Bollywood: ಕತ್ರಿನಾ ಮತ್ತು ವಿಕ್ಕಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ನಲ್ಲಿ ಏನೇನಿದೆ ಗೊತ್ತೇ?

Bollywood: ನವ ವಿವಾಹಿತರು ತಮ್ಮ ವಿವಾಹ ಪೂರ್ವ ಫೋಟೋ ಶೂಟ್ ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ಕಾಲ್ಪನಿಕ ಕಥೆಯಿಂದ ಏನೋ ಕಡಿಮೆ ಇರಲಿಲ್ಲ. ಈ ಸ್ಟಾರ್ ದಂಪತಿಗಳು ತಮ್ಮ ಹೊಂದಾಣಿಕೆಯ ಉಡುಗೆಗಳಲ್ಲಿ ಪರಿಪೂರ್ಣವಾಗಿ ಕಾಣುತ್ತಿದ್ದರು.

ಕತ್ರಿನಾ ವಿಕ್ಕಿ  ಪ್ರಿ-ವೆಡ್ಡಿಂಗ್ ಫೋಟೋ ಶೂಟ್

ಕತ್ರಿನಾ ವಿಕ್ಕಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್

  • Share this:
ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಟ್ರೆಂಡ್ ಎಂದರೆ ದಂಪತಿಗಳಾಗಲಿರುವ (Couples wedding) ಜೋಡಿಯು ಅವರ ವಿವಾಹ ಪೂರ್ವದಲ್ಲಿ(Photo shoot) ಮಾಡಿಕೊಳ್ಳುವ ಫೋಟೋ ಶೂಟ್ ಎಂದು ಹೇಳಬಹುದು. ಸಾಮಾನ್ಯವಾಗಿ ಫೋಟೋ ಶೂಟ್ ಗಳು ತುಂಬಾನೇ ಗ್ರ್ಯಾಂಡ್ ಆಗಿ ಮೂಡಿ ಬರುತ್ತವೆ. ಅದರಲ್ಲೂ ಬಾಲಿವುಡ್ ಸ್ಟಾರ್ ನಟ ನಟಿಯರ (Bollywood star actresses) ವಿವಾಹ ಎಂದರೆ ಕೇಳಬೇಕೆ? ಹೌದು.. ನಿಮಗೆ ಈಗಾಗಲೇ ತಿಳಿದಿರಬೇಕು. ನಾವು ಮಾತಾಡುತ್ತಿರುವುದು ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal ) ಮತ್ತು ನಟಿ ಕತ್ರಿನಾ ಕೈಫ್ (Katrina Kaif) ಅವರ ವಿವಾಹ ಪೂರ್ವ ಫೋಟೋ ಶೂಟ್ ಬಗ್ಗೆ ಅಂತಾ.

ಮದುವೆಗೆ ವಿಭಿನ್ನ ಉಡುಗೆ
ಮೊನ್ನೆ ಎಂದರೆ ಡಿಸೆಂಬರ್ 9 ರಂದು ಮದುವೆ ನಡೆದ ವಿಚಾರವಂತೂ ಎಲ್ಲರಿಗೂ ತಿಳಿದೇ ಇದೆ. ಇವರಿಬ್ಬರ ಸ್ಟಾರ್ ನಟ ನಟಿಯ ಮದುವೆಗೆ ಉಡುಗೆಗಳನ್ನು ವಿಭಿನ್ನವಾಗಿ ಪ್ರಖ್ಯಾತ ಡಿಸೈನರ್‌ ಸವ್ಯಸಾಚಿ ಮುಖರ್ಜಿ ಅವರು ಡಿಸೈನ್ ಮಾಡಿದ್ದು ಸಹ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಇದನ್ನೂ ಓದಿ: Katrina Kaif: ವಧು ಕತ್ರೀನಾ ಕೈಫ್ ಧರಿಸಿದ್ದ ನಿಶ್ಚಿತಾರ್ಥದ ಉಂಗುರದ ಬೆಲೆ 7.4 ಲಕ್ಷ ರೂ. ಅಂತೆ

ನಟಿ ಕತ್ರಿನಾ ತಮ್ಮ ಮದುವೆಯ ಸಮಾರಂಭದಲ್ಲಿ ಕೈಯಿಂದ ನೇಯ್ದ ಮಟ್ಕಾ ಸಿಲ್ಕ್ ನಲ್ಲಿ ಕೆಂಪು ಲೆಹೆಂಗಾವನ್ನು ಧರಿಸಿದ್ದು, ನಟ ವಿಕ್ಕಿ ಮರೋರಿ ಕಸೂತಿಯೊಂದಿಗೆ ತಯಾರಿಸಿದ ರೇಷ್ಮೆ ಶೆರ್ವಾನಿಯನ್ನು ಆರಿಸಿಕೊಂಡಿದ್ದರು. ಇಬ್ಬರು ನವ ವಧು ವರರು ತುಂಬಾನೇ ಗ್ರ್ಯಾಂಡ್ ಆಗಿ ಕಾಣಿಸುತ್ತಿದ್ದರು. ಇದಕ್ಕಿಂತಲೂ ಹೆಚ್ಚು ಗ್ರ್ಯಾಂಡ್ ಆಗಿರುವ ವಿಷಯದ ಬಗ್ಗೆ ಮಾತಾಡೋಣ.



ವಿವಾಹ ಪೂರ್ವ ಫೋಟೋ ಶೂಟ್
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ವಿವಾಹ ಪೂರ್ವ ಫೋಟೋ ಶೂಟ್ ಮತ್ತೊಮ್ಮೆ ಪ್ರೀತಿಯ ಛಾಯೆಗಳೊಂದಿಗೆ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ದಂಪತಿಗಳು ಮದುವೆಯಾಗಿ ಈಗಾಗಲೇ ಐದು ದಿನಗಳೇ ಕಳೆದರೂ ಸಹ ಅಭಿಮಾನಿಗಳು ಮಾತ್ರ ಇವರ ಮದುವೆಯ ಫೋಟೋವನ್ನು ಇನ್ನೂ ಹುಡುಕಿಕೊಂಡು ನೋಡುತ್ತಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ಅವರ ಕನಸಿನ ಪ್ರಿ-ವೆಡ್ಡಿಂಗ್ ಫೋಟೋ ಶೂಟ್
ನವ ವಿವಾಹಿತರು ತಮ್ಮ ವಿವಾಹ ಪೂರ್ವ ಫೋಟೋ ಶೂಟ್ ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ಕಾಲ್ಪನಿಕ ಕಥೆಯಿಂದ ಏನೋ ಕಡಿಮೆ ಇರಲಿಲ್ಲ. ಈ ಸ್ಟಾರ್ ದಂಪತಿಗಳು ತಮ್ಮ ಹೊಂದಾಣಿಕೆಯ ಉಡುಗೆಗಳಲ್ಲಿ ಪರಿಪೂರ್ಣವಾಗಿ ಕಾಣುತ್ತಿದ್ದರು.

ಫೋಟೋಗಳನ್ನು ಹಂಚಿಕೊಂಡ ಕತ್ರಿನಾ ಮತ್ತು ವಿಕ್ಕಿ ಇಬ್ಬರೂ "ಪ್ರೀತಿಸಲು, ಗೌರವಿಸಲು ಮತ್ತು ಪ್ರೀತಿಸಲು" ಎಂದು ಶೀರ್ಷಿಕೆಯನ್ನು ಬರೆದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತ ನಟ ವಿಕ್ಕಿ ತನ್ನ ವಧು ಕತ್ರಿನಾಳ ಹಣೆಯನ್ನು ಎಷ್ಟು ಪ್ರೀತಿಯಿಂದ ಚುಂಬಿಸುತ್ತಾನೆ ಎಂಬುದನ್ನು ನಾವು ಇಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಅಷ್ಟೊಂದು ಸುಮಧುರವಾಗಿ ಕಾಣುತ್ತಿದೆ ವಿವಾಹ ಪೂರ್ವ ಫೋಟೋ ಶೂಟ್‌ನ ಒಂದು ಫೋಟೋ.

ಇದನ್ನೂ ಓದಿ: Katrina-Vicky Wedding: ಒಂದು ಚಿತ್ರದಲ್ಲೂ ಜೊತೆಯಾಗಿ ನಟಿಸಿಲ್ಲ, ಕತ್ರಿನಾ-ವಿಕ್ಕಿ ನಡುವೆ ಪ್ರೀತಿ ಹುಟ್ಟಿದ ಕತೆ ಸಖತ್ತಾಗಿದೆ!

ಕತ್ರಿನಾ ಮತ್ತು ವಿಕ್ಕಿ ಮದುವೆಯ ಮೋಡಿ ಮಾಡುವ ಫೋಟೋಗಳನ್ನು ಹಂಚಿಕೊಂಡರು ಮತ್ತು ಅದಕ್ಕೆ "ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಎಲ್ಲದಕ್ಕೂ ನಮ್ಮ ಹೃದಯದಲ್ಲಿ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ಕಾರಣ. ನಾವು ಈ ಹೊಸ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತಿದ್ದಂತೆ ನಿಮ್ಮ ಎಲ್ಲಾ ಪ್ರೀತಿ ಮತ್ತು ಆಶೀರ್ವಾದಗಳನ್ನು ನಾವು ಬಯಸುತ್ತೇವೆ” ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.
Published by:vanithasanjevani vanithasanjevani
First published: