Akshay Kumar And Katrina Kaif ; ಅಕ್ಷಯ್ ಕುಮಾರ್ ಕೆನ್ನೆಗೆ ಹೊಡೆದ ವಿಷಯ ಬಿಚ್ಚಿಟ್ಟ ಕತ್ರಿನಾ ಕೈಫ್

ಆ ನಂತರ ಕಪಿಲ್, ಕತ್ರಿನಾರ ಜೊತೆ ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ಅವುಗಳಿಗೆ ರೀಟೇಕ್ ಬೇಕಾಗುತ್ತದೆಯೇ ಎಂದು ಕೇಳುತ್ತಾರೆ. ಅದಕ್ಕೆ , “ಇಲ್ಲ, ರೊಮ್ಯಾಂಟಿಕ್ ದೃಶ್ಯಗಳಲ್ಲೂ ನಾವು ಹೆಚ್ಚು ರೀಟೇಕ್ ತೆಗೆದುಕೊಳ್ಳುವುದಿಲ್ಲ. ಅಕ್ಷಯ್ ಮತ್ತು ನನ್ನ ಟ್ಯೂನಿಂಗ್ ತುಂಬಾ ಚೆನ್ನಾಗಿದೆ” ಎಂದು ಉತ್ತರಿಸುತ್ತಾರೆ ಕತ್ರೀನಾ.

ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್

ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್

  • Share this:

ಅಕ್ಷಯ್ ಕುಮಾರ್ (Bollywood Actor Akshay kumar) ಮತ್ತು ಕತ್ರಿನಾ ಕೈಫ್ (Katrina Kaif) ಅಭಿನಯದ ಚಿತ್ರ ಸೂರ್ಯವಂಶಿ (Sooryavanshi) ಇಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ, ತಾನು ಅಕ್ಷಯ್ ಕುಮಾರ್ ಅವರ ಕೆನ್ನೆಗೆ ಹೊಡೆಯುವ ದೃಶ್ಯವನ್ನು ಯಾವುದೇ ರೀಟೇಕ್ ಇಲ್ಲದೆ ಚಿತ್ರೀಕರಿಸಿರುವುದಾಗಿ ಕತ್ರೀನಾ ಕೈಫ್ ಹೇಳಿದ್ದಾರೆ. ಅವರಿಬ್ಬರು ಈ ವಾರಾಂತ್ಯದಲ್ಲಿ ದ ಕಪಿಲ್ ಶರ್ಮಾ ಶೋನಲ್ಲಿ (Kapil Sharma Show)ಕಾಣಿಸಿಕೊಳ್ಳಲಿದ್ದು, ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಳ್ಳಲಿದ್ದಾರೆ.ರೋಹಿತ್ ಶೆಟ್ಟಿ (Rohit Shetty) ನಿರ್ದೇಶನದ ಈ ಸಿನಿಮಾದಲ್ಲಿ, ಅಕ್ಷಯ್ ಕುಮಾರ್ ಅಪರಾಧದ ವಿರುದ್ಧ ಹೋರಾಡುವ ಡಿಎಸ್‍ಪಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕತ್ರೀನಾ ಕೈಫ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಜಯ್ ದೇವಗನ್ ಮತ್ತು ರಣ್‍ವೀರ್ ಸಿಂಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ.


ಯಾವುದೇ ರೀಟೇಕ್ ಇಲ್ಲ

ದ ಕಪಿಲ್ ಶರ್ಮಾ ಶೋನಲ್ಲಿ, ಕತ್ರಿನಾ ತಾನು ಅಕ್ಷಯ್ ಕೆನ್ನೆಗೆ ಹೊಡೆಯುವ ದೃಶ್ಯವೊಂದರ ಬಗ್ಗೆ ಮಾತನಾಡುತ್ತಾರೆ. ಆಗ ನಿರೂಪಕ ಕಪಿಲ್, ಆಕೆಯನ್ನು ರೀಟೇಕ್‍ಗಳ ಬಗ್ಗೆ ಕೇಳಿದಾಗ, “ ಇಲ್ಲ, ಕೆನ್ನೆಗೆ ಹೊಡೆಯುವ ದೃಶ್ಯದಲ್ಲಿ ಯಾವುದೇ ರೀಟೇಕ್ ಇರಲಿಲ್ಲ. ಒಂದೇ ಸಲಕ್ಕೆ ಮಾಡಿದೆ” ಎಂದು ಉತ್ತರಿಸುತ್ತಾರೆ. “ನಿಜಕ್ಕೂ ಆಗಿತ್ತು. ನಿಜವಾಗಿಯೂ ಹೊಡೆದಿದ್ದಾರೆ. ವಾಸ್ತವದಲ್ಲಿ, ಅಂತರ ಕಾಣುತ್ತದೆ ಎಂಬ ಕಾರಣಕ್ಕೆ ಆಕೆ ನಿಜವಾಗಿಯೂ ನನ್ನನ್ನು ಹೊಡೆದರು” ಎಂದು ಅಕ್ಷಯ್ ಕೂಡ ಕತ್ರೀನಾ ಮಾತಿಗೆ ಧ್ವನಿಗೂಡಿಸುತ್ತಾರೆ.


ಆ ನಂತರ ಕಪಿಲ್, ಕತ್ರಿನಾರ ಜೊತೆ ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ಅವುಗಳಿಗೆ ರೀಟೇಕ್ ಬೇಕಾಗುತ್ತದೆಯೇ ಎಂದು ಕೇಳುತ್ತಾರೆ. ಅದಕ್ಕೆ , “ಇಲ್ಲ, ರೊಮ್ಯಾಂಟಿಕ್ ದೃಶ್ಯಗಳಲ್ಲೂ ನಾವು ಹೆಚ್ಚು ರೀಟೇಕ್ ತೆಗೆದುಕೊಳ್ಳುವುದಿಲ್ಲ. ಅಕ್ಷಯ್ ಮತ್ತು ನನ್ನ ಟ್ಯೂನಿಂಗ್ ತುಂಬಾ ಚೆನ್ನಾಗಿದೆ” ಎಂದು ಉತ್ತರಿಸುತ್ತಾರೆ ಕತ್ರೀನಾ.


ಅಕ್ಷಯ್, ಕತ್ರಿನಾ ಜೊತೆಯಾಗಿ 6 ಚಿತ್ರಗಳಲ್ಲಿ ನಟನೆ

ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಇದುವರೆಗೆ ಒಟ್ಟು 6 ಚಿತ್ರಗಳಲ್ಲಿ ನಟಿಸಿದ್ದಾರೆ- ಹಮ್ ಕೋ ದಿವಾನಾ ಕರ್‍ಗಯೆ, ನಮಸ್ತೆ ಲಂಡನ್, ಸಿಂಗ್ ಇಸ್ ಕಿಂಗ್, ವೆಲ್‍ಕಮ್, ದೇ ಧನಾ ಧನ್ ಮತ್ತು ತೀಸ್ ಮಾರ್ ಖಾನ್.


ಮಾಧ್ಯಮವೊಂದಕ್ಕೆ ನೀಡಿದ್ದ ಹಳೆಯ ಸಂದರ್ಶನವೊಂದರಲ್ಲಿ, ಕತ್ರಿನಾ ಕೈಫ್ , ವೆಲ್‍ಕಮ್ ಚಿತ್ರದ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಹೊಡೆದಿದ್ದ ಬಗ್ಗೆ ಮಾತನಾಡಿದ್ದರು.


ಇದನ್ನೂ ಓದಿ:  Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

ಜೋರಾಗಿ ಹೊಡಿ ಅಂತ ಹೇಳಿದರು

“ನಾನು ವೆಲ್‍ಕಮ್ ಚಿತ್ರೀಕರಣದ ಸಂದರ್ಭದಲ್ಲಿ ಅಕ್ಷಯ್ ಕೆನ್ನೆಗೆ ಹೊಡೆದಿದ್ದೆ. ನಾನು ದ್ರಶ್ಯವೊಂದರಲ್ಲಿ ಅಕ್ಷಯ್‍ಗೆ ಹೊಡೆಯಬೇಕಿತ್ತು. ನಾನು ಹೊಡೆದೆ, ಆದರೆ ಅದೇಕೋ ಸಹಜವಾಗಿ ಮೂಡಿಬರಲಿಲ್ಲ ಮತ್ತು ನಿರ್ದೇಶಕರು ರೀಟೇಕ್ ಕೇಳಿದರು. ನಾನು ಮತ್ತೆ ಹೊಡೆದೆ, ಆದರೆ ಸರಿಯಾಗಿ ಮಾಡಲು ಸಾಧ್ಯವಾಗಲಿಲ್ಲ. ಅಕ್ಷಯ್‍ಗೆ ರೋಸಿ ಹೋಗಿ, ‘ಬಾ ನನ್ನ ಕೆನ್ನೆಗೆ ಜೋರಾಗಿ ಹೊಡಿ’ ಎಂದು ಕಿರುಚಿದರು. ನಾನು ಸಿದ್ಧವಾಗಿ, ಅವರ ಕೆನ್ನೆಗೆ ಜೋರಾಗಿ ಬಾರಿಸಿದೆ. ಸೆಟ್‍ನಲ್ಲಿದ್ದ ಎಲ್ಲರೂ ಮರಗಟ್ಟಿ ಹೋಗಿದ್ದರು ಮತ್ತು ಅಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧವಿತ್ತು” ಎಂದು ಆಕೆ ಹೇಳಿಕೊಂಡಿದ್ದರು.


ಸಿನಿಮಾ ಬಿಡುಗಡೆ ವಿಳಂಬ

ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಅಭಿನಯದ ಹೊಸ ಚಿತ್ರ, ಸೂರ್ಯವಂಶಿ ನವಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 2020ರಲ್ಲಿ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗಿತ್ತು.


ಇದನ್ನೂ ಓದಿ:  RIP Puneeth Rajkumar; ನಮ್ಮ ಹೃದಯಗಳಲ್ಲಿ ಅಪ್ಪು ನಗ್ತಾರೆ: ಕಣ್ಣೀರು ಹಾಕುತ್ತಲೇ ತೆರಳಿದ ನಟ ಸೂರ್ಯ

ಸೂರ್ಯವಂಶಿ, ರೋಹಿತ್ ಶೆಟ್ಟಿ ಅವರು ಪೊಲೀಸ್ ಸಿನಿಮಾ ಸರಣಿಗಳ ಮುಂದುವರಿಕೆಯಾಗಿದೆ. ಅಜಯ್ ದೇವಗನ್ ಅಭಿನಯದ ಸಿಂಗಮ್ ಮತ್ತು ಸಿಂಗಮ್ ರಿಟರ್ನ್ಸ್‌ನೊಂದಿಗೆ ಆರಂಭವಾಗಿ, ರಣ್‍ವೀರ್ ಸಿಂಗ್ ಮತ್ತು ಅಜಯ್ ದೇವಗನ್ ಅಭಿನಯದ ಸಿಂಬಾ ಸಿನಿಮಾದ ಬಳಿಕ, ಇದೀಗ ಅಕ್ಷಯ್ ಕುಮಾರ್ ಪಾತ್ರದ ಮೂಲಕ ಮುಂದೆ ಸಾಗುತ್ತಿದೆ.


Published by:Mahmadrafik K
First published: