Katrina Kaif's doppelganger: ಕತ್ರಿನಾರನ್ನೇ ಹೋಲುವ ಅಲಿನಾ ಇನ್‌ಸ್ಟಾದಲ್ಲಿ ಹೊಸ ಹವಾ ಸೃಷ್ಟಿಸಿದ್ದು ಹೇಗೆ?

ಸಾಂಪ್ರದಾಯಿಕ ಉಡುಪಿನಿಂದ ಹಿಡಿದು ಮಾಡರ್ನ್ ದಿರಿಸುಗಳವರೆಗೆ ಬೇರೆ ಬೇರೆ ಫೋಟೋಗಳಲ್ಲಿ ಅಲಿನಾ ಮಿಂಚಿದ್ದು ಒಮ್ಮೆ ಇವರನ್ನು ನೋಡಿದರೆ ಅರೆ ಇವರು ಹಾಗೂ ಕತ್ರಿನಾ ಅವಳಿ ಜವಳಿಯೇ ಎಂದನ್ನಿಸುತ್ತದೆ.

katrina

katrina

  • Share this:
ಕತ್ರಿನಾ ಕೈಫ್‌ರ (Katrina Kaif) ತದ್ರೂಪಿ ಎಂಬಂತೆ ಈ ಹಿಂದೆ ಸದ್ದು ಮಾಡಿದವರು ನಟಿ ಜರೀನಾ ಖಾನ್ (Zareen Khan)​. ನೋಡಲು ಕೊಂಚ ಕತ್ರಿನಾ ರಂತೆ ಇದ್ದ ಜರೀನಾ ನಟ ಸಲ್ಮಾನ್​ ಖಾನ್​ ಕಣ್ಣಿಗೆ ಬಿದ್ದು, ಬಾಲಿವುಡ್​ನಲ್ಲೂ ಮಿಂಚಿದರು. ಇದಾದ ಬಳಿಕ ಈ ಮತ್ತೊಮ್ಮೆ ಬೆಡಗಿ ಥೇಟ್​ ಕತ್ರಿನಾ ಪಡಿಯಚ್ಚಿನಂತಿದ್ದಾರೆ. ಜರೀನಾಗಿಂತ ಹೆಚ್ಚು ಅಲಿನಾ ರೈ (Alina Rai)​ ಕತ್ರಿನಾರನ್ನು ಹೋಲುತ್ತಾರೆ. ಅದೇ ಮೈಮಾಟದ ಈ ಚೆಲುವೆ ಈಗ ಕತ್ರಿನಾ ತದ್ರೂಪಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಲಿನಾ ರೈ ಇನ್‌ಸ್ಟಾಗ್ರಾಮ್‌ನಲ್ಲಿ 200,000 ಕ್ಕಿಂತಲೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕತ್ರಿನಾ ಕೈಫ್‌ರಂತೆಯೇ ಕಾಣುವ ಕತ್ರಿನಾ ತದ್ರೂಪಿ ಅಲಿನಾ ರೈ ಇಂಟರ್ನೆಟ್‌ನಲ್ಲಿ ಹೊಸ ಕಿಚ್ಚು ಹತ್ತಿಸಿದ್ದಾರೆ. ಸ್ವತಃ ನಟಿಯಾಗಿರುವ ಅಲಿನಾ ಕತ್ರಿನಾ ಪಡಿಯಚ್ಚಿನಂತೆಯೇ ಕಾಣುತ್ತಾರೆ. ಕತ್ರಿನಾ ಹಾಗೂ ಅಲಿನಾ ನಡುವೆ ಇರುವ ಸಾಮ್ಯತೆಯನ್ನು ನಿಮಗೆ ಒಮ್ಮೆಲೆ ಪತ್ತೆಹಚ್ಚಲು ಸಾಧ್ಯವಾಗದು ಏಕೆಂದರೆ ಅವರು ಆ ಮಟ್ಟಿಗೆ ಕತ್ರಿನಾ ರನ್ನೇ ಹೋಲುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ  ಅಲಿನಾ ಪ್ರೊಫೈಲ್‌ ಪತ್ತೆ ಹಚ್ಚಿದ ಬಳಿಕ ಆಕೆ ಸಾಮಾಜಿಕ ತಾಣದಲ್ಲಿ  ಆಕೆ ಸಿಕ್ಕಾಪಟ್ಟೆ ವೈರಲ್ ಆಗಿರುವುದು ಸುಳ್ಳಲ್ಲ.

ಆಗಾಗ್ಗೆ ಮೋಜಿನ ಹಾಸ್ಯಮಯ ವಿಡಿಯೋಗಳನ್ನು ಶೇರ್ ಮಾಡುವ ಅಲಿನಾ ಕಪ್ಪು ಬಣ್ಣದ ಉಡುಗೆಯಲ್ಲಿ “ಹೇ ಭಗವಂತ ನೀವು ಕೂಡಾ” ಎಂಬ ಶೀರ್ಷಿಕೆಯಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.








View this post on Instagram






A post shared by Alina Rai (@alinarai07)





ತನ್ನ ವರ್ಕ್‌ಔಟ್ ವಿಡಿಯೋವನ್ನು ಕೂಡ ಅಲಿನಾ ಶೇರ್ ಮಾಡಿದ್ದು ಚಾಂಪಿಯನ್‌ಗಳು ಹುಟ್ಟುವುದಿಲ್ಲ ಅವರು ತಯಾರಾಗುತ್ತಾರೆ ಎಂಬ ಶೀರ್ಷಿಕೆಯನ್ನು ಶೇರ್ ಮಾಡಿದ ವಿಡಿಯೋಗೆ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ಫೋಟೋವನ್ನು ಕೂಡ ಅಲಿನಾ ಶೇರ್ ಮಾಡಿದ್ದು ವೆಲ್‌ಕಮ್‌ನ ಕತ್ರಿನಾ ಹಾಡಾಗಿರುವ ಊಂಚಾ ಲಂಬಾ ಕದ್ ಹಾಡಿಗೆ ಹೆಜ್ಜೆಹಾಕಿದ್ದಾರೆ. ಅಲಿನಾ ತಮ್ಮ ಇನ್‌ಸ್ಟಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಹಾಕಿದ್ದು ಕತ್ರೀನಾರಂತೆಯೇ ಇವರು ಕಾಣುತ್ತಿದ್ದಾರೆ. ಸಾಂಪ್ರದಾಯಿಕ ಉಡುಪಿನಿಂದ ಹಿಡಿದು ಮಾಡರ್ನ್ ದಿರಿಸುಗಳವರೆಗೆ ಬೇರೆ ಬೇರೆ ಫೋಟೋಗಳಲ್ಲಿ ಅಲಿನಾ ಮಿಂಚಿದ್ದು ಒಮ್ಮೆ ಇವರನ್ನು ನೋಡಿದರೆ ಅರೆ ಇವರು ಹಾಗೂ ಕತ್ರಿನಾ ಅವಳಿ ಜವಳಿಯೇ ಎಂದನ್ನಿಸುತ್ತದೆ.








View this post on Instagram






A post shared by Alina Rai (@alinarai07)






ಹೀಗೆ ಸಿನಿ ನಟಿ ನಟರನ್ನು ಹೋಲುವ ಸಾಕಷ್ಟು ಜನರಿದ್ದು ಇನ್‌ಸ್ಟಾದಲ್ಲಿ ಇವರುಗಳು ತಮ್ಮ ಖಾತೆಗಳನ್ನು ಹೊಂದಿದ್ದಾರೆ. ಕೆಲವರು ಚಿತ್ರ ಕ್ಷೇತ್ರದಿಂದ ಬಂದವರಾಗಿದ್ದರೆ ಇನ್ನು ಕೆಲವರು ಸಾಮಾನ್ಯ ಜನರಾಗಿದ್ದಾರೆ. ಸಲ್ಮಾನ್ ಖಾನ್, ಐಶ್ವರ್ಯಾ ರೈ, ಹೃತಿಕ್ ಹೀಗೆ ಬೇರೆ ಬೇರೆ ನಟರನ್ನು ಹೋಲುವ ಸಾಕಷ್ಟು ಜನರನ್ನು ನಾವು ಕಾಣಬಹುದಾಗಿದೆ. ಇನ್‌ಸ್ಟಾದಲ್ಲಿ ಇವರುಗಳು ಕೂಡ ಸಿನಿ ನಟ ನಟಿಯರಂತೆಯೇ ದಿರಿಸು ಧರಿಸಿ ಸಿನಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಸಿನಿ ತಾರೆಯರಂತೆಯೇ ಇವರುಗಳು ಕೂಡ ಇನ್‌ಸ್ಟಾದಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಅಭಿಮಾನಿಗಳನ್ನು ಹೊಂದಿದ್ದು ನಟಿ ನಟರಂತೆಯೇ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಅಲಿನಾ ಕೂಡ ಕತ್ರಿನಾರಂತೆಯೇ ಫ್ಯಾನ್ ಫಾಲೋವರ್ಸ್‌ಗಳನ್ನು ಒಳಗೊಂಡಿದ್ದು ಫ್ಯಾಶನ್ ಫೋಟೋಗಳಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ನಟ ನಟಿಯರಂತೆಯೇ ಹೋಲಿಕೆ ಇದ್ದರೆ ಮಾತ್ರ ಸಾಲದು ಅವರಂತೆಯೇ ನಟಿಸುವ ನರ್ತಿಸುವ ಸಾಮರ್ಥ್ಯ ಹಾಗೂ ಕ್ರಿಯಾತ್ಮಕತೆ ಹೊಂದಿರುವುದೂ ಕೂಡ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ವಿಷಯದಲ್ಲಿ ಅಲಿನಾ ತಮ್ಮ ಇನ್‌ಸ್ಟಾವನ್ನು ಚೆನ್ನಾಗಿ ರೂಪುಗೊಳಿಸಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.
First published: