ವಿಕ್ಕಿ ಕೌಶಲ್​ ಕೈಹಿಡಿದ ಕತ್ರಿನಾ; ಹೊಸ ದಂಪತಿಯ ಫೋಟೋ ಔಟ್​..!?

ನೂತನ ಬಾಲಿವುಡ್​ ಜೋಡಿಗೆ ಶುಭಾಶಯಗಳ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದಿದೆ.

ವಿಕ್ಕಿ ಕೌಶಲ್​ - ಕತ್ರಿನಾ ಕೈಫ್​

ವಿಕ್ಕಿ ಕೌಶಲ್​ - ಕತ್ರಿನಾ ಕೈಫ್​

 • Share this:
  ಕತ್ರಿನಾ ಕೈಫ್ (Katrina Kaif)  ಮತ್ತು ವಿಕ್ಕಿ ಕೌಶಲ್ (Vicky Kaushal) ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು, ಈ ಬಗ್ಗೆ ಎಎನ್​ಐ ವರದಿ ಮಾಡಿದೆ. ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್‌ನಲ್ಲಿ ಇಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇನ್ನು ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತಿಥಿಗಳಿಗೆ ನೋ ಫೋಟೋ (No Photo) ನಿಯಮ ವಿಧಿಸಲಾಗಿತ್ತು. ಈ ಹಿನ್ನಲೆ ಮದುವೆಯ ಕುರಿತ ಯಾವುದೇ ಅಧಿಕೃತ ಪೋಟೋವನ್ನು ಈ ಜೋಡಿಗಳು ಇನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವು ಪ್ಯಾಪಾರಾಜಿಗಳ ಕೈಗೆ ಕೆಲವು ಫೋಟೋ ಸಿಕ್ಕಿದೆ. ಈ ಫೋಟೋದಲ್ಲಿ ವಿವಾಹ ವಾದ ಬಳಿಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೋಟೆಯ ಮೇಲೆ ನಿಂತು ಮದುವೆಗೆ ಬಂದ ಅತಿಥಿಗಳಿಗೆ ಕೈ ಬೀಸುತ್ತಿರುವ ದೃಶ್ಯ ಕಾಣಬಹುದಾಗಿದೆ.

  ವಿಕಿಪೀಡಿಯಾದಲ್ಲಿ ಮದುವೆ ಕುರಿತ ಮಾಹಿತಿ
  ಇನ್ನು ವಿಕ್ಕಿ ಕೌಶಲ್​​ ಮತ್ತು ಕತ್ರಿನಾ ಅಧಿಕೃತ ಸತಿ ಪತಿಗಳಾಗಿರುವ ವಿಷಯ ತಕ್ಷಣಕ್ಕೆ ವಿಕಿಪೀಡಿಯಾದಲ್ಲಿ (Wikipedia)  ಅಪ್​ಡೇಟ್​ ಆಗಿದೆ. ಇನ್ನು ನೂತನ ಬಾಲಿವುಡ್​ ಜೋಡಿಗೆ ಶುಭಾಶಯಗಳ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದಿದೆ.
  ಇನ್ನು ಮದುವೆ ಹಿನ್ನಲೆ ವಿಕ್ಕಿಯ ತಾಯಿ ವೀಣಾ ಕೌಶಲ್ ಆಯೋಜಿಸಿದ ಸಾಂಪ್ರದಾಯಿಕ ಪಂಜಾಬಿ ಮಹಿಳಾ ಸಂಗೀತ ಜೊತೆಗೆ ಮಂಗಳವಾರ ಮೆಹೆಂದಿ ಸಮಾರಂಭ ನಡೆಯಿತು ಎಂದು ಕೆಲವರು ವರದಿಗಳು ತಿಳಿಸಿದ್ದು. ಬುಧವಾರ ಅರಿಶಿಣ ಸಮಾರಂಭ ನಡೆದಿದ್ದು, ನಂತರ ಪೂಲ್‌ಸೈಡ್ ಸಂಗೀತ ಕಾರ್ಯಕ್ರಮ ನಡೆಯಿತು.

  ಇದನ್ನು ಓದಿ: ರಾಕಿಂಗ್​ ದಂಪತಿಗೆ 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮ

  ಅತಿಥಿಗಳ ವಿಷಯದಲ್ಲೂ ರಹಸ್ಯ

  ಮದುವೆಯಲ್ಲಿ ಭಾಗಿಯಾದ ಅತಿಥಿಗಳ ಬಗ್ಗೆ ಕೂಡ ರಹಸ್ಯ ಕಾಪಾಡಿಕೊಂಡ ಜೋಡಿ
  ತಮ್ಮ ಮದುವೆ ವಿಷಯದ ಕುರಿತು ಹೆಚ್ಚು ರಹಸ್ಯ ಕಾಪಾಡಿಕೊಂಡ ಈ ಜೋಡಿ ಮದುವೆಯ ಅತಿಥಿಗಳ ಪಟ್ಟಿಯು ತುಂಬಾ ರಹಸ್ಯವಾಗಿರಿಸಿತ್ತು. ಯಾರು ಯಾರು ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ವಿಷಯ ಎಲ್ಲೂ ಹೊರ ಬಂದಿರಲಿಲ್ಲ, ಸೋಮವಾರ ಜೈಪುರದಲ್ಲಿ ಸೆಲೆಬ್ರಿಟಿಗಳು ಇಳಿಯಲು ಪ್ರಾರಂಭಿಸಿದಾಗಲೇ ಮದುವೆಗೆ ಯಾರೆಲ್ಲಾ ಆಹ್ವಾನಿತರಾಗಿದ್ದಾರೆ ಎಂಬುದು ಬಹಿರಂಗ ಆಯಿತು.

  ಇದನ್ನು ಓದಿ: ಪ್ರಭಾಸ್​ ಜೊತೆ ನಟಿಸೋಕೆ ದೀಪಿಕಾ ಪಡುಕೋಣೆಗೆ ಭಯವಂತೆ!

  ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಮತ್ತು ಅವರ ಪತ್ನಿ, ಮತ್ತು ನಟಿಯರಾದ ಶರ್ವರಿ ವಾಘ್ ಮತ್ತು ರಾಧಿಕಾ ಮದನ್ ಅವರು ವಿಕ್ಕಿ ಕೌಶಲ್ ಅವರ ಸಹೋದರ ಸನ್ನಿ ಅವರ ಸ್ನೇಹಿತರು, ವಿಕ್ಕಿ ಬಾಲ್ಯ ಸ್ನೇಹಿತೆ ನಟಿ ಮಾಳವಿಕಾ ಮೋಹನನ್ ಭಾಗಿಯಾಗಿದ್ದಾರೆ

  ಪಂಜಾಬಿ ಸಂಗೀತ ಪ್ರಿಯ ವಿಕ್ಕಿ
  ವಿಕ್ಕಿ ಕೌಶಲ್​ಗೆ ಪಂಜಾಬಿ ಸಂಗೀತ ಎಂದರೆ ಬಲು ಇಷ್ಟ ಇದೇ ಹಿನ್ನಲೆ ಅವರ ಮದುವೆಗೆ ಪಂಜಾಬಿ ಸಂಗೀತದ ಘಮ ಹೆಚ್ಚಿದೆ ಎಂದು ತಿಳಿದು ಬಂದಿದೆ. ಜೈಪುರ ವಿಮಾನ ನಿಲ್ದಾಣದಲ್ಲಿ ಹಲವಾರು ಪಂಜಾಬಿ ಸಂಗೀತ ತಾರೆಯರನ್ನು ಗುರುತಿಸಲಾಯಿತು, ಬಹುಶಃ ಸಂಗೀತಕ್ಕಾಗಿ. ಅವರಲ್ಲಿ ಗುರುದಾಸ್ ಮಾನ್, ಆಸ್ತಾ ಗಿಲ್, ಆರ್‌ಡಿಬಿಯ ಮಂಜ್ ಮ್ಯೂಸಿಕ್ ಮತ್ತು ಅವರ ಪತ್ನಿ ನಿಂಡಿ ಕೌರ್, ಹಾರ್ಡಿ ಸಂಧು ಮತ್ತು ಡಿಜೆ ಚೇತಾಸ್ ಸೇರಿದ್ದು, ಪಂಜಾಬಿ ಸಂಗೀತ ಮದುವೆಯ ಆಕರ್ಷಣೆಯಾಗಿತ್ತು ಎಂದು ತಿಳಿದು ಬಂದಿದೆ.

  ಕತ್ರಿನಾ ಕೈಫ್​ ವಯಸ್ಸಿನಲ್ಲಿ ವಿಕ್ಕಿ ಕೌಶಲ್​ಗಿಂತ ಐದು ವರ್ಷ ದೊಡ್ಡವರಾಗಿದ್ದಾರೆ. ಆಸ್ತಿ ಹೊಂದಿರುವ ವಿಚಾರದಲ್ಲೂ ಕೂಡ ಕತ್ರಿನಾ ವಿಕ್ಕಿಗಿಂತ ಒಂದು ಕೈ ಹೆಚ್ಚಿದ್ದಾರೆ. ಕತ್ರಿನಾ ನಟ ಸೈಫ್ ಆಲಿ ಖಾನ್​ ಚಿತ್ರದ ಮೂಲಕ ಬಾಲಿವುಡ್​​ ಪ್ರವೇಶಿಸಿದ್ದರು. ವಿದೇಶಿ ಪ್ರಜೆಯಾಗಿರುವ ಅವರು ಈಗ ದೇಸಿ ಹುಡುಗನ ಕೈ ಹಿಡಿದು ಭಾರತದ ನಟಿ ಜೊತೆಗೆ ಸೊಸೆ ಆಗಿದ್ದಾರೆ
  Published by:Seema R
  First published: