• Home
  • »
  • News
  • »
  • entertainment
  • »
  • Vicky and Katrina: ವಿಕ್ಕಿ- ಕತ್ರಿನಾ ಮದುವೆ ಬಳಿಕದ ಜೀವನ ಹೀಗಿದ್ಯಂತೆ; ಪತಿ ಬಗ್ಗೆ ಹೇಳಿದ್ದೇನು?

Vicky and Katrina: ವಿಕ್ಕಿ- ಕತ್ರಿನಾ ಮದುವೆ ಬಳಿಕದ ಜೀವನ ಹೀಗಿದ್ಯಂತೆ; ಪತಿ ಬಗ್ಗೆ ಹೇಳಿದ್ದೇನು?

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್

ಇತ್ತೀಚೆಗೆ, ನಟಿ ಕತ್ರಿನಾ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟರು ಮತ್ತು ಚಿತ್ರೀಕರಣದ ಕಾರಣದಿಂದಾಗಿ ತಾನು ಮತ್ತು ವಿಕ್ಕಿ ಇಬ್ಬರೂ ಸಾಕಷ್ಟು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಪ್ರಯಾಣಿಸುತ್ತಿದ್ದೇವೆ ಎಂದು ಹೇಳಿಕೊಂಡರು.

  • Share this:

ಬಾಲಿವುಡ್ ನಲ್ಲಿ (Bollywood) ಯಾವ ಸ್ಟಾರ್ ಜೋಡಿಯ (Star Couple) ಮದುವೆಯು ದೊಡ್ಡ ಮಟ್ಟದ ಸುದ್ದಿ ಮಾಡಿತ್ತು ಅಂತ ಕೇಳಿದರೆ, ನಮಗೆ ಥಟ್ಟನೆ ನೆನಪಾಗುವುದು ಬಾಲಿವುಡ್ ನಟಿ ಕತ್ರೀನಾ ಕೈಫ್ (Katrina Kaif) ಮತ್ತು ನಟ ವಿಕ್ಕಿ ಕೌಶಲ್ (Vicky Kaushal) ಅವರ ವಿವಾಹ. ಹೌದು.. ಸೆಲೆಬ್ರೆಟಿ ಈವೆಂಟ್ ಗಳ ಬಗ್ಗೆ ಹೆಚ್ಚು ಚರ್ಚೆಗೊಳಗಾದ ಸಮಾರಂಭಗಳಲ್ಲಿ ಕತ್ರಿನಾ ಮತ್ತು ವಿಕ್ಕಿ ಅವರ ಮದುವೆ ಸಮಾರಂಭ ಸಹ ಒಂದಾಗಿದೆ. ಈ ಸ್ಟಾರ್ ಜೋಡಿಯು ಡಿಸೆಂಬರ್ 9, 2021 ರಂದು ಸ್ವಲ್ಪ ಸಮಯದ ಪ್ರಣಯದ ನಂತರ ವಿವಾಹವಾಗಿದ್ದು (Marriage) ಬಹುತೇಕರಿಗೆ ಗೊತ್ತೇ ಇದೆ.


ಮಾಲ್ಡೀವ್ಸ್ ನಲ್ಲಿ ಅವರ ತ್ವರಿತ ಹನಿಮೂನ್ ನ ನಂತರ, ನಟ ವಿಕ್ಕಿ ಮತ್ತೆ ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈನಿಂದ ಹೊರಟರು ಮತ್ತು ನಟಿ ಕತ್ರಿನಾ ಕೂಡ ಅದೇ ರೀತಿ ಅವರ ಮುಂಬರುವ ಚಿತ್ರದ ಚಿತ್ರೀಕರಣಕ್ಕೆ ಹೋದರು.


ಕತ್ರಿನಾ ಮತ್ತು ವಿಕ್ಕಿ ಅವರ ವೈವಾಹಿಕ ಜೀವನ ಹೇಗಿದೆ?
ಈ ಇಬ್ಬರು ನಟ ಮತ್ತು ನಟಿ ತಮ್ಮ ಕೈಯಲ್ಲಿ ಒಂದೆರಡು ಚಿತ್ರಗಳನ್ನು ಹೊಂದಿದ್ದು, ಕತ್ರಿನಾ ಮತ್ತು ವಿಕ್ಕಿ ಇಬ್ಬರೂ ತಮ್ಮ ನವವಿವಾಹಿತ ಜೀವನವನ್ನು ತಮ್ಮ ಕೆಲಸದ ಬದ್ಧತೆಗಳೊಂದಿಗೆ ಸುಂದರವಾಗಿ ಬ್ಯಾಲೆನ್ಸ್ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಮದುವೆ ಏನೋ ಆಯಿತು, ಆದರೆ ಈ ನವ ದಂಪತಿಗಳು ಹೇಗಿದ್ದಾರೆ ಮತ್ತು ಅವರ ವೈವಾಹಿಕ ಜೀವನ ಹೇಗಿದೆ ಅಂತ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ.


ಇತ್ತೀಚೆಗೆ, ನಟಿ ಕತ್ರಿನಾ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟರು ಮತ್ತು ಚಿತ್ರೀಕರಣದ ಕಾರಣದಿಂದಾಗಿ ತಾನು ಮತ್ತು ವಿಕ್ಕಿ ಇಬ್ಬರೂ ಸಾಕಷ್ಟು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಪ್ರಯಾಣಿಸುತ್ತಿದ್ದೇವೆ ಎಂದು ಹೇಳಿಕೊಂಡರು.


ವಿಕ್ಕಿ ಕೌಶಲ್ ಜೊತೆ ವೈವಾಹಿಕ ಜೀವನ ಹೇಗಿದೆ ಅಂತಾರೆ ಕತ್ರಿನಾ..
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರು ಪರಸ್ಪರ ಇಷ್ಟಪಟ್ಟು ಸಂತೋಷದಿಂದ ವಿವಾಹವಾದವರು ಅಂತಾನೆ ಹೇಳಬಹುದು. ಇನ್ನೂ ಕೆಲಸ ವಿಷಯಕ್ಕೆ ಬಂದಾಗ ನಟಿ ಕತ್ರಿನಾ ಅವರು ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ತಮ್ಮ ಮುಂದಿನ ಚಿತ್ರವಾದ ‘ಫೋನ್ ಭೂತ್’ ನ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ, ನಟಿ ಕತ್ರಿನಾ ತನ್ನ ಗಂಡ ಮತ್ತು ನಟ ವಿಕ್ಕಿ ಅವರೊಂದಿಗಿನ ವೈವಾಹಿಕ ಜೀವನ ಹೇಗಿದೆ ಅಂತ ಬಿಚ್ಚಿಟ್ಟರು.


ಇದನ್ನೂ ಓದಿ: Nayanthara-Vignesh: 6 ವರ್ಷಗಳ ಹಿಂದೆ ಮದುವೆಯಾಗಿದ್ದ ನಯನತಾರಾ-ವಿಘ್ನೇಶ್! ಸರೋಗಸಿ ವಿವಾದದಲ್ಲಿ ಬಿಗ್ ಟ್ವಿಸ್ಟ್


ಚಿತ್ರೀಕರಣದಿಂದಾಗಿ ಇಬ್ಬರೂ ಕಳೆದ ವರ್ಷದಿಂದ ಸಾಕಷ್ಟು ಪ್ರಯಾಣಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ಅಲ್ಲದೆ "ವಿವಾಹವು ಎಲ್ಲರ ಜೀವನದಲ್ಲೂ ಒಂದು ದೊಡ್ಡ ಬದಲಾವಣೆಯಾಗಿರುತ್ತದೆ. ಮದುವೆಯಾದ ಮೇಲೆ ನೀವು ನಿಮ್ಮ ಜೀವನವನ್ನು ಇನ್ನೊಬ್ಬ ಬೇರೆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಶುರು ಮಾಡಿರುತ್ತೀರಿ ಮತ್ತು ಇದು ನಿಜವಾಗಿಯೂ ಸುಂದರವಾಗಿದೆ" ಎಂದು ಹೇಳಿದರು.


ಇಬ್ಬರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರಂತೆ!
ಕತ್ರಿನಾ ಅವರು ತಮ್ಮ ಚಿತ್ರೀಕರಣದ ಬ್ಯುಸಿ ವೇಳಾಪಟ್ಟಿಗಳಿಂದಾಗಿ ತಾನು ಮತ್ತು ವಿಕ್ಕಿ ಒಟ್ಟಿಗೆ ಹೆಚ್ಚು ಸಮಯ ಕಳೆಯುವ ಅವಕಾಶವನ್ನು ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.


ಆದರೆ ಇಬ್ಬರು ಸಿನೆಮಾ ನಟ ಮತ್ತು ನಟಿ ಮದುವೆಯಾದಾಗ ಪರಿಸ್ಥಿತಿ ಹೀಗೇ ಇರುತ್ತದೆ ಅಂತ ಕಾಣುತ್ತದೆ ಎಂದು ಅವರು ಹೇಳಿದರು. "ವಿಕ್ಕಿ ತನ್ನ ಶೂಟಿಂಗ್ ಗಳಿಂದಾಗಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕಡೆಗಳಲ್ಲಿ ಪ್ರಯಾಣಿಸುತ್ತಿದ್ದಾನೆ. ಅವರು ನನ್ನಂತೆಯೇ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ನಿರಂತರವಾಗಿ ಪ್ರಯಾಣಿಸಬೇಕಾದ ಈ ವೃತ್ತಿಯಲ್ಲಿರುವ ಯಾವುದೇ ಇಬ್ಬರು ಮದುವೆಯಾದರೆ, ಹೀಗೆ ಸಮಯ ಸಿಗುವುದಿಲ್ಲ ಅಂತ ನನಗೆ ಅನ್ನಿಸುತ್ತದೆ” ಎಂದು ನಟಿ ಹೇಳಿದರು.


ಇದನ್ನೂ ಓದಿ:  Salaar-Prithviraj Sukumaran: ಸಲಾರ್​​ನಲ್ಲಿ ಪೃಥ್ವಿರಾಜ್ ಮಾಸ್ ಲುಕ್! ಕುತೂಹಲ ಕೆರಳಿಸಿದ ಫಸ್ಟ್ ಲುಕ್


"ಆದರೆ ವಿಕ್ಕಿ ಮಾತ್ರ ತುಂಬಾ ಅದ್ಭುತ ವ್ಯಕ್ತಿ ಮತ್ತು ನನ್ನ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ಹೊಂದಿರುವುದು ತುಂಬಾನೇ ಒಳ್ಳೆಯದು ಅಂತ ನಾನು ಭಾವಿಸುತ್ತೇನೆ" ಎಂದು ಕತ್ರಿನಾ ಹೇಳಿದರು.

Published by:Ashwini Prabhu
First published: