Katrina Kaif ಫಿಟ್ ಆಗಿರಲು ಜಿಮ್‌ನಲ್ಲಿ ಏನೆಲ್ಲಾ ಕಸರತ್ತು ಮಾಡುತ್ತಾರೆ ನೋಡಿ..

Katrina Kaif: ನೆಚ್ಚಿನ ನಟ ನಟಿಯರು ಪೋಸ್ಟ್ ಮಾಡುವಂತಹ ಫಿಟ್ನೆಸ್ ವಿಡಿಯೋಗಳು ಅವರ ಲಕ್ಷಾಂತರ ಅಭಿಮಾನಿಗಳಿಗೆ ಒಂದು ಆರೋಗ್ಯಕರವಾದಂತಹ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.

ಕತ್ರಿನಾ ಕೈಫ್/Katrina Kaif

ಕತ್ರಿನಾ ಕೈಫ್/Katrina Kaif

  • Share this:

ಬಾಲಿವುಡ್‌ನಲ್ಲಿ ಅನೇಕ ನಟ ನಟಿಯರು ತಮ್ಮ ದೇಹವನ್ನು ಹೆಚ್ಚು ಆರೋಗ್ಯಕರವಾಗಿ ಇರಿಸಲು ಹಾಗೂ ಫಿಟ್ ಆಗಿರಲು ಪ್ರತೀದಿನ ಜಿಮ್‌ನಲ್ಲಿ ಕಠಿಣವಾದ ತಾಲೀಮು ನಡೆಸುತ್ತಾರೆ.ಅದರಲ್ಲಿಯೂ ಕೆಲವು ಬಾಲಿವುಡ್ ನಟಿಯರು ಸಹ ತಾವೇನೂ ಕಮ್ಮಿ ಇಲ್ಲ ಎಂಬಂತೆ ತುಂಬಾನೇ ಫಿಟ್ ಕಾಣಲು ಪ್ರತಿದಿನ ಜಿಮ್ ಗೆ ಹೋಗಿ ಕಠಿಣವಾದ ತಾಲೀಮು ನಡೆಸುವುದನ್ನು ನಮಗೆಲ್ಲಾ ಗೊತ್ತಿರುವ ವಿಷಯವೇ ಆಗಿದೆ. ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯ ಪುಟದಲ್ಲಿ ತಮ್ಮ ಅಭಿಮಾನಿಗಳಿಗಾಗಿ ವ್ಯಾಯಾಮದ ವಿಡಿಯೋವನ್ನು ಸಹ ಹಂಚಿಕೊಳ್ಳುವುದನ್ನು ನಾವೆಲ್ಲಾ ದಿನನಿತ್ಯ ನೋಡುತ್ತಲೇ ಇರುತ್ತೇವೆ. ತಮ್ಮ ನೆಚ್ಚಿನ ನಟ ನಟಿಯರು ಪೋಸ್ಟ್ ಮಾಡುವಂತಹ ಫಿಟ್ನೆಸ್ ವಿಡಿಯೋಗಳು ಅವರ ಲಕ್ಷಾಂತರ ಅಭಿಮಾನಿಗಳಿಗೆ ಒಂದು ಆರೋಗ್ಯಕರವಾದಂತಹ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.


ಫಿಟ್ನೆಸ್ ಅಂತ ವಿಷಯ ಬಂದಾಗ ನಟಿ ಕತ್ರಿನಾ ಕೈಫ್ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರು ತಮ್ಮ ತರಬೇತುದಾರ ಸೂಚಿಸುವಂತಹ ತಾಲಿಮನ್ನು ಚಾಚು ತಪ್ಪದೆ ಮಾಡುತ್ತಾರೆ. ಇತ್ತೀಚೆಗೆ, ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಅವರು ಜಿಮ್‌ನಲ್ಲಿ ವಿವಿಧ ಉಪಕರಣಗಳೊಂದಿಗೆ ಕಠಿಣವಾದ ತಾಲೀಮು ನಡೆಸುತ್ತಿರುವುದನ್ನು ನಾವು ಕಾಣಬಹುದಾಗಿದೆ.


ವಿಡಿಯೋವನ್ನು ಅವರ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳುತ್ತಾ, “ನಾನು ನನ್ನ ಮನಸ್ಸಿಗೆ ತರಬೇತಿ ನೀಡುತ್ತೇನೆ.. ನನ್ನ ದೇಹವು ಅದನ್ನು ಅನುಸರಿಸುತ್ತದೆ. ಕೆಲವೊಮ್ಮೆ ಅನುಸರಿಸದೆ ಇದ್ದಾಗ ಪ್ರಸಿದ್ಧ ಫಿಟ್ನೆಸ್ ತರಬೇತುದಾರರಾದಂತಹ ರೆಜಾ ಕತಾನಿ ಅವರ ಬಳಿ ಸಲಹೆಯನ್ನು ತೆಗೆದು ಕೊಳ್ಳುತ್ತೇನೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಸುಮಾರು 3 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿ ಇಷ್ಟ ಪಟ್ಟಿದ್ದಾರೆ.


ರೆಜಾ ಕತಾನಿ ಅವರು ನಟ ಸಲ್ಮಾನ್ ಖಾನ್, ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸೋನಾಕ್ಷಿ ಸಿನ್ಹಾ ಅವರೊಂದಿಗೆ ಸಹ ಕೆಲಸ ಮಾಡಿದ್ದಾರೆ.


Read Also⇒ Kabzaa Motion Poster: ರಿಲೀಸ್ ಆಯ್ತು ‘‘ಕಬ್ಜ‘‘ ಸಿನಿಮಾದ ಮೋಷನ್ ಪೋಸ್ಟರ್; ಉಪ್ಪಿ ಹೊಸ ಲುಕ್​ಗೆ ಪ್ರೇಕ್ಷಕರು ಫಿದಾ

ನಟಿ ಕತ್ರಿನಾ ಕೈಫ್ ಅವರು ಪ್ರಸ್ತುತವಾಗಿ ‘ಟೈಗರ್’ ಸಿರೀಸ್ ನ ಮೂರನೇ ಕಂತಿನ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಸಲ್ಮಾನ್ ಖಾನ್ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ‘ಟೈಗರ್ 3’ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಟರ್ಕಿಯಲ್ಲಿ ಮುಗಿಸಿಕೊಂಡು ತಮ್ಮ ಮುಂದಿನ ಚಿತ್ರೀಕರಣಕ್ಕಾಗಿ ಚಿತ್ರ ತಂಡದವರು ಆಸ್ಟ್ರಿಯಾಕ್ಕೆ ತೆರಳಿದ್ದಾರೆ. ಕತ್ರಿನಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಪ್ರಕೃತಿಯೊಂದಿಗೆ ಸ್ವಲ್ಪ ಸಮಯ ಕಳೆದಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು.











View this post on Instagram






A post shared by Katrina Kaif (@katrinakaif)





ನಟ ಸಲ್ಮಾನ್ ಮತ್ತು ನಟಿ ಕತ್ರಿನಾ ಇಬ್ಬರೂ 2012 ರ ಪ್ರಾರಂಭದಿಂದಲೂ ಟೈಗರ್ ಸರಣಿಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಚಿತ್ರದಲ್ಲಿ ಕತ್ರಿನಾ ಅವರ ಹೆಸರು ಜೋಯಾ, ಸಲ್ಮಾನ್ ಪಾತ್ರದ ಹೆಸರು ಅವಿನಾಶ್. ಅವರಿಬ್ಬರು ಮೂರನೇ ಭಾಗದಲ್ಲೂ ಒಂದೇ ಹೆಸರುಗಳನ್ನು ಹೊಂದಿರುತ್ತಾರೆ. ವದಂತಿಗಳ ಪ್ರಕಾರ ಇನ್ನೊಬ್ಬ ನಟ ಇಮ್ರಾನ್ ಹಶ್ಮಿ ಅವರು ಈ ಚಿತ್ರದಲ್ಲಿ ಸಲ್ಮಾನ್ ಅವರ ವಿರೋಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

First published: