Vicky and Katrina: ವಿಕ್ಕಿ ಬಗ್ಗೆ ಕಲ್ಪನೆಯೇ ಮಾಡಿರಲಿಲ್ಲ, ಪತಿ ಬಗ್ಗೆ ಕತ್ರಿನಾ ಅಚ್ಚರಿಯ ಮಾತು!

ಕತ್ರಿನಾ ತಮ್ಮ ಪತಿ ವಿಕ್ಕಿ ಕೌಶಲ್ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ವಿಕ್ಕಿ ಪತಿಯಾಗಿ ನಮ್ಮ ಜೀವನದಲ್ಲಿ ಬರುತ್ತಾರೆ ಎಂಬ ಕಲ್ಪನೆ ಕೂಡ ನನ್ನ ಮನಸ್ಸಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಕಾಫಿ ವಿದ್ ಕರಣ್ ಕಾರ್ಯಕ್ರಮದ 10 ನೇ ಎಪಿಸೋಡ್‌ನಲ್ಲಿ ಕತ್ರಿನಾ ಇಶಾನ್ ಖಟ್ಟರ್ ಮತ್ತು ಸಿದ್ಧಾರ್ಥ್ ಚತುರ್ವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ

ಕತ್ರಿನಾ ಹಾಗೂ ವಿಕ್ಕಿ

  • Share this:
ಕರಣ್ ಜೋಹರ್ ನಡೆಸಿಕೊಡುವ ಕಾಫ್ ವಿದ್ ಕರಣ್ ಸೀಸನ್ 7 (Koffee with Karan season 7) ವಿವಾದಗಳಿಂದಲೇ ಹೆಸರುವಾಸಿಯಾಗುತ್ತಿರುವ ಶೋ. ಚಿತ್ರ ರಂಗದ ಸೆಲೆಬ್ರಿಟಿಗಳನ್ನು ತಮ್ಮ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಹ್ವಾನಿಸುವ ಕರಣ್ (Karan), ನೇರವಾದ ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬುಗೊಳಿಸುತ್ತಾರೆ ಅಂತೆಯೇ ಸೆಲೆಬ್ರಿಟಿಗಳ (Celebrities) ಲವ್ ಲೈಫ್, ಖಾಸಗಿ ಜೀವನ, ವಿವಾದಗಳ ಬಗ್ಗೆಯೂ ಪ್ರಶ್ನೆಗಳ ಸುರಿಮಳೆಯನ್ನು ಕಾರ್ಯಕ್ರಮದಲ್ಲಿ ಕರಣ್ ನಡೆಸುತ್ತಾರೆ. ಮುಂಬರುವ ಸಂಚಿಕೆಯಲ್ಲಿ ಕತ್ರಿನಾ (Katrina) ತಮ್ಮ ಪತಿ ವಿಕ್ಕಿ ಕೌಶಲ್ (Vicky Kaushal) ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು, ವಿಕ್ಕಿ ಪತಿಯಾಗಿ ನಮ್ಮ ಜೀವನದಲ್ಲಿ ಬರುತ್ತಾರೆ ಎಂಬ ಕಲ್ಪನೆ ಕೂಡ ನನ್ನ ಮನಸ್ಸಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಕಾಫಿ ವಿದ್ ಕರಣ್ ಕಾರ್ಯಕ್ರಮದ 10 ನೇ ಎಪಿಸೋಡ್‌ನಲ್ಲಿ ಕತ್ರಿನಾ ಇಶಾನ್ ಖಟ್ಟರ್ ಮತ್ತು ಸಿದ್ಧಾರ್ಥ್ ಚತುರ್ವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಕಾಫಿ ವಿದ್ ಕರಣ್ ಗುರುವಾರ ಪ್ರದರ್ಶನ ಕಾಣಲಿದೆ.

ವಿಕ್ಕಿ ನನ್ನ ಅದೃಷ್ಟ ಎಂದು ಹೇಳಿದ ಕತ್ರೀನಾ
ತಮ್ಮ ಪತಿಯ ಬಗ್ಗೆ ತಮ್ಮ ಮನದಿಂಗಿತವನ್ನು ಅರುಹಿದ ನಟಿ, ನನಗೆ ಅವರ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ನಾನು ವಿಕ್ಕಿ ಕೌಶಲ್ ಅವರ ಹೆಸರು ಮಾತ್ರ ಕೇಳಿದ್ದೆ ಅವರ ಕುರಿತಾದ ಬೇರೇನೂ ಮಾಹಿತಿ ನನಗೆ ತಿಳಿದಿರಲಿಲ್ಲ. ಆದರೆ ಅವರನ್ನು ಭೇಟಿಯಾದ ನಂತರ ನಿಜ ಹೇಳಬೆಕೆಂದರೆ ನಾನು ಗೆದ್ದೆ.

ಜೋಯಾ ಅಖ್ತರ್ ಆಯೋಜಿಸಿದ್ದ ಪಾರ್ಟಿಯಲ್ಲಿಯೇ ಕತ್ರೀನಾ ಹಾಗೂ ಕೌಶಲ್ ಪರಸ್ಪರರನ್ನು ಮೆಚ್ಚಿಕೊಂಡಿದ್ದು ತಾನು ವಿಕ್ಕಿ ಕೌಶಲ್‌ನ ಪ್ರೀತಿಗೆ ಬಿದ್ದಿರುವುದು ನಿಜ ಎಂಬುದನ್ನು ಮೊದಲ ಬಾರಿಗೆ ಆಕೆ ಒಪ್ಪಿಕೊಂಡಿದ್ದು ಜೋಯಾ ಅಖ್ತರ್‌ ಬಳಿ ಎಂಬುದು ನಟಿಯ ಹೇಳಿಕೆಯಾಗಿದೆ.

ಇದನ್ನೂ ಓದಿ:  Alia Bhatt - Ranbir Kapoor: ಅಲಿಯಾ-ರಣಬೀರ್​​ಗೆ ಉಜ್ಜೈನ್ ದೇವಾಲಯಕ್ಕೆ ನೋ ಎಂಟ್ರಿ!

ತಮ್ಮ ಸಂಬಂಧವನ್ನು ಅನಿರೀಕ್ಷಿತ ಹಾಗೂ ಸುಂದರ ಎಂದು ಬಣ್ಣಿಸಿದ ನಟಿ, ಅದು ನನ್ನ ಅದೃಷ್ಟವಾಗಿತ್ತು ಹಾಗೆಯೇ ನಡೆಯಬೇಕೆಂದೇ ಉದ್ದೇಶಿಸಲಾಗಿತ್ತು ಎಂದು ಹೇಳಿದ್ದಾರೆ. ಎಲ್ಲವೂ ಕಾಕತಾಳಿಯವಾಗಿ ಕ್ಷಣಾರ್ಧದಲ್ಲಿ ನಡೆಯಿತು. ವಿಕ್ಕಿ ಹಾಗೂ ಕತ್ರೀನಾ ಡಿಸೆಂಬರ್ 9, 2021 ರಂದು ರಾಜಸ್ಥಾನದಲ್ಲಿ ವಿವಾಹವಾದರು. ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮಗಳು ಏರ್ಪಟ್ಟವು.

ಮುಂಬರುವ ಸೀಸನ್‌ನ ಝಲಕ್ ಹಂಚಿಕೊಂಡ ಕರಣ್
ಕರಣ್ ಜೋಹರ್ ತಮ್ಮ ಮುಂಬರುವ ಸಂಚಿಕೆಯ ಝಲಕ್ ಅನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸಂಭಾಷಣೆಯ ನಡುವೆ ಸುಹಾಗ್ ರಾತ್ (ಮದುವೆಯ ರಾತ್ರಿ) ಕುರಿತು ಮಾತುಕತೆಗಳು ಆರಂಭವಾಯಿತು. ಶೋದಲ್ಲಿ ಒಂದೊಮ್ಮೆ ಆಲಿಯಾ ಸುಹಾಗ್ ರಾತ್ ಎಂಬುದು ಪರಿಕಲ್ಪನೆ ಎಂದು ತಳ್ಳಿಹಾಕಿದ್ದಕ್ಕೆ ಕತ್ರೀನಾ ಪ್ರತಿಕ್ರಿಯಿಸಿದ್ದಾರೆ.

ತನ್ನ ಮದುವೆಯ ರಾತ್ರಿ ನಾನು ತುಂಬಾ ಆಯಾಸಗೊಂಡಿದ್ದೆ ಎಂಬುದಾಗಿ ಆಲಿಯಾ ಹೇಳಿದ್ದರು ನಿಮ್ಮ ವಿಷಯದಲ್ಲಿ ಏನಾಗಿತ್ತು ಎಂದು ಕರಣ್ ಕೇಳುತ್ತಾರೆ ಅದಕ್ಕೆ ಉತ್ತರಿಸಿದ ಕತ್ರೀನಾ ಆ ದಿನವನ್ನು ವಿವಾಹದ ದಿನವೆಂದು ಕರೆಯಬಹುದಲ್ಲವೇ ಎಂದು ಸವಾಲು ಎಸೆಯುತ್ತಾರೆ.

ಕತ್ರಿನಾ ಹಾಗೂ ವಿಕ್ಕಿ ಬೇಡಿಕೆಯ ನಟ ನಟಿಯರು
ಸಿದ್ದಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಜೊತೆಗೆ ಮುಂಬರುವ ಹಾರರ್ ಕಾಮಿಡಿ ಚಿತ್ರ ಫೋನ್ ಭೂತ್‌ನಲ್ಲಿ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರ ನವೆಂಬರ್ 4, 2022 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

ಇದಲ್ಲದೆ ಕತ್ರೀನಾ ನಟ ವಿಜಯ್ ಸೇತುಪತಿ ಅಭಿನಯದ ಮೆರಿ ಕ್ರಿಸ್‌ಮಸ್‌ನಲ್ಲೂ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 23, 2023 ರಂದು ಬಿಡುಗಡೆಯಾಗಲಿರುವ ಸಲ್ಮಾನ್ ಖಾನ್ ಜೊತೆಗೆ ಟೈಗರ್ 3 ನಲ್ಲಿ ಕೂಡ ಕತ್ರೀನಾ ಮುಖ್ಯ ಭೂಮಿಕೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ: Harry Styles: ನಾನು ಏನು ಮಾಡುತ್ತಿದ್ದೆನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ ಎಂದ ಖ್ಯಾತ ಸಿನಿಮಾ ನಟ!

ಇನ್ನು ವಿಕ್ಕಿ ಕೂಡ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್‌ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಸ್ಯಾಮ್ ಬಹದ್ದೂರ್ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಜೀವನವನ್ನು ಆಧರಿಸಿದೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆಯಾಗಿ ವಿಕ್ಕಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
Published by:Ashwini Prabhu
First published: