100 ಕೋಟಿಗೆ ಸೇಲ್​ ಆಯ್ತಂತೆ ಕತ್ರಿನಾ-ವಿಕ್ಕಿ ಮದುವೆ ವಿಡಿಯೋ: ನವಜೋಡಿ ವಿರುದ್ಧ ದೂರು ದಾಖಲು!

OTT ಸಂಸ್ಥೆಯೊಂದು ಕತ್ರಿನಾ ವಿಕ್ಕಿ ಜೊತೆ ಡೀಲ್ ಕುದುರಿಸಿದೆಯಂತೆ. ಇಬ್ಬರು ಮದುವೆಯ ಸಂಭ್ರಮವನ್ನು OTT ಸಂಸ್ಥೆ ಸೆರೆ ಹಿಡಿದು ತನ್ನ ವೇದಿಕೆಯಲ್ಲಿ ಪ್ರದರ್ಶನ ಮಾಡಲಿದೆ. ಇದಕ್ಕೆ ಕತ್ರಿನಾ-ವಿಕ್ಕಿ ಮುಂದೆ ಬರೋಬ್ಬರಿ 100 ಕೋಟಿ ಆಫರ್ ಇಟ್ಟಿದೆಯಂತೆ.

ವಿಕ್ಕಿ ಕೌಶಲ್​ - ಕತ್ರಿನಾ ಕೈಫ್​

ವಿಕ್ಕಿ ಕೌಶಲ್​ - ಕತ್ರಿನಾ ಕೈಫ್​

  • Share this:
ಸದ್ಯ ಬಾಲಿವುಡ್​ ಅಂಗಳದಲ್ಲಿ ಕತ್ರಿನಾ ಕೈಫ್​- ವಿಕ್ಕಿ ಕೌಶಲ್(Katrina Kaif- Vicky Kaushal)​  ಅವರದ್ದೇ ಸುದ್ದಿ. ಅವರ ಮದುವೆ(marriage) ಹೀಗೆ ಆಗುತ್ತಿದೆಯಂತೆ. ಹೀಗೆ ಆಗುತ್ತಿದೆಯಂತ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಇಷ್ಟು ದಿನ ಏನು ಗೊತ್ತಿಲ್ಲದ ಹಾಗೇ ಇದ್ದ ಈ ಜೋಡಿ, ಡಿಸೆಂಬರ್​ 9ರಂದು ಹಸೆಮಣೆ ಏರಲಿದೆ. ಈಗಾಗಲೇ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೊಸ ವಿಷಯ ಏನಪ್ಪಾ ಅಂದರೆ, ಇವರ ಮದುವೆ ವಿಡಿಯೋ 100 ಕೋಟಿಗೆ ಸೇಲ್(Sale)​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಓಟಿಟಿ(OTT) ವೇದಿಕೆಯೊಂದು ಈ ಜೋಡಿಗೆ ಬರೋಬ್ಬರಿ 100 ಕೋಟಿ ಆಫರ್ ಇಟ್ಟಿದೆಯಂಯತೆ. ಇದೊಂದು ಸುದ್ದಿ ಬಾಲಿವುಡ್(Bollywood) ಮಂದಿಯನ್ನು ಇನ್ನಿಲ್ಲದಂತೆ ತಲೆ ಕೆಡಿಸಿದೆ. ದೊಡ್ಡ ದೊಡ್ಡ ಸ್ಟಾರ್​ಗಳ ಸಿನಿಮಾಗಳನ್ನೇ ಓಟಿಟಿ ಇಷ್ಟು ಹಣ ಕೊಟ್ಟು ಖರೀದಿಸುವುದಿಲ್ಲ. ಹೀಗಿರುವಾಗ ಈ ಜೋಡಿಯ ಮದುವೆ ವಿಡಿಯೋವನ್ನು ಶೂಟ್​ ಮಾಡಿ ತಮ್ಮ ಓಟಿಟಿ ಸಂಸ್ಥೆ ಮೂಲಕ ರಿಲೀಸ್ ಮಾಡಲು 100 ಕೋಟಿ ಡೀಲ್​(Deal) ಮುಂದಿಟ್ಟಿದ್ದಾರೆ ಎಂಬ ಸುದ್ದಿ ಬಾಲಿವಡ್​ನಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗುತ್ತಿದೆ . ವಿಷಯ ಕೇಳಿ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ. 

100 ಕೋಟಿ ಡೀಲ್​ಗೆ ಸಹಿ ಹಾಕಿದ ನವ ಜೋಡಿ

ಕೆಲವು ದಿನಗಳಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈ ವೇಳೆ OTT ಸಂಸ್ಥೆಯೊಂದು ಕತ್ರಿನಾ ವಿಕ್ಕಿ ಜೊತೆ ಡೀಲ್ ಕುದುರಿಸಿದೆಯಂತೆ. ಇಬ್ಬರು ಮದುವೆಯ ಸಂಭ್ರಮವನ್ನು OTT ಸಂಸ್ಥೆ ಸೆರೆ ಹಿಡಿದು ತನ್ನ ವೇದಿಕೆಯಲ್ಲಿ ಪ್ರದರ್ಶನ ಮಾಡಲಿದೆ. ಇದಕ್ಕೆ ಕತ್ರಿನಾ-ವಿಕ್ಕಿ ಮುಂದೆ ಬರೋಬ್ಬರಿ 100 ಕೋಟಿ ಆಫರ್ ಇಟ್ಟಿದೆಯಂತೆ. ಆದರೆ, ಇಷ್ಟು ದೊಡ್ಡ ಆಫರ್ ಕೊಟ್ಟ ಆ ಸಂಸ್ಥೆ ಯಾವುದು? ನಿಜಕ್ಕೂ 100 ಕೋಟಿ ಆಫರ್ ಮಾಡಿದೆಯಾ? ಅನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇದನ್ನು ಓದಿ : ಇವ್ರ ಮದ್ವೆಗೆ ಫೋನ್​ ತರಂಗಿಲ್ಲ..ಕೋಡ್​ ಕೊಟ್ರೆ ಮಾತ್ರ ಎಂಟ್ರಿ: ಕತ್ರಿನಾ-ವಿಕ್ಕಿ ವಿವಾಹಕ್ಕೆ ಹೈ ಸೆಕ್ಯೂರಿಟಿ!

ಕತ್ರಿನಾ -ವಿಕ್ಕಿ ವಿರುದ್ಧ ದೂರು ದಾಖಲು!

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯು ರಾಜಸ್ಥಾನದ ಸವಾಯಿ ಮಾಧೋಪುರ್‌ನ ಭರ್ವರಾ ಅರಮನೆಯಲ್ಲಿ ನಡೆಯಲಿದೆ.ಆದರೆ ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಭರ್ವರಾ ಅರಮನೆಯ ಸಮೀಪದ ನಿವಾಸಿಗಳಿಗೆ ಸಮಸ್ಯೆ ತಲೆದೋರಿದೆ. ವಿವಿಐಪಿಗಳು ವಿವಾಹಕ್ಕೆ ಆಗಮಿಸುವ ಕಾರಣದಿಂದಾಗಿ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ಸ್ಥಳೀಯರಿಗೆ ಓಡಾಡಲು ಕಷ್ಟವಾಗತ್ತಿದೆ. ಇದೇ ವಿಚಾರಕ್ಕೆ ನೇತ್ರಬಿಂದ್ ಸಿಂಗ್ ಜಾದೋನ್ ಹೆಸರಿನ ವಕೀಲರೊಬ್ಬರು ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ : Private Planeನಲ್ಲಿ ರಾಜಸ್ಥಾನಕ್ಕೆ ಹೊರಟ ವಿಕ್ಕಿ, ಕತ್ರಿನಾ ಕೈಫ್

'ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹದಿಂದಾಗಿ ಚೌಹಾಟ್ ಮಠ ದೇವಾಲಯದ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಭಕ್ತಾದಿಗಳು ತೊಂದರೆ ಪಡುತ್ತಿದ್ದಾರೆ. ನನಗೆ ತಾರಾ ಜೋಡಿಯ ವಿವಾಹದ ಬಗ್ಗೆ ಬೇಸರವಿಲ್ಲ ಆದರೆ ದೇವಾಲಯದ ರಸ್ತೆಯನ್ನು ಬಂದ್ ಮಾಡಿರುವುದು ಭಕ್ತಾದಿಗಳಿಗೆ ಸಮಸ್ಯೆ ಆಗಿದೆ'' ಎಂದು ವಕೀಲರು ಆರೋಪಿಸಿದ್ದಾರೆ.

ಕೋಡ್​ ಇದ್ರೆ ಮಾತ್ರ ಒಳಗೆ ಎಂಟ್ರಿ!

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆದು ನೀಡುವುದನ್ನು ನೋಡಿದ್ದೇವೆ. ಆದರೆ ಕೋಡ್​ ಕೊಟ್ಟಿರುವುದನ್ನು ಕೇಳಿದ್ದೀರ. ಚಾನ್ಸ್​ ಇಲ್ಲ, ಕೇವಲ ಬಾಂಡ್ ಸಿನಿಮಾಗಳು ಈ ರೀತಿಯ ಕೋಡ್​ಗಳನ್ನು ನೋಡಿದ್ದೀರ. ಆದರೆ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕೋಡ್ ನೀಡಲಾಗಿದೆಯಂತೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಈ ಕೋಡ್​ ತೋರಿಸಿದರೆ ಮಾತ್ರ ಅವರ ಮದುವೆಗೆ ಎಂಟ್ರಿ ನೀಡಲಾಗುತ್ತಂತೆ.
Published by:Vasudeva M
First published: