ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ರಜೆಯ ಅದ್ಭುತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ 'ಸೋ ಮ್ಯಾಜಿಕಲ್‌' ಎಂದು ಶೀರ್ಷಿಕೆ ನೀಡಿದ್ದಾರೆ.

ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ರಜೆಯ ಅದ್ಭುತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ 'ಸೋ ಮ್ಯಾಜಿಕಲ್‌' ಎಂದು ಶೀರ್ಷಿಕೆ ನೀಡಿದ್ದಾರೆ.

ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ರಜೆಯ ಅದ್ಭುತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ 'ಸೋ ಮ್ಯಾಜಿಕಲ್‌' ಎಂದು ಶೀರ್ಷಿಕೆ ನೀಡಿದ್ದಾರೆ.

  • Share this:

ಕ್ರಿಸ್‌ ಮಸ್‌ ಹಾಗೂ ಇಯರ್‌ ಎಂಡ್‌ ರಜೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಪ್ರವಾಸ ಹೋಗ್ತಾರೆ. ಮಕ್ಕಳಿಗೆ ಹಾಗೂ ಅನೇಕ ಕಂಪನಿ ಉದ್ಯೋಗಿಗಳಿಗೆ ರಜೆ ಇರೋದ್ರಿಂದ ಡಿಸೆಂಬರ್‌ ಎಂಡ್‌ ನಲ್ಲಿ ಟ್ರಿಪ್‌ (Trip) ಹೋಗೋದು ಕಾಮನ್.‌ ಇದರಲ್ಲಿ ಸೆಲೆಬ್ರಿಟಿಗಳೂ  (Celebrity) ಹೊರತಾಗಿಲ್ಲ. ಸದ್ಯ ಬಾಲಿವುಡ್‌ ನ (Bollywood) ಸ್ಟಾರ್‌ ದಂಪತಿ ಕತ್ರೀನಾ ಕೈಫ್‌ (Katrina Kaif) ಹಾಗೂ ವಿಕ್ಕಿ ಕೌಶಲ್‌ ಹಾಲಿಡೇ ಮೂಡ್‌ ನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಕೆಲವಷ್ಟು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.


ರಾಜಸ್ಥಾನ ಪ್ರವಾಸಲ್ಲಿ ವಿಕ್ಕಿ – ಕತ್ರೀನಾ


ಈ ವಾರದ ಆರಂಭದಲ್ಲಿ ಮುಂಬೈನಿಂದ ಹಾರಿದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನ ಪ್ರವಾಸದಲ್ಲಿದ್ದಾರೆ. ಅವರು ರಾಜಸ್ಥಾನದ ಬಾಲಿ ಜಿಲ್ಲೆಯ ಜವಾಯಿಯಲ್ಲಿದ್ದಾರೆ.
ಜೋಧಪುರಕ್ಕೆ ಆಗಮಿಸಿದ ಅವರು ರಸ್ತೆಯ ಮೂಲಕ ಪ್ರಯಾಣಿಸಿದರು. ಜವಾಯಿಯು ಚಿರತೆಗಳ 40 ಕ್ಕೂ ಹೆಚ್ಚು ಕುಟುಂಬಗಳಿಗೆ ನೆಲೆಯಾಗಿದೆ. ಇದು ಅರಾವಳಿ ಪರ್ವತ ಶ್ರೇಣಿಯಿಂದ ಆವೃತವಾಗಿದ್ದು, ಇಲ್ಲಿಗೆ ಪ್ರಸಿದ್ಧ ವ್ಯಕ್ತಿಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.


ಸೋ ಮ್ಯಾಜಿಕಲ್‌ ಎಂದ ಕತ್ರೀನಾ ಕೈಫ್‌


ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ರಜೆಯ ಅದ್ಭುತ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ 'ಸೋ ಮ್ಯಾಜಿಕಲ್‌' ಎಂದು ಶೀರ್ಷಿಕೆ ನೀಡಿದ್ದಾರೆ.


ಇನ್‌ ಸ್ಟಾಗ್ರಾಂನಲ್ಲಿ ಅವರು ಸೋ ಮ್ಯಾಜಿಕಲ್‌. ಬಹುಶಃ ಇದು ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಎಂದು ಬರೆದಿರುವ ಕತ್ರೀನಾ ಕೆಲವಷ್ಟು ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

View this post on Instagram


A post shared by Katrina Kaif (@katrinakaif)

ವಿಕ್ಕಿ ಕೌಶಲ್ ಕೂಡ ಸಫಾರಿಯಿಂದ ಒಂದೆರಡು ಶಾಟ್‌ಗಳನ್ನು ಮತ್ತು ಕೆಲವು ಸೂರ್ಯನ ಚುಂಬನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಅವರು ಫೋಟೋಗಳನ್ನು ಹಂಚಿಕೊಂಡ ತಕ್ಷಣವೇ ಲೈಕ್‌ ಗಳು, ಕಾಮೆಂಟ್‌ ಗಳು ಹರಿದುಬರತೊಡಗಿವೆ. ಅವರ ಅಭಿಮಾನಿಯೊಬ್ಬರು ‘ಲವ್ ಯೂ ಗೈಸ್’ ಎಂದು ಸೇರಿಸಿದ್ದಾರೆ.


ಇದನ್ನೂ ಓದಿ: Katrina Kaif: ಕತ್ರಿನಾ, ವಿಕ್ಕಿ ಕೌಶಲ್​ಗೆ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅನಿವರ್ಸರಿಗೆ ಪ್ಲಾನ್ ಏನು ಗೊತ್ತಾ?


ಅಂದಹಾಗೆ ಕತ್ರಿನಾ ಕೈಫ್ 2 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಅವರು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಖಾಸಗಿ ವಿವಾಹವನ್ನು ಆಯೋಜಿಸಿದ್ದರು.


Bollywood actor Katrina Kaif And Vicky Kaushal Celebrating First year Anniversary
ಕತ್ರಿನಾ ಕೈಫ್, ವಿಕ್ಕಿ ಕೌಶಲ್


ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪರ್ವತಗಳಲ್ಲಿ ಸಮಯ ಕಳೆದರು. ಅದರ ಫೋಟೋ ಹಾಗೂ ವಿಡಿಯೋಗಳನ್ನ ಅವರು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕತ್ರಿನಾ ಕೈಫ್‌, ನಟ ಸಲ್ಮಾನ್ ಖಾನ್ ಜೊತೆ ಟೈಗರ್ 3 ಚಿತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೇ, ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್‌ಮಸ್‌ನಲ್ಲಿ ನಟ ವಿಜಯ್ ಸೇತುಪತಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.


ಇತ್ತ ವಿಕ್ಕಿ ಕೌಶಲ್ ಮುಂದೆ ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ನಟಿಸಿದ್ದಾರೆ. ವಿಕ್ಕಿ ಇತ್ತೀಚಿಗೆ ಬಿಡುಗಡೆಯಾದ ಗೋವಿಂದ ನಾಮ್ ಮೇರಾ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು