• Home
  • »
  • News
  • »
  • entertainment
  • »
  • Katrina Kaif: ವಿಕ್ಕಿ-ಕತ್ರಿನಾ ಮದುವೆಯಲ್ಲಿ ಚಪ್ಪಲಿ ಜಗಳ! ನಡೆದಿದ್ದೇನು?

Katrina Kaif: ವಿಕ್ಕಿ-ಕತ್ರಿನಾ ಮದುವೆಯಲ್ಲಿ ಚಪ್ಪಲಿ ಜಗಳ! ನಡೆದಿದ್ದೇನು?

ಕತ್ರೀನಾ ಕೈಫ್-ವಿಕ್ಕಿ ಕೌಶಲ್ ಮದುವೆ ಫೋಟೋ

ಕತ್ರೀನಾ ಕೈಫ್-ವಿಕ್ಕಿ ಕೌಶಲ್ ಮದುವೆ ಫೋಟೋ

ಕಪಿಲ್ ಶರ್ಮಾ ಶೋ ನ ಸಮಯದಲ್ಲಿ, ಕತ್ರಿನಾ ತನ್ನ ಮದುವೆಯಲ್ಲಿ ನಡೆದ ಜಗಳದ ಪ್ರಸಂಗವೊಂದರ ಬಗ್ಗೆ ಬಹಿರಂಗಪಡಿಸಿದರು, ಮತ್ತು ಅವರ ಅತ್ತೆ ಮನೆಯಲ್ಲಿ ತಮಗಿರುವ ಮುದ್ದಿನ ಹೆಸರಿನ ಬಗ್ಗೆ ಸಹ ಹೇಳಿಕೊಂಡರು.

  • Share this:

ಬಾಲಿವುಡ್ ನಲ್ಲಿ (Bollywood) ತುಂಬಾನೇ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದ ಮದುವೆ (Marriage) ಸಮಾರಂಭ ಎಂದರೆ ಅದು ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ನಟಿ ಕತ್ರಿನಾ ಕೈಫ್ (Katrina Kaif) ಅವರದ್ದು. ಇವರ ಮದುವೆ ಹೇಗೆ ನಡೆದಿರುತ್ತದೆ ಅಂತ ಅಭಿಮಾನಿಗಳಿಗೆ  (Fans) ತುಂಬಾನೇ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲಕ್ಕೆ ತಕ್ಕಂತೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಂಡ ಮದುವೆ (Marriage) ಫೋಟೋಗಳನ್ನು ಅಭಿಮಾನಿಗಳು ನೋಡಿ ಕಣ್ತುಂಬಿ ಕೊಂಡಿದ್ದಾರೆ.


ಮದುವೆಯಾಗಿ ಒಂದು ವರ್ಷ ಆಗುತ್ತಾ ಬಂತು ಈಗಲೂ ಅಭಿಮಾನಿಗಳಿಗೆ ಅವರ ಮದುವೆಯಲ್ಲಿನ ಸಂಭ್ರಮ ಹೇಗಿತ್ತು ಅಂತ ತಿಳಿದುಕೊಳ್ಳಲು ಕಾತುರ ಇದ್ದೇ ಇದೆ. ಇಲ್ಲೊಂದು ಸುದ್ದಿಯನ್ನ ನಟಿ ಕತ್ರಿನಾ ಕೈಫ್ ಅವರೇ ಖುದ್ದು ಹಂಚಿಕೊಂಡಿದ್ದಾರೆ ನೋಡಿ. ಇದನ್ನು ಕೇಳಿದರೆ ನೀವು ಶಾಕ್ ಆಗುತ್ತೀರಿ.




ಕಪಿಲ್ ಶರ್ಮಾ ಶೋ ಗೆ ಬಂದ ನಟಿ ಕತ್ರಿನಾ


ಇತ್ತೀಚೆಗೆ ತಮ್ಮ ‘ಪೊಲೀಸ್ ಭೂತ್’ ಚಿತ್ರದ ಪ್ರಚಾರಕ್ಕಾಗಿ ‘ದಿ ಕಪಿಲ್ ಶರ್ಮಾ ಶೋ’ ಗೆ ಬಂದಿದ್ದರು. ಅವರ ಸಹನಟರಾದ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಕೂಡ ಶೋ ನಲ್ಲಿ ಅವರೊಟ್ಟಿಗೆ ಬಂದಿದ್ದರು. ಕಪಿಲ್ ಶರ್ಮಾ ಶೋ ನ ಸಮಯದಲ್ಲಿ, ಕತ್ರಿನಾ ಕೈಫ್ ತನ್ನ ಮದುವೆಯಲ್ಲಿ ನಡೆದ ಜಗಳದ ಪ್ರಸಂಗವೊಂದರ ಬಗ್ಗೆ ಬಹಿರಂಗಪಡಿಸಿದರು, ಮತ್ತು ಅವರ ಅತ್ತೆ ಮನೆಯಲ್ಲಿ ತಮಗಿರುವ ಮುದ್ದಿನ ಹೆಸರಿನ ಬಗ್ಗೆ ಸಹ ಹೇಳಿಕೊಂಡರು.


ಪಂಜಾಬಿ ಜನರು ಯಾವಾಗಲೂ ವಿಭಿನ್ನ ರೀತಿಯಲ್ಲಿ ಹೇಗೆ ಹೆಸರುಗಳನ್ನು ಉಚ್ಛರಿಸುತ್ತಾರೆ. ಮಕ್ಕಳಿಗೆ ಪ್ರೀತಿಪೂರ್ವಕವಾಗಿ ಹೆಸರುಗಳನ್ನು ಸಹ ಇಡುತ್ತಾರೆ ಎಂಬುದನ್ನು ಕೇಳಿ ಕಪಿಲ್ ಆಶ್ಚರ್ಯಚಕಿತರಾದರು.


ಪತಿ ವಿಕ್ಕಿ ಕೌಶಲ್ ಅವರ ಮನೆಯಲ್ಲಿ ಕತ್ರಿನಾಳನ್ನು ಕುರಿತು ನಿಮ್ಮನ್ನು ಹೇಗೆ ಕರೆಯುತ್ತಾರೆ ಅಂತ ಕಪಿಲ್ ಶರ್ಮಾ ಶೋ ನಲ್ಲಿ ಕೇಳಿದರು. ಅದಕ್ಕೆ ಉತ್ತರಿಸಿ ಕತ್ರಿನಾ ಅವರು ನಗುತ್ತಾ ತನ್ನನ್ನು "ಕಿಟ್ಟು" ಎಂದು ಕರೆಯುತ್ತಾರೆ ಅಂತ ಹೇಳಿದರು. ಅವಳ ಈ ಪ್ರತಿಕ್ರಿಯೆಯು ಅಲ್ಲಿದ್ದವರೆಲ್ಲರನ್ನೂ ಸಹ ನಗೆಗಡಲಲ್ಲಿ ತೇಲಿಸಿತು.


ಕತ್ರೀನಾ ಕೈಫ್-ವಿಕ್ಕಿ ಕೌಶಲ್ ಮದುವೆ ಫೋಟೋ


'ಜೂತಾ ಛುಪಾಯಿ' ಆಚರಣೆಯ ಸಮಯದಲ್ಲಿ ಜಗಳವಾಗಿತ್ತಂತೆ!


ಕತ್ರಿನಾ ಅವರಿಗೆ ಒಟ್ಟು ಏಳು ಕಸಿನ್ ಸಹೋದರಿಯರಿರುವುದರಿಂದ ಅವರ ಮದುವೆಯಲ್ಲಿ 'ಜೂತಾ ಛುಪಾಯಿ' ಅಂತ ಹೇಳುವ ಒಂದು ಆಚರಣೆಯ ಸಮಯದಲ್ಲಿ ವಿಕ್ಕಿ ತನ್ನ ಬೂಟುಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೇ ಎಂದು ಅವರನ್ನು ಪ್ರಶ್ನೆಯೊಂದು ಕೇಳಿದರು. ಇದಕ್ಕೆ ಸ್ವಲ್ಪವೂ ತಡ ಮಾಡದೆ ಕತ್ರಿನಾ ಅವರು ತಮ್ಮ ಮದುವೆಯಲ್ಲಿ ನಿಜವಾಗಿಯೂ ದೊಡ್ಡ ಜಗಳವಾಯಿತು ಎಂದು ಹೇಳಿದರು.




"ನನ್ನ ಹಿಂದೆ ಹಠಾತ್ತನೆ ಒಂದು ದೊಡ್ಡ ಗಲಾಟೆ ಆಗುತ್ತಿರುವುದು ಕೇಳಿ ಬಂತು. ನಾನು ಏನು ನಡೀತಾ ಇದೆ ಅಲ್ಲಿ ಅಂತ ತಿರುಗಿ ನೋಡಿದಾಗ ಎಲ್ಲರೂ ಜಗಳವಾಡುತ್ತಿದ್ದರು. ವಿಕ್ಕಿಯ ಬೂಟುಗಳನ್ನು ಅವರವರ ಕಡೆಗೆ ಜೋರಾಗಿ ಎಳೆದುಕೊಳ್ಳುತ್ತಿರುವುದನ್ನು ನಾನು ನೋಡಿದೆ. ಅಲ್ಲಿರುವುದು ಯಾರು ಅಂತ ನೋಡಿದರೆ, ಅಲ್ಲಿ ನನ್ನ ಸಹೋದರಿಯರು ಮತ್ತು ವಿಕ್ಕಿಯ ಸ್ನೇಹಿತರು ಇದ್ದರು. ಅವರು ಅಕ್ಷರಶಃ ನಿಜವಾಗಿಯೂ ಜಗಳವಾಡುತ್ತಿದ್ದರು" ಎಂದು ಹೇಳಿದರು.


ಇದನ್ನೂ ಓದಿ: Priyanka Upendra: ವಿದೇಶದಲ್ಲಿ ಓದಿದ ಪ್ರಿಯಾಂಕ ಮಿಂಚಿದ್ದು ಕನ್ನಡ ಚಿತ್ರರಂಗದಲ್ಲಿ


ಕೊನೆಗೆ ಆ ಜಗಳದಲ್ಲಿ ಯಾರು ಗೆದ್ದರು ಅಂತ ಕೇಳಿದ್ದಕ್ಕೆ ಅವರು "ನನಗೆ ಗೊತ್ತಿಲ್ಲ. ನಾನು ಅದನ್ನು ಎಂದಿಗೂ ಕೇಳಲಿಲ್ಲ. ನಾನು ನನ್ನ ಮದುವೆಯಲ್ಲಿ ತುಂಬಾ ಬ್ಯುಸಿಯಾಗಿದ್ದೆ, ಅದರ ಬಗ್ಗೆ ಕೇಳಲು ತನಗೆ ಎಂದಿಗೂ ಅವಕಾಶ ಸಿಗಲಿಲ್ಲ” ಎಂದು ಕತ್ರಿನಾ ಹೇಳಿದರು.


ವಿಕ್ಕಿಯನ್ನು ಕತ್ರಿನಾ ಮೊದಲ ಬಾರಿ ಎಲ್ಲಿ ನೋಡಿದ್ದರು?


ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ 2018 ರ ರೊಮ್ಯಾಂಟಿಕ್ ಡ್ರಾಮಾ ‘ಮನ್ಮರ್ಜಿಯಾ’ ಚಿತ್ರದ ಟ್ರೈಲರ್ ನಲ್ಲಿ ನಟ ವಿಕ್ಕಿಯನ್ನು ಮೊದಲ ಬಾರಿಗೆ ನೋಡಿದ್ದೆ ಎಂದು ನಟಿ ಹೇಳಿದರು. ವಿಕ್ಕಿ, ಆ ಸಮಯದಲ್ಲಿ, ಮಸಾನ್, ರಾಮನ್ ರಾಘವ್ 2.0 ನಂತಹ ಚಲನಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದ ನಟನಾಗಿದ್ದನು ಎಂದು ಹೇಳಿದರು.


"ನನಗೆ ನೆನಪಿದೆ ನಿರ್ಮಾಪಕ ಆನಂದ್ ಎಲ್ ರೈ ಅವರು ‘ಮನ್ಮರ್ಜಿಯಾ’ ಚಿತ್ರದ ಪ್ರೋಮೋವನ್ನು ನನಗೆ ತೋರಿಸಿದರು ಮತ್ತು ನಾನು 'ಈ ವ್ಯಕ್ತಿ ಯಾರು' ಎಂದು ಕೇಳಿದೆ. ಆ ಸಮಯದಲ್ಲಿ ನಾನು ಅವರಲ್ಲಿ ಪ್ರತಿಭೆ ಇರುವುದನ್ನು ನೋಡಿದೆ” ಎಂದು ನಟಿ ಹೇಳಿದರು.

Published by:Divya D
First published: