ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ಮಾಜಿ ಪ್ರಿಯತಮೆ ನಾಯಕಿ!

zahir | news18
Updated:July 29, 2018, 8:14 PM IST
ಸಲ್ಮಾನ್ ಖಾನ್ ಹೊಸ ಚಿತ್ರಕ್ಕೆ ಮಾಜಿ ಪ್ರಿಯತಮೆ ನಾಯಕಿ!
zahir | news18
Updated: July 29, 2018, 8:14 PM IST
-ನ್ಯೂಸ್ 18 ಕನ್ನಡ

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರ 'ಭರತ್' ಚಿತ್ರದಿಂದ ಪ್ರಿಯಾಂಕಾ ಚೋಪ್ರಾ ಮದುವೆ ನೆಪವೊಡ್ಡಿ ಹಿಂದೆ ಸರಿದಿರುವುದು ಗೊತ್ತಿದೆ. ಇದರ ಬೆನ್ನಲ್ಲೇ ದೀಪಿಕಾ ಸೇರಿದಂತೆ ಅನೇಕ ನಟಿಯರ ಹೆಸರು 'ಭರತ್' ಚಿತ್ರದೊಂದಿಗೆ ತಳುಕು ಹಾಕಿಕೊಂಡಿತ್ತು. ಇಲ್ಲಿ ದೀಪಿಕಾ ಮತ್ತು ಅನುಷ್ಕಾ ಶರ್ಮಾ ನಡುವೆ ನೇರ ಪೈಪೋಟಿ ಇದೆ ಎನ್ನಲಾಗಿತ್ತು. ಆದರೆ ಈ ಲೆಕ್ಕಾಚಾರಗಳು ತಲೆಕೆಳಗಾಗುವಂತೆ 'ಭರತ್'​ಗೆ ನಾಯಕಿಯಾಗಿ ಕತ್ರೀನಾ ಕೈಫ್ ಎಂಟ್ರಿಯಾಗಿದೆ.

ಈಗಾಗಗಲೇ ಚಿತ್ರತಂಡವು ನಟಿ ಕತ್ರೀನಾ ಕೈಫ್​ ಅವರನ್ನು ಸಂಪರ್ಕಿಸಿದ್ದು, ಅವರ ಡೇಟ್ಸ್​ ಸಿಕ್ಕಿದ ಬಳಿಕ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಕೆಲ ಮೂಲಗಳು ತಿಳಿಸಿದೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದ್ದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಇಲ್ಲೂ ಜೋಡಿಗಳಾಗಲಿದ್ದಾರೆ.

ನಟಿ ಪ್ರಿಯಾಂಕಾ ಮತ್ತು ನಿಕ್ ಜೋನ್ಸ್​ ನಿಶ್ಚಿತಾರ್ಥ ಸುದ್ದಿಯೊಂದಿಗೆ ಇತ್ತೀಚೆಗೆ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಚಿತ್ರದಿಂದ ಪ್ರಿಗ್ಗಿ ಹಿಂದೆ ಸರಿದಿರುವುದಾಗಿ ಟ್ವೀಟ್​ ಮಾಡಿ ತಿಳಿಸಿದ್ದರು. ಚಿತ್ರದ ನಿರ್ಮಾಪಕರಾದ ಅತುಲ್ ಮತ್ತು ಅಲ್ವಿರಾ ಸಹ ಕತ್ರೀನಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಹೀಗಾಗಿ 'ಭರತ್'​ನಲ್ಲಿ ಬಣ್ಣ ಹಚ್ಚಲು ಒಪ್ಪಿ ಕೊಂಡಿದ್ದಾರೆ. ಸದ್ಯ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಕ್ಯಾಟ್ ಸೆಪ್ಟಂಬರ್ ನಂತರ ಈ ಸಿನಿಮಾಗೆ ಡೇಟ್ಸ್​ ನೀಡಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಸಹ ಕತ್ರೀನಾ ಜೊತೆ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಕೊರಿಯನ್ ಮೂವಿಯಿಂದ ಪ್ರೇರಣೆ ಪಡೆಯಲಾದ ಚಿತ್ರಕಥೆ ಎನ್ನಲಾಗುತ್ತಿರುವ 'ಭರತ್​'ನಲ್ಲಿ​ ಸಲ್ಮಾನ್ ಖಾನ್ ತಂಗಿಯಾಗಿ 'ದೋನಿ' ಚಿತ್ರದ ನಾಯಕಿ ದಿಶಾ ಪಠಾಣಿ ಕಾಣಿಸಲಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...