Katrina Kaif: ವಧು ಕತ್ರೀನಾ ಕೈಫ್ ಧರಿಸಿದ್ದ ನಿಶ್ಚಿತಾರ್ಥದ ಉಂಗುರದ ಬೆಲೆ 7.4 ಲಕ್ಷ ರೂ. ಅಂತೆ

Katrina Kaif: ಕತ್ರಿನಾ ಕೈಫ್ ಅಭಿಮಾನಿಗಳಿಗಂತೂ, ಆಕೆ ಧರಿಸಿದ್ದ ಡೈಮಂಡ್ ಮತ್ತು ಬ್ಲೂ ಸಫೈರ್ ಉಳ್ಳ ನಿಶ್ಚಿತಾರ್ಥದ ಉಂಗುರ ಸಿಕ್ಕಾಪಟ್ಟೆ ಮೆಚ್ಚುಗೆಯಾಗಿದೆಯಂತೆ.

ಕಣ್ಮನ ಸೆಳೆದ ಉಂಗುರ

ಕಣ್ಮನ ಸೆಳೆದ ಉಂಗುರ

  • Share this:
ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ( Katrina Kaif and Vicky Kaushal) ಅಭಿಮಾನಿಗಳು ಅತ್ಯಂತ ಕೂತೂಹಲದಿಂದ ಕಾಯುತ್ತಿದ್ದ ಸಂಗತಿಗೆ ಕೊನೆಗೂ ತೆರೆ ಬಿದ್ದಿದೆ. ಬಾಲಿವುಡ್‍ನ ಈ ಜನಪ್ರಿಯ ತಾರೆಯರಿಬ್ಬರು ಗುರುವಾರ, ಡಿಸೆಂಬರ್ 9 ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರತಿನಾ ಮತ್ತು ವಿಕ್ಕಿ , ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ (Instagram) ಖಾತೆಗಳಲ್ಲಿ ಮದುವೆಯ ಸುದ್ದಿಯನ್ನು(Happy announcement) ಘೋಷಿಸಿದರು ಮತ್ತು ಜೊತೆಗೆ ಮದುವೆಯ ಫೋಟೋಗಳನ್ನು(pictures) ಕೂಡ ಹಂಚಿಕೊಂಡಿದ್ದರು.

ಕೃತಜ್ಞತೆ
ಆ ಪೋಸ್ ಗೆ ಇಬ್ಬರೂ ಕೂಡ, “ ನಮ್ಮನ್ನು ಈ ಕ್ಷಣಕ್ಕೆ ಕರೆದು ತಂದ ಎಲ್ಲದಕ್ಕೂ ನಮ್ಮ ಹೃದಯದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ಇದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಕೋರಿ, ನಾವು ಈ ನೂತನ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತೇವೆ” ಎಂದು ಅಡಿಬರಹವನ್ನು ನೀಡಿದ್ದಾರೆ.

ಇದನ್ನೂ ಓದಿ: ಬಹುತೇಕ ಬಾಲಿವುಡ್ ತಾರೆಯರು ತಮ್ಮ ಮದುವೆಗೆ ಸಬ್ಯಸಾಚಿ ಡಿಸೈನ್ ಮಾಡಿದ ಬಟ್ಟೆಗಳನ್ನೇ ಯಾಕೆ ಆಯ್ದುಕೊಳ್ತಾರೆ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ

ಕಣ್ಮನ ಸೆಳೆದ ಉಂಗುರ
ಈ ಸುಂದರ ಜೋಡಿಯ ಮದುವೆಯ ಫೋಟೋಗಳು ಇನ್ನಷ್ಟು ಸುಂದರವಾಗಿದ್ದವು. ಕತ್ರಿನಾ ಕೈಫ್ ಅಭಿಮಾನಿಗಳಿಗಂತೂ, ಆಕೆ ಧರಿಸಿದ್ದ ಡೈಮಂಡ್ ಮತ್ತು ಬ್ಲೂ ಸಫೈರ್ ಉಳ್ಳ ನಿಶ್ಚಿತಾರ್ಥದ ಉಂಗುರ ಸಿಕ್ಕಾಪಟ್ಟೆ ಮೆಚ್ಚುಗೆಯಾಗಿದೆಯಂತೆ. ಆ ಉಂಗುರ ನಿಜಕ್ಕೂ ಕಣ್ಮನ ಸೆಳೆಯುವಂತಿದೆ! ವರದಿಗಳ ಪ್ರಕಾರ, ಕತ್ರೀನಾ ಕೈಫ್, ಟಿಫ್ಯಾನಿ ಸೋಲೆಸ್ಟ್‍ನ ಪ್ಲಾಟಿನಂ ನಿಶ್ಚಿತಾರ್ಥದ ಉಂಗುವನ್ನು ಧರಿಸಿದ್ದರು. ಮತ್ತು ಅದರ ಬೆಲೆ 7.4 ಲಕ್ಷ ರೂ.


ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ , ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬರ್ವಾರ ಕೋಟೆಯ ಸಿಕ್ಸ್ ಸೆನ್ಸ್ ರೆಸಾರ್ಟ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಯಲ್ಲಿ ಅವರಿಬ್ಬರ ಕುಟುಂಬದವರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು. ಗುರುವಾರ ಮಧ್ಯಾಹ್ನ ಅವರು ಸಪ್ತಪದಿ ತುಳಿದರು.

ಎರಡು ವರ್ಷಗಳಿಂದ ಡೇಟಿಂಗ್
ಕತ್ರೀನಾ ಕೈಫ್ ಕೆಂಪು ಬಣ್ಣದ ಮದುವೆಯ ಲೆಹಂಗಾವನ್ನು ಧರಿಸಿ ಕಂಗೊಳಿಸುತ್ತಿದ್ದರೆ, ವಿಕ್ಕಿ ಕೌಶಲ್ ಅವರು ದಂತದ ಬಣ್ಣದ ಶೇರ್ವಾನಿಯನ್ನು ಧರಿಸಿ ಮಿಂಚುತ್ತಿದ್ದರು. ಈ ತಾರಾ ಜೋಡಿಯ ಮದುವೆಯ ಉಡುಪನ್ನು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ಫ್ಯಾಷನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಅವರು ವಿನ್ಯಾಸ ಮಾಡಿದ್ದಾರೆ.
38 ವರ್ಷ ವಯಸ್ಸಿನ ಕತ್ರಿನಾ ಕೈಫ್ ಮತ್ತು 33 ವರ್ಷ ವಯಸ್ಸಿನ ವಿಕ್ಕಿ ಕೌಶಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಹಳ ದಿನಗಳಿಂದ ಅವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ
ಆದರೆ ಇಬ್ಬರೂ ಕೂಡ ಅಂತಿಮ ಸಮಯದ ವರೆಗೆ ತನ್ನ ಮದುವೆಯ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಕತ್ರಿನಾ ಮತ್ತು ವಿಕ್ಕಿ ಇಬ್ಬರೂ ಅತ್ಯಂತ ಖಾಸಗಿ ಸಮಾರಂಭದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಈ ಮದುವೆಗೆ ಆಹ್ವಾನಿತರಾಗಿದ್ದ ಅತಿಥಿಗಳ ಪಟ್ಟಿಯನ್ನು ಅತ್ಯಂತ ಮುತುವರ್ಜಿಯಿಂದ ತಯಾರಿಸಲಾಗಿತ್ತು.

ಇದನ್ನೂ ಓದಿ: Katrina Vicky: ವಿರುಷ್ಕಾ ನೆರೆ ಮನೆಯವರಾಗಲಿದ್ದಾರೆ ವಿಕ್ಕಿ & ಕ್ಯಾಟ್; ಮುಂಬೈನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿ

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಅವರ ಸಹುದ್ಯೋಗಿಗಳು, ಅತ್ಯಂತ ನಿಕಟ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಚಿತ್ರ ನಿರ್ದೇಶಕ ಕಬೀರ್ ಖಾನ್ ಮತ್ತು ಅವರು ಪತ್ನಿ ನಟಿ ಮಿನಿ ಮಾಥುರ್, ಧೂಮ್ 3 ಮತ್ತು ಥಗ್ಸ್ ಆಫ್ ಹಿಂದೂಸ್ಥಾನ್ ಖ್ಯಾತಿಯ ನಿರ್ದೇಶಕ ವಿಜಯ ಕೃಷ್ಣ ಆಚಾರ, ನಟಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಈ ವಿವಾಹದಲ್ಲಿ ಹಾಜರಿದ್ದರು.

ಕತ್ರಿನಾ ಕೈಯಲ್ಲಿ ಸದ್ಯಕ್ಕೆ ಮೂರು ಸಿನಿಮಾಗಳು!
ರಮೇಶ್ ತೌರಾನಿ ನಿರ್ಮಾಣದ ಮತ್ತು ಶ್ರೀರಾಮ್ ರಾಘವನ್ ನಿರ್ದೇಶನದ ಚಿತ್ರಕ್ಕಾಗಿ ಕತ್ರಿನಾ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಮುಂಬೈನಲ್ಲಿ ಅವರ ವಿವಾಹದ ಆರತಕ್ಷತೆಯ ನಂತರ ವಿಜಯ್ ಸೇತುಪತಿ ಜೊತೆಗಿನ ಮೆರ್ರಿ ಕ್ರಿಸ್‌ಮಸ್ ಎಂಬ ಚಿತ್ರದ ಶೂಟಿಂಗ್​ನಲ್ಲಿ ಕತ್ರಿನಾ ಭಾಗಿಯಾಗಲಿದ್ದಾರಂತೆ. ಇದಾದ ಬಳಿಕ ಸಲ್ಮಾನ್​ ಖಾನ್​ ಜೊತೆ ಟೈಗರ್​ 3 ಸಿನಿಮಾ ಮಾಡಲಿದ್ದಾರೆ. ನವೆಂಬರ್​ನಲ್ಲಿ ಟೈಗರ್​ 3 ಸಿನಿಮಾಗಾಗಿ ಕತ್ರಿನಾ ಡೇಟ್ಸ್​ ನೀಡಿದ್ದರು.ಇದಾದ ಬಳಿಕ ಶಾಹಿದ್​​ ಕಪೂರ್​ ಜೊತೆ ಒಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಹೀಗಾಗಿ ಮದುವೆಯಾದ ಬಳಿಕ ಸಿನಿಮಾ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿಯಾಗಲಿದ್ದಾರೆ.
Published by:vanithasanjevani vanithasanjevani
First published: