ಶ್ರೀಮಂತ ಸಂಸ್ಕೃತಿ (Rich culture)ಮತ್ತು ಸಂಪ್ರದಾಯಗಳನ್ನು(Traditions) ವರದಾನವಾಗಿ ಪಡೆದಿರುವ ರಾಜಸ್ಥಾನದಿಂದ(Rajasthan) ಬಹಳಷ್ಟು ಬಾಲಿವುಡ್ ಸಿನಿಮಾಗಳು (Bollywood films) ಕೂಡ ಪ್ರಭಾವಿತವಾಗಿದ್ದನ್ನು ನಾವು ನೋಡಬಹುದು. ಅಷ್ಟೆ ಅಲ್ಲ ಹಲವಾರು ಮಂದಿ ಸೆಲಿಬ್ರಿಟಿಗಳು(Celebrities) ಕೂಡ ತಮ್ಮ ಸಭೆ, ಸಮಾರಂಭ, ಮದುಗೆಗಾಗಿ(Wedding) ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದು. ಸದ್ಯ ಇಂದು ಬಾಲಿವುಡ್ ತಾರೆಯರಾದ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯೂ ಅಲ್ಲಿಯೇ ನಡೆಯುತ್ತಿರುವುದು ವಿಶೇಷ. ರಾಜಸ್ಥಾನದಲ್ಲಿ ಚಿತ್ರಿಸಿಲಾದ ಕೆಲ ಸಿನಿಮಾಗಳ ಮಾಹಿತಿ ಇಲ್ಲಿದೆ.
ಬಾಲಿವುಡ್ ತಾರೆಯರಾದ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಡಿಸೆಂಬರ್ 9 ರಂದು ನಡೆಯಲಿದ್ದು, ಸದ್ಯಕ್ಕೆ ಅಭಿಮಾನಿಗಳು ಮತ್ತು ಸಿನಿಮಾರಂಗದವರÀ ಪಾಲಿಗೆ ಭರ್ಜರಿ ಸುದ್ದಿಯದು. ರಾಜಾಸ್ಥಾನದ ಸವಾಯಿ ಮಾಧೋಪುರದ ಬರ್ವಾರ ಕೋಟೆಯಲ್ಲಿರುವ ಸಿಕ್ಸ್ ಸೆನ್ಸಸ್ ರೆಸಾರ್ಟ್ನಲ್ಲಿ ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೆ ಕೆಲವು ದಿನಗಳ ಮುನ್ನವೇ ಭಾವಿ ಮದುವಣಗಿತ್ತಿ ಕತ್ರೀನಾ ಕಣ್ಮನಸೆಳೆಯುವ ಫ್ಯಾಶನ್ ಉಡುಗೆಗಳ ಮೂಲಕ ಎಲ್ಲರ ಗಮನ ಸೆಳೆಯತೊಡಗಿದ್ದಾರೆ. ಇತ್ತೀಚೆಗೆ ಬಿಳಿ ಬಣ್ಣದ ಸೀರೆಯುಟ್ಟು, ಅದಕ್ಕೆ ಬೆಳ್ಳಿಯ ಬಣ್ಣದ ಹೊಳೆಯುವ ರವಿಕೆ ತೊಟ್ಟು , ಅದಕ್ಕೊಪ್ಪುವ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದರು. ಅವರ ಆ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: Katrina-Vicky Wedding: ಒಂದು ಚಿತ್ರದಲ್ಲೂ ಜೊತೆಯಾಗಿ ನಟಿಸಿಲ್ಲ, ಕತ್ರಿನಾ-ವಿಕ್ಕಿ ನಡುವೆ ಪ್ರೀತಿ ಹುಟ್ಟಿದ ಕತೆ ಸಖತ್ತಾಗಿದೆ!
ಸುಂದರ ವಾಸ್ತುಶಿಲ್ಪ
ಕತ್ರೀನಾ ಕೈಫ್ ರಾಜಸ್ಥಾನದಲ್ಲಿ ಮದುವೆ ಆಗುತ್ತಿರುವುದರಿಂದ, ಸದ್ಯದಲ್ಲೇ ನಾವು ಅಲ್ಲಿನ ಕೋಟೆಯ ಸುಂದರ ವಾಸ್ತುಶಿಲ್ಪಗಳ ಹಿನ್ನಲೆಯಲ್ಲಿ, ಉಜ್ವಲ ಮತ್ತು ರೋಮಾಂಚಕ ಬಣ್ಣಗಳ ಧಿರಿಸಿನಲ್ಲಿ ಕತ್ರೀನಾರನ್ನು ಕಾಣುವ ನಿರೀಕ್ಷೆ ಇಟ್ಟುಕೊಳ್ಳಬಹುದು. ರಾಜಸ್ಥಾನ ಶ್ರೀಮಂತ ಸಂಸ್ಕಂತಿ ಮತ್ತು ಸಂಪ್ರದಾಯಗಳನ್ನು ವರದಾನವಾಗಿ ಪಡೆದಿದ್ದು, ಅದು ಅಲ್ಲಿನ ಪ್ರಾದೇಶಿಕ ಅಡುಗೆಗಳು, ಭಾಷೆ ಮತ್ತು ಉಡುಗೆಗಳಲ್ಲಿ ಪ್ರತಿಬಿಂಬಿತವಾಗುವುದನ್ನು ಕಾಣಬಹುದು. ಅಂತಹ ಶ್ರೀಮಂತ ಸಂಸ್ಕøತಿಯ ರಾಜಸ್ಥಾನದಿಂದ ಬಹಳಷ್ಟು ಬಾಲಿವುಡ್ ಸಿನಿಮಾಗಳು ಕೂಡ ಪ್ರಭಾವಿತವಾಗಿದ್ದನ್ನು ನಾವು ನೋಡಬಹುದು. ಅಂತಹ ಸಿನಿಮಾಗಳ ಮಾಹಿತಿ ಇಲ್ಲಿದೆ.
ಪದ್ಮಾವತ್ನಲ್ಲಿ ದೀಪಿಕಾ ಪಡುಕೋಣೆ
ಪದ್ಮಾವತ್ ಸಿನಿಮಾದಲ್ಲಿ ಅತ್ಯದ್ಭುತ ಸಾಂಪ್ರದಾಯಿಕ ರಾಜಸ್ಥಾನಿ ಲೆಹಂಗಾಗಳನ್ನು ತೊಟ್ಟು ದೀಪಿಕಾ ಪಡುಕೋಣೆ ಸುಂದರವಾಗಿ ಕಂಗೊಳಿಸಿದ್ದರು. ಮಧ್ಯಕಾಲೀನ ರಾಜಸ್ಥಾನದ ಪದ್ಮಾವತಿ ಎಂಬ ರಾಣಿಗೆ ಸಂಬಂಧಿಸಿದ ಕಥೆಯುಳ್ಳ ಆ ಸಿನಿಮಾದಲ್ಲಿ ದೀಪಿಕಾ ತೊಟ್ಟಿದ್ದ ಒಂದೊಂದು ಲೆಹಂಗಾ ಕೂಡ ಒಂದಕ್ಕಿಂತ ಒಂದು ಸುಂದರವಾಗಿತ್ತು. ಅದರಲ್ಲೂ ಮುಖ್ಯವಾಗಿ, ‘ಗೂಮರ್’ ಹಾಡಿನಲ್ಲಿ ಆಕೆ ಧರಿಸಿದ್ದ ಲೆಹಂಗಾದಲ್ಲಿ ಗೋಟ ಲಫಾ ಮತ್ತು ಬ್ರಕೇಟ್ ಕಸೂತಿ ಕೆಲಸವನ್ನು ಒಳಗೊಂಡಿತ್ತು. ಆಕೆ ಧರಿಸಿದ್ದ ಸಾಂಪ್ರದಾಯಿಕ ಕಂಠಾಭರಣ, ಜುಮಕಿಗಳು ಮತ್ತು ಮೂಗಿನ ನತ್ತುಗಳು ಆಕೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದ್ದವು.
ಜೋಧಾ ಅಕ್ಬರ್ನಲ್ಲಿ ಐಶ್ವರ್ಯ ರೈ
ಜೋಧಾ ಅಕ್ಬರ್ ಸಿನಿಮಾದಲ್ಲಿನ ಐಶ್ವರ್ಯ ರೈ ಅವರ ರಾಜಸ್ಥಾನಿ ರಾಣಿಯ ಲುಕ್ ಅನ್ನು ಹೇಗೆ ಮರೆಯಲು ಸಾಧ್ಯ. ಆ ಸಿನಿಮಾದಲ್ಲಿ ರಾಜಸ್ಥಾನದಲ್ಲಿ ಜನಿಸಿದ್ದ ರಾಣಿ ಜೋಧಾಳ ಪಾತ್ರವನ್ನು ನಿರ್ವಹಿಸಿದ್ದ ಐಶ್ವರ್ಯ ರೈ, ಅತ್ಯುತ್ತಮವಾಗಿ ಕಸೂತಿ ಮಾಡಿದ ಲೆಹಂಗಾಗಳು ಮತ್ತು ಪದರಗಳುಳ್ಳ ಚಿನ್ನದ ಆಭರಣಗಳನ್ನು ಧರಿಸಿದ್ದರು. ಆ ಸಿನಿಮಾದಲ್ಲಿ ರಾಜಸ್ಥಾನದ ಸಾಂಪ್ರದಾಯಿಕ ಆಭರಣಗಳಾದ ಪೋಲ್ಕಿ ನೆಕ್ಲೆಸ್, ಮಾಂಗ್ಟೀಕಾ, ಚಾಂದ್ಬಾಲಿಗಳು, ಜುಮ್ಕಿಗಳು, ಪಾದಾ, ರಾಜಸ್ಥಾನಿ ಬೋರ್ಲಾ ಮತ್ತು ಸೊಂಟಪಟ್ಟಿಗಳನ್ನು ತೊಟ್ಟು ಮಿಂಚಿದ್ದರು ಐಶ್ವರ್ಯ.
ಪ್ರೇಮ್ ರತನ್ ಧನ್ ಪಾಯೋದಲ್ಲಿ ಸೋನಮ್ ಕಪೂರ್
ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ,ರಾಜಸ್ಥಾನಿ ಲೆಹೆಂಗಾಗಳಿಂದ ಹಿಡಿದು ಸೀರೆಗಳ ವರೆಗೆ ಹಲವು ಬಗೆಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟಿದ್ದ ಸೋನಮ್ ಕಪೂರ್ ಅವರು , ನೋಡುಗರ ಮನ ಸೆಳೆದಿದ್ದರು.
ಪಹೇಲಿಯಲ್ಲಿ ರಾಣಿ ಮುಖರ್ಜಿ
ಪಹೇಲಿ ಸಿನಿಮಾದಲ್ಲಿ ರಾಣಿ ಮುಖರ್ಜಿ ರಾಜಸ್ಥಾನಿ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಆ ಪಾತ್ರಕ್ಕೆ ಒಪ್ಪುವಂತ ಮತ್ತು ಪ್ರಾದೇಶಿಕ ನೋಟವನ್ನು ನೀಡುವಂತಹ , ಸಾಂಪ್ರದಾಯಿಕ ಉಜ್ವಲ ಹಾಗೂ ವರ್ಣಮಯ ಲೆಹಂಗಾಗಳನ್ನು ಅವರು ಧರಿಸಿದ್ದರು. ಕಾಡಿಗೆ ಹಚ್ಚಿದ ಕಣ್ಣುಗಳು, ಸಾದಾ ಬಣ್ಣದ ಲಿಪ್ಸ್ಟಿಕ್ ಮತ್ತು ಸಾಂಪ್ರದಾಯಿಕ ರಾಜಸ್ಥಾನಿ ಬೋರ್ಲಾದಲ್ಲಿ ಅವರು ಇನ್ನಷ್ಟು ಅಪ್ಪಟ ರಾಜಸ್ಥಾನಿ ಮಹಿಳೆಯಂತೆ ಕಾಣಿಸುತ್ತಿದ್ದರು.
ಇದನ್ನೂ ಓದಿ: ಏಕಾಂಗಿ.. ಜಾಕಲಿನ್ ಫರ್ನಾಂಡಿಸ್ ಏಕಾಂಗಿ..: ನಟಿ ಜೊತೆ ಸಲ್ಮಾನ್ ಖಾನ್ ಫ್ರೆಂಡ್ಶಿಪ್ ಕಟ್!
ಕಲಂಕ್ನಲ್ಲಿ ಅಲಿಯಾ ಭಟ್
ಕಲಂಕ್ ಸಿನಿಮಾದ ‘ಘರ್ ಮೋರೆ ಪರ್ದೇಸಿಯಾ’ ಹಾಡಿನಲ್ಲಿ ಅಲಿಯಾ ಭಟ್ ಧರಿಸಿದ್ದ ಬಿಳಿ ಬಣ್ಣದ ಲೆಹಂಗಾವನ್ನು ನೋಡಿದ್ದೀರಾ? ಅದರಲ್ಲಿ ದಾರದಲ್ಲಿ ಮಾಡಲಾಗಿದ್ದ ಕೆಂಪು ಹೂಗಳ ಚಿತ್ತಾರಗಳು ಅತ್ಯಂತ ಸುಂದರವಾಗಿದ್ದವು. ಅವರು ಅದಕ್ಕೆ ಜಾಕೆಟ್ ಶೈಲಿ ಚಿಕನ್ಕಾರಿ ಬ್ಲೌಸ್ ತೊಟ್ಟು ಒಂದು ಟ್ವಿಸ್ಟ್ ಕೂಡ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ